ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾ ಬಂದೋಳ್ ಕವಿತೆ- ಸಿಯೆಸ್ಟ..

ರಾ ಬಂದೋಳ್

ಈ ರಣ ರಣ ಹಗಲಿಗೆ
ಮಾರ್ಕ್ವೆಜ್ ನ ಕಾದಂಬರಿಯ ಪುಟಗಳ ಮಧ್ಯೆ
ಮಕ್ಕಳಾದಿ ಮುದುಕರೆಲ್ಲಾ ಮೆಲ್ಲಗೆ ನಿದ್ದೆಗೆ ಜಾರಿದ್ದಾರೆ

ಹೂವಕ್ಕ ತನ್ನ ಬಿದಿರಿನ ಬುಟ್ಟಿಯಲ್ಲಿ
ನಿದಿರೆಯ ಮಂಪಿರಿನಲ್ಲಿರುವ ಹೂಗಳ
ಕೋಮಲ ಕೆನ್ನೆದಳಗಳಿಗೆ
ಸಣ್ಣಗೆ ನೀರು ಚಿಮುಕಿಸಿ ಎಚ್ಚರಿಸುತ್ತಿದ್ದಾಳೆ

ಸೀಲಿಂಗ್ ಫ್ಯಾನ್ ಕೆಳಗೆ
ಹೆಂಡತಿಯ ತೊಡೆಯ ಮೇಲೆ
ಪವಡಿಸುತ್ತಿರುವ ಮಗಳ ಹಣೆಯ
ಬೆವರ ಹನಿಗಳು
ಮೆಲ್ಲಗೆ ಮೇಲೇರಿ ಮೊಡವಾಗುತ್ತಿವೆ

ಬೆಂಗಳೂರು – ಶಿವಮೊಗ್ಗದ ಮಧ್ಯಾಹ್ನದ ಟ್ರೈನ್ ನಲ್ಲಿ
ಅಪ್ಪ ಅಮ್ಮ ಲಗ್ಗೇಜ್ ನ ಮೇಲೊಂದು ಕೈ ಇಟ್ಟುಕೊಂಡೇ
ಕಿಡಕಿಗೆ ಮುಖ ಮಾಡಿದ್ದಾರೆ, ಆವರ ಬೆಳ್ಳಿ ಕೂದಲನ್ನು
ಗಾಳಿ ಜೋರಾಗಿ ಬೀಸಿ ಸರಳುಗಳ ಮಧ್ಯದಿಂದ
ಕದಿಯಲೆತ್ನಿಸಿ ಸೋಲುತ್ತಿದೆ

ಅಣಬೆಯ ಕೆರೆಯಲ್ಲಿ
ಗುಳುಮುಳುಕಗಳು ಬಿಸಿಲ ಝಳಕ್ಕೆ
ಏದುಸಿರು ಬಿಡುತ್ತ ನಡುಗುತ್ತ
ತೂಗಡಿಸುತ್ತಾ ಮುಳುಗೇಳುತ್ತಿವೆ

ಅಪಾರ್ಟ್ಮೆಂಟ್ ಎದುರಿನ ಸ್ಮಶಾನದ
ಮೂರು ಆರರ ಗೋರಿಗಳಲಿ
ಅರ್ದಂಬರ್ದ ನಿದ್ರೆಯಲಿ
ಸೆಖೆಗೆ ಮಗ್ಗಲು ಆಗಲಾಗದೆ
ಎಲುಬು ಗೂಡುಗಳು ನಲುಗುತ್ತಿವೆ

‍ಲೇಖಕರು avadhi

25 May, 2023

3 Comments

  1. Jayasrinivasa Rao

    What a wonderful poem … so many evocative images!!

    • ರಾ ಬಂದೋಳ್

      Thank you Jayasrinivasa Rao sir

    • ರಾ. ಬಂದೋಳ್

      Thank you Jayasrinivasa Rao sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading