
ಗೀತಾ ಹೆಗ್ಡೆ ಕಲ್ಮನೆ
ದಾರಿ ಬಿಡಿ
ದಾರಿ ಬಿಡಿ
ಇಲ್ಲಿ ಸಜ್ಜನರಿಗಷ್ಟೆ
ನಿಲ್ಲಲು ಅವಕಾಶ
ಮಿಕ್ಕಿದವರೆಲ್ಲ
ತೆರಳಿ ತೆರಳಿ.
ಹನುಮನ ಕಹಳೆ
ಗುಡಿಯ ದ್ವಾರದಲಿ
ರಾಮನವಮಿ ದಿನ
ಮೊಳಗುತ್ತಿತ್ತು
ಬಂದ ದಾರಿಗೆ ಸುಂಕ ಇಲ್ಲ
ಪೀಚೇ ಮೂಡ
ಬಂದ ಜನ.
ಮಧ್ಯಾಹ್ನ ಕಳೆಯಿತು
ಬಿಸಿಲ ಧಗೆ
ಸಜ್ಜನರೆಲ್ಲ ಎಲ್ಲಿ?
ಮನದಲಿ ಉಲಿದ
ಭಕ್ತ ಹನುಮ
ಕುಕ್ಕರಗಾಲಲ್ಲಿ ಕೂತು.
ಸರಿ ಇನ್ನೇನು
ಸಾಯಂಕಾಲವಾಯಿತು
ಸಾಲಾಗಿ ಎಲ್ಲ ಪಾತ್ರೆ
ಭರ್ತಿ ಪಾನಕ, ಮಜ್ಜಿಗೆ,
ಒಡನೆ ಕೋಸಂಬರಿ
ಕುತ್ತಿಗೆ ಉದ್ದ
ಆಯಿತು ಹನುಮನದು.
“ಎಲ್ಲ ಎತ್ತ್ ಹೋದರು
ಯಾರೂ ಕಾತಿಲ್ಲೆ”
ಗೊಣಗಾಟ ಸಣ್ಣಗೆ
ರಾತ್ರೀನೂ ಆಯಿತು
ಎಲ್ಲ ಹಳಸಲು
ವಾಸನೆ ಮೂಗಿಗೆ
ಗಮ್ ಅಂತು.
ದುಬೀ೯ನು ಹಾಕಿ
ಶುರುವಾಯಿತು ಹುಡುಕಾಟ
ಒಂದಾದರೂ ಸಜ್ಜನರಿಗಾಗಿ:
ಸಿಗಲಿಲ್ಲ
“ಗೊಂತಿಲ್ಲೆ ಎಂತ್ ಮಾರಾಯ”
ರಾಮ ಉಲಿದ
“ಬಾ ಹೋಪ ನಮ್ಮೂರಿಗೆ.”
ಹೆಗಲೇರಿದ ರಾಮನ ಹೊತ್ತು
ನಡೆದ ಭಕ್ತ ಹನುಮಂತ
“ಮುಂದಿನ ವಷ೯
ಈ ಕಡಿಕೆ
ತಲಿ ಹಾಕಿ ಕೂಡ
ಮಲಗೋದು ಬ್ಯಾಡ
ಎಂತ ಒಬ್ಬರಾದರೂ
ಸಿಗದು ಬ್ಯಾಡ್ವಾ
ಎಲ್ಲ ನಾ ಕಂಡಿದ್ದೇಯಾ
ಇಲ್ಲಿ ಒಳಗೊಂದು
ಹೊರಗೊಂದು”
ಇಬ್ಬರ ಮಾತು.
“ಹಾಂಗೆ ವಿಚಾರ ಮಾಡಿ
ಇಲ್ಕಾಣಿ
ನಮ್ಮ ರಾವಣನೆ
ಎಷ್ಟೋ ವಾಸಿ
ಯಾಕಂತ್ರ್ಯಾ
ಸೀತಮ್ಮನ
ತಕುಹೋಗಿ ಸುರಕ್ಷಿತವಾಗಿ
ಅಸೋಕವನದಾಗೆ ಇಟ್ಟ
ಈ ಜನರ ಕೈಗೆ ಸಿಕ್ಕರೆ
ನನ್ನಪ್ಪನಾಣೆಗೂ
ಸೀತಮ್ಮನ ಕಥೆ ಅಟೆವಾ!”
“ನಿಮ್ಮ ಹಬ್ಬ
ಮಾಡುವ ಕಿಷ್ಕಿಂದೆ ತಾವ
ಮಾಡ್ಕಳ್ಳಿ ಇಲ್ಲಿ ಜನ
ಮೈಕ್ ಹಾಕ್ಕಂಡಿ
ಕುಡಿಲಿ ಪಾನಕ
ಕಲಬೆರಕೆ ಹಾಲಿನ ಮಜ್ಜಿಗೆ
ಕುಣಿಲಿ ಇಷ್ಟ ಬಂದಾಗೆ
ನೀವ್ ತಲಿ
ಬಿಸಿ ಮಾಡ್ಕಬೇಡಿ…...
……………………..





‘ನಿಮ್ಮ ಹಬ್ಬ
ಮಾಡುವ ಕಿಷ್ಕಿಂದೆ ತಾವ
ಮಾಡ್ಕಳ್ಳಿ’, 🙂 ಇಷ್ಟವಾಯಿತು ಮೇಡಮ್…