ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ರೀಗಲ್ ಪ್ರಿಂಟರ್ಸ್’ಗೆ ಪ್ರತಿಷ್ಠಿತ ಪುಸ್ತಕ ಪ್ರಾಧಿಕಾರ ಬಹುಮಾನ

ಸುಧಾಕರ ದರ್ಬೆ, ಹಾದಿಮನಿ ಅವರ ಚಿತ್ರ ಹಾಗೂ ವಿನ್ಯಾಸಕ್ಕೆ ಮನ್ನಣೆ

ಬೆಂಗಳೂರಿನ ಅತ್ಯುನ್ನತ ಮುದ್ರಣ ಸಂಸ್ಥೆಯಾದ ರೀಗಲ್ ಪ್ರಿಂಟರ್ಸ್ ಗೆ ೨೦೨೦ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರತಿಷ್ಠಿತ ಬಹುಮಾನವನ್ನು ಘೋಷಿಸಲಾಗಿದೆ.

‘ಬಹುರೂಪಿ’ ಪ್ರಕಾಶನದ ಕಿರಣ್ ಭಟ್ ಅವರ ‘ರಂಗ ಕೈರಳಿ’ ಮುದ್ರಣಕ್ಕಾಗಿ ರೀಗಲ್ ಪ್ರಿಂಟರ್ಸ್ ನ ಮಾಲೀಕರಾದ ವೆಂಕಟೇಶ್ ಅವರಿಗೆ ಬಹುಮಾನ ಘೋಷಿಸಲಾಗಿದೆ.

ಎಸ್ ಗುರುಮೂರ್ತಿ ಅವರ ‘ಕದಂಬರು: ಸಮಗ್ರ ಅವಲೋಕನ’ ಡಾ ಅಮರೇಶ್ ಯತಗಲ್ ಅವರ ‘ಸಾರ್ಥಕ ಬದುಕು’ ಡಾ ತಲ್ಲೂರು ಶಿವರಾಮ ಶೆಟ್ಟಿ ಅವರ ‘ಕಲಾಸಂಚಯ’ ಕೃತಿಗಳು ಕ್ರಮವಾಗಿ ಮೊದಲ ಎರಡನೆಯ ಹಾಗೂ ಮೂರನೆಯ ಮುದ್ರಣ ಸೊಗಸು ಬಹುಮಾನಕ್ಕೆ ಪಾತ್ರವಾಗಿವೆ.

ಮಕ್ಕಳ ಮುದ್ರಣ ಸೊಗಸು ಬಹುಮಾನ ತಮ್ಮಣ್ಣ ಬೀಗಾರ ಅವರ ‘ಫ್ರಾಗಿ ಮತ್ತು ಗೆಳೆಯರು’ ಕೃತಿಯ ಪಾಲಾಗಿದೆ.

ಮುಖಪುಟ ಚಿತ್ರ ವಿನ್ಯಾಸ ಹಾದಿಮನಿ ಅವರ ವಿನ್ಯಾಸದ ‘ಬಯಲೊಳಗೆ ಬಯಲಾಗಿ’ ಹಾಗೂ ಅತ್ಯುತ್ತಮ ಚಿತ್ರ ಕಲೆ ಬಹುಮಾನ ಸುಧಾಕರ ದರ್ಬೆ ಅವರ ಕಲೆಯನ್ನು ಒಳಗೊಂಡ ‘ಹೆಣ್ಣೊಳನೋಟ’ಕ್ಕೆ ಸಂದಿದೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಡಾ ಎಂ ಎನ್ ನಂದೀಶ ಹಂಚೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‍ಲೇಖಕರು avadhi

13 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading