ರೂಪಾ ಕೋಟೇಶ್ವರ
ಚಚೌಕಾಕರ ಕನ್ನಡಿಯೊಳಗೆ
ಕಡುಕಪ್ಪು ಕಂಗಳು
ರಪ್ಪೆ ಬಿಚ್ಚಿ, ಹೂ
ಅರಳಿಸಿದಂತೆ ನಗೆ
ಮುಂಜಾವಿನ ಸೋನೆ
ಮಳೆಯಲ್ಲೂ
ನಿಡುಸುಯ್ದ ಬಿಸಿಯುಸಿರು

ಬೆರಳ ತಾಕಿಗೆ
ತಾಗದೀ ಪ್ರತಿಬಿಂಬ
ಹಣೆಯಲ್ಲಿ ಪೂರ್ಣಕುಂಭ
ಕಂಡವರ ಕಣ್ಣಲ್ಲಿ, ಬರೀ ಹುಂಬ
ಎಸಳು ಕಾಮಕ್ಕೀಗ
ಎರಕವಾಗುವ ಹುಚ್ಚು
ತೇಲಿದ ಬಯಕೆಗಳು
ತಾಳಗೆಡಲು
ಹುಸಿ ಕನಸ ನೆಪ
ಹೊರಗೆ ಚಿತ್ತಾರ
ಒಳಗೆ ಭ್ರಮೆ
ಬಿಟ್ಟ ಬಳ್ಳಿಗಳನ್ನು
ನೆಟ್ಟವರಾರೋ?
ಹೊಸತಿಗೆ ಮತ್ತೆ
ಚಂಚಲಗೊಂಡ ಮೋಡ
ಮಂದ್ರ ತಾರಕಗಳ
ಮೇಳಕ್ಕೆ ಮುನಿಸಿಕೊಂಡ
ನಕ್ಷತ್ರ
ಗಂಟು,
ಕನ್ನಡಿಯೊಳಗೂ ಉಂಟು
ಬಿಡಿಸಲಾಗದ ಒಗಟು
ಬಿಂಬ-ಬಿಂಬದೊಳಗೆ
ಬಂಧಿಯಾಗದೇ ಉಳಿದು
ಹೋದ ಗುಟ್ಟು






ಬೆರಳ ತಾಕಿಗೆ
ತಾಗದೀ ಪ್ರತಿಬಿಂಬ
ಹಣೆಯಲ್ಲಿ ಪೂರ್ಣಕುಂಭ
ಕಂಡವರ ಕಣ್ಣಲ್ಲಿ, ಬರೀ ಹುಂಬ
chennaagide Kavana
ಚೆನ್ನಾಗಿದೆ
Nice…
ಇಷ್ಟ ಆಯಿತು !
fine
chenagide
chendada kavana…
Beautiful
“Chanchala gonda moda
mandra taarakagala
melakke munisikonda
NAKSHATRA”
Saalugalu ishtavaaytu.
Rohini Satya.
ಒಳ್ಳೆ ಪದ್ಯ…
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ….