ಹಕ್ಕಿ ಕಲಿಸಿದ್ದು
– ಈಶ್ವರ ಭಟ್
ಹಕ್ಕಿನೋಡಿ ಮರುಳಾಗಿ
ಅಂತೆಯೇ ಹಾರಬಯಸಿದೆ
ಬಿದ್ದೆ, ಸಾವರಿಸಿಕೊಂಡು ಎದ್ದೆ.
ಕೈಗಳೇಕೋ ರೆಕ್ಕೆ ಆಗಲೇ ಇಲ್ಲ.
ಲೆಕ್ಕವಿರಿಸಿಕೊಂಡೆ
ಒಂದು ಎರಡು ಅಲ್ಲ ಮೂವತ್ತಮೂರು!
ಕೊನೆಗೆ ದಕ್ಕಿದ್ದೆಷ್ಟು?
ಬರಿಯ ಹಿಕ್ಕೆ!
ಅವು ಹಾಗೇ ಹಾರುವುದಿಲ್ಲ
ತತ್ತಿ ಬಿರಿದೊಡೆಯಬೇಕು
ಮತ್ತೇನೋ ಬಿಸಿ ಮುಟ್ಟಿ
ಹೊಟ್ಟೆ ಚುರುಕ್ಕೆಂದಾಗ
ಗೂಡಿನ ಜಾಗ ಸಾಲುವುದಿಲ್ಲ
ಎನಿಸಬೇಕು.
ಅರಿವಾದಾಗ ಹಾರುವುದು
ಹಾರಿದಂತೆಯೇ ಅರಿವು
]]>




nice one..