ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ರಾಮ ಲೀಲಾ ನನಗೆ ಇಷ್ಟ ಆಯಿತು…’

ಗಿರಿರಾಜ್ ಬಿ ಎಮ್

ರಾಮ ಲೀಲಾ ಎಲ್ಲರಿಗೂ ಇಷ್ಟವಾಗುತ್ತೋ ಇಲ್ವೊ ಗೊತ್ತಿಲ್ಲ. ನನಗೆ ಇಷ್ಟ ಆಯಿತು.
ಪ್ರೀತಿಯಲ್ಲಿರೋರು, ಇನ್ನಷ್ಟು ಪ್ರೀತಿಸಲು ಇಂತಹ ಒಂದು ಸಿನಿಮ ಸಾಕು. ದೈಹಿಕ ಗುರುತ್ವಾಕರ್ಷಣೆಗೆ ಕೆಳಗೆ ಬೀಳುವ ಇಬ್ಬರು ಕೊನೆಕೊನೆಗೆ ಆತ್ಮಾನುಸಂಧಾನದ ಸಿದ್ದಿಗೇರುತ್ತಾರೆ. ಮೊದಲೇ ಇದು ರೋಮಿಯೋ ಜ್ಯೂಲಿಯಟ್ ಕಥೆ ಅಂತ ಹೇಳಿ, ಇದು ಅದರ 1000ದ ವರ್ಷನ್ ಅಂತ ನಮಗೆ ಸಿನಿಮ ಶುರವಾಗುವುದಕ್ಕಿಂತ ಮೊದಲೇ ಗೊತ್ತಾಗುತ್ತೆ. ಇನ್ನೇನು ಕಥೆ ಅಂತ ಅಂದುಕೊಂಡರೆ, ಭನ್ಸಾಲಿ ತನ್ನ ಮಾಂತ್ರಿಕ ಶಕ್ತಿಯಿಂದ ಪ್ರತಿ ಫ್ರೇಮನ್ನು ಹೋಲಿ ಆಟದ ಸರ್ವ ಬಣ್ಣಗಳಿಂದ ತುಂಬಿಸುತ್ತ ಒಂದು ಮಾಯಾಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಭಾರತೀಯ ದೃಶ್ಯಕಲೆಯೇ ಜೀವ ಬಂದು ಅದು ಮೈತೆಳೆದು ನಮ್ಮ ಮುಂದೆ ಕುಣಿಯುತ್ತದೆ. ಸಂಭಾಷಣೆಯ ಮೊನಚು ಎದೆಗೆ ನಾಟುತ್ತದೆ.

ನನಗೆ ದೀಪಿಕಾಗಿಂತ ರಿಯಾ ಚಡ್ಡಾಳ ಅಭಿನಯವೇ ಹೆಚ್ಚು ಇಷ್ಟ ಆಯಿತು. ಸುಪ್ರೀಯ ಪಾಠಕರನ್ನ ಇಷ್ಟು ವರ್ಷ ಯಾಕೆ ಸರಿಯಾಗಿ ಬಳಸಕೊಳ್ಳಲಿಲ್ಲವೋ? ಅಥವ ಅವರ ಶಾಪ ವಿಮೋಚನೆಗೆ ರಾಮನ ಲೀಲೆಯೇ ಬೇಕಾಯಿತೋ? ಖರ್ಚನ್ನು ಹೇಗೆ ತೆರೆಯ ಮೇಲೆ ತೋರಿಸಬೇಕೆಂಬುದನ್ನು ಕ್ರಿಷ್-3 ಮಾಡೋರು ಈ ಸಿನಿಮ ನೋಡಿ ಕಲಿಯಬೇಕು. ಎಲ್ಲರಿಗೂ ಇಷ್ಟ ಆಗದೇ ಇದ್ದಿರಬಹುದು. ಆದರೆ ನಿಮಗೆ ರಸಾನುಭವದ ವ್ಯಸನವಿದ್ದರೆ, ಭನ್ಸಾಲಿ ನಿಮಗೆ ದೇವರ ಹಾಗೆ ಕಾಣಿಸುತ್ತಾನೆ.

‍ಲೇಖಕರು G

18 November, 2013

2 Comments

  1. bharathi b v

    Nodabeku …

  2. pashupaty

    nanage ishtaa agillaa…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading