ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೆಕ್ಕೆ ಇರದ ಚಿಟ್ಟೆ…

sphoorti girish


ಸ್ಪೂರ್ತಿ ಗಿರೀಶ್

ಅರಳಿದ ಗುಲಾಬಿ  ಎಂಥ ಸಿಹಿ
ನನ್ನ ವಧುವಲ್ಲ ಅವಳು ಪ್ರೇಯಸಿ
ಗೆಳತಿ
ಚೈತನ್ಯ ತುಂಬುವ ಸಂಗಾತಿ
ಅವಳಲ್ಲಿಗೆ ನಾನು ಹಾರಲಾರೆ
ಅರಳಿದ ಹೂ ಅವಳು ಎಂಥ ಸಿಹಿ

butterfly ladyಈಗವರು ಕೈ ಚಪ್ಪಾಳೆ ಬಡಿಯುತ್ತಾ
ಗಟ್ಟಿಯಾಗಿ ಕಿರುಚಿ
ಒಂದೊಂದೆ ಪಕಳೆ ಕಿತ್ತೆಸೆಯುವಂತೆ
ಅವಳ ಮುತ್ತಿಕೊಂಡಿದ್ದಾರೆ
ಹಸಿರು ಹಳದಿ ಮಿಶ್ರಿತ
ದಪ್ಪ ಮೀಸೆಯ ಕಳ್ಳರುಜುಗಾರ
ಸಾವಿರಾರು ಹೂಗಳ ಸಾರ ಕುಡಿದವನು
ಅವನ ದಾಳಿಗೆ ಹೂಗಳು
ನರಳಿ ಸತ್ತ ಸಾಕ್ಷ್ಯ ಇವೆಯಂತೆ
ನನಗ್ಯಾಕೋ ಭಯ
ಗುಲಾಬಿಯೂ ಸತ್ತರೆ

ಕರಿ ಕಣ್ಣಿನ ಠೊಣಪ
ಗೊದ್ದದಂತಿರುವವನು
ಅವನ ಗರಗಸದಂತ ಹಲ್ಲು
ಅವಳ ಸುಕೋಮಲ ಮೈದಳ ಕೊರೆದುಹಾಕುವನು
ನನಗ್ಯಾಕೋ ಭಯ
ಗುಲಾಬಿಯೂ ಸತ್ತರೆ

ಅರಳಿದ ಹೂ ಅವಳು
ಪರಿಮಳವನ್ನು ಕುಡಿದೇ ನಾನು ಬದುಕಿದ್ದೇನೆ
ರೆಕ್ಕೆ ಕಳೆದುಕೊಂಡು ಪಾಪಿ ಹುಳವಾಗಿ
ಅವಳನ್ನು ಕೊಲ್ಲದಿರಿ
ಪಕಳೆಗಳು ಹಗುರ ಉದುರಿ ಹೋದಾಳು
ಕಿರುಚು ದನಿ ಕುಂಟುತ್ತಿದೆ
ಅಯ್ಯೋ
ನನಗ್ಯಾಕೋ ಭಯ ಗುಲಾಬಿಯೂ ಸತ್ತರೆ

‍ಲೇಖಕರು Admin

8 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading