ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೂಮಿಯ ಎರಡು ಪುಟ್ಟ ಪದ್ಯಗಳು

ರೂಮಿ

ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ

1
ಗಾಳಿಯನ್ನು ಉಸಿರಾಡುತ್ತಿರುವೆನೆಂದ
ಮಾತ್ರಕ್ಕೆ ನೀನು
ಬದುಕಿರುವೆನೆಂದು ತಿಳಿದಿರುವೆಯಾ ?
ನಾಚಿಕೆಯಾಗಬೇಕು ನಿನಗೆ
ನೀನು ಆ ಕಾರಣಕ್ಕಾಗಿಯೇ
ಬದುಕಿರುವೆಯಾದರೆ
ಅದೊಂದು ದೊಡ್ಡ ಸಂಗತಿಯೇನಲ್ಲ
ಪ್ರೀತಿಯಿಲ್ಲದೆ ಬದುಕದಿರು
ಆಗ ನಿನಗೆ ಸಾವಿನ ಭಾವನೆ ಇರದು
ಪ್ರೀತಿಯಲ್ಲಿಯೇ ಸತ್ತುಬಿಡು
ಆಗ ನೀನು ಸಾವಿನಲ್ಲೂ ಬದುಕಿರುತ್ತೀಯೆ

2

ಪ್ರೀತಿ ಎಂದರೆ-
ಯಾವಾಗ ದೇವರು
ನಿಮಗೆ ಹೇಳುತ್ತಾನೊ
ʼನಾನು ನಿನಗಾಗಿ
ಎಲ್ಲವನ್ನೂ ಕೊಟ್ಟೆ’ ಎಂದು
ಆಗ ನೀವು ಹೇಳುವಿರಿ
‘ನಾನು ನಿನಗಾಗಿ
ಎಲ್ಲವನ್ನೂ ಬಿಟ್ಟೆ’

‍ಲೇಖಕರು Avadhi

29 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading