‘ರಾಬರ್ಟ್’ ಲೆಕ್ಕಾಚಾರ…

ಕೆ ಶಿವು

ಕರ್ನಾಟಕ, ತೆಲಂಗಾಣ ಮತ್ತು ಆಂದ್ರ ಪ್ರದೇಶಗಳಲ್ಲಿ Roberrt ಚಲನಚಿತ್ರವನ್ನು ಹಾಕಿರುವ ಥಿಯೇಟರುಗಳು ಮತ್ತು ಮಲ್ಟಿಪ್ಲೆಕ್ಸ್ ಮಾಲ್‌ಗಳೆಲ್ಲವೂ ಒಟ್ಟು 1596. ಅವುಗಳಲ್ಲಿ ಒಟ್ಟಾರೆ ಒಂದು ದಿನದ ಪ್ರದರ್ಶನಗಳ ಸಂಖ್ಯೆ: 3889. ಒಂದು ದೊಡ್ಡ ಥಿಯೇಟರಿನಲ್ಲಿ ಒಂದು ಸಾವಿರ ಆಸನಗಳಿದ್ದಲ್ಲಿ ಚಿಕ್ಕ ಥಿಯೇಟರುಗಳಲ್ಲಿ 500-600 ಇರಬಹುದು. PVR, Inax, ಇನ್ನಿತರ ಮಲ್ಟಿಪ್ಲೆಕ್ಸ್ ಸ್ಕೀನ್‌ಗಳಲ್ಲಿನ ಆಸನಗಳ ಸಂಖ್ಯೆ ಅತಿ ಹೆಚ್ಚು ಎಂದರೆ 350, ಕಡಿಮೆಯೆಂದರೆ 150. Gold class, Diamond class ನಂತ ದುಬಾರಿ ಸ್ಕ್ರೀನ್ ನಲ್ಲಿ ಹೆಚ್ಚೆಂದರೆ 50 ಆಸನಗಳಿರಬಹುದು.

ಇವುಗಳೆಲ್ಲವುಗಳ ಆಸನಗಳನ್ನು ಒಟ್ಟಾಗಿ ಮಾಡಿದರೆ ಅಂದಾಜಿನಲ್ಲಿ ಸುಮಾರು ಒಂದು ಥಿಯೇಟರ್ ಅಥವಾ ಮಾಲ್ ಸ್ಕ್ರೀನ್‌ನಲ್ಲಿ 400 ಆಸನಗಳು ಅಂತ ಅಂದಾಜಿಸೋಣ. ಇನ್ನೂ ಟಿಕೆಟ್ ಬೆಲೆಯನ್ನು ನೋಡಿದಾಗ ಇವತ್ತು ಮೊದಲ ದಿನ ಅತಿ ಹೆಚ್ಚು ಮಾಲ್‌ಗಳಲ್ಲಿ Gold, Daimand class 800 ರೂಪಾಯಿಗಳಿದ್ದರೆ ಮಧ್ಯಮದಲ್ಲಿ Rs:320-500 ವರಗೆ ಇದೆ. ಥಿಯೇಟರುಗಳಲ್ಲಿ ಕಡಿಮೆ (ಬೆಂಗಳೂರು ಬಿಟ್ಟು ಇತರ ಚಿಕ್ಕ ನಗರಗಳಲ್ಲಿ Rs:60) 70, 80 ಶುರುವಾಗಿ 150 ರವರೆಗೆ ಇದೆ.

ಇವುಗಳನ್ನೆಲ್ಲಾ ಸುಮ್ಮನೇ ಒಂದು ಅಂದಾಜಿನ ಪ್ರಕಾರ ಸರಾಸರಿ ಮಾಡಿದಾಗ ಒಂದು ಟಿಕೆಟ್ ಬೆಲೆ Rs:100 ಅಂದುಕೊಳ್ಳೋಣ ಈಗ ಮುಖ್ಯ ಲೆಕ್ಕಕ್ಕೆ ಬರೋಣ. ಒಟ್ಟು ಸ್ಕ್ರೀನ್ ಸಂಖ್ಯೆ: 1596, ಒಟ್ಟು ಪ್ರದರ್ಶನಗಳ ಸಂಖ್ಯೆ ಒಂದು ದಿನದಲ್ಲಿ: 3889 ಇವುಗಳಲ್ಲಿನ ಸರಾಸರಿ ಆಸನಗಳ ಸಂಖ್ಯೆ: 400 ಒಂದು ಟಿಕೆಟ್ ಬೆಲೆ ಅಂದಾಜಿನಲ್ಲಿ ಸರಾಸರಿಯಲ್ಲಿ Rs:1003889 X 400 X 100 =15,55,60,000 ಅಂದರೆ ನಮ್ಮ ‘ರಾಬರ್ಟ್’ ಚಲನಚಿತ್ರ ಒಂದು ದಿನಕ್ಕೆ ಒಟ್ಟಾಗಿ ಮಾಡಿದ box office gross collection: ಹದಿನೈದು ಕೋಟಿ ಐವತ್ತೈದು ಲಕ್ಷದ ಅರವತ್ತು ಸಾವಿರ.

ಇದರಲ್ಲಿ ಮತ್ತೊಂದು ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪ ಅತ್ತ ಇತ್ತ ಈ ಮೊತ್ತವನ್ನು ಅಂದಾಜಿಸಬಹುದು. ಏನೆಂದರೆ ಟಿವಿ, youtube ನವರು, ಆ ಚಿತ್ರತಂಡದವರು ಪೂರ್ತಿ ಹೌಸ್ ಪುಲ್ ಅಂತ ಹೇಳಿದರೂ ಕೆಲವೊಂದು ದೂರದ ಥಿಯೇಟರುಗಳು ಮತ್ತು ಮಾಲ್ ಸ್ಕ್ರೀನ್ ನಲ್ಲಿ ಕೆಲವೊಂದು ಶೋಗಳಲ್ಲಿ 10-20% ಆಸನಗಳು ಖಾಲಿ ಉಳಿದಿರಬಹುದು. ಈ 10-20% ಖಾಲಿ ಆಸನಗಳಲ್ಲಿ ಆಗದ ಕಲೆಕ್ಷನ್ ಅಂದಾಜಿನಲ್ಲಿ Rs: 55,60,000 (ಐವತ್ತೈದು ಲಕ್ಷದ ಅರವತ್ತು ಸಾವಿರ ರೂಪಾಯಿಗಳು) ಕಳೆದರೂ ಕೊನೆಗೆ ಹದಿನೈದು ಕೋಟಿಯಂತೂ ಉಳಿಯುತ್ತದೆ.

ಈ ರೀತಿ (ಗುರುವಾರ, ಶುಕ್ರವಾರ, ಶನಿವಾರ, ಭಾನುವಾರ) ವಾರಾಂತ್ಯದ ನಾಲ್ಕು ದಿನಕ್ಕೆ 4 x 15,00,00,000= 60,00,00,000 (ಅರವತ್ತು ಕೋಟಿಯಾಗುತ್ತದೆ) ಇದರಲ್ಲಿ ಮಾಲ್ ನವರ ಪಾಲು, ಸರ್ಕಾರದ Tax, ಥಿಯೇಟರಿನವರ ಬಾಡಿಗೆ ಅಥವ ಅವರ ಪಾಲು ಹೋಗಿ ನಿರ್ಮಾಪಕನಿಗೆ ಉಳಿಯುವ ಮೊತ್ತವೆಷ್ಟು ಅಂತ ನನಗೆ ಗೊತ್ತಿಲ್ಲ. ಇನ್ನೂ ಒಂದು ಸರಾಸರಿ ಟಿಕೆಟ್ ಬೆಲೆ Rs:80 ಮಾಡಿದರೆ ನಾಲ್ಕು ದಿನಕ್ಕೆ 49-50 ಕೋಟಿಯಾಗುತ್ತದೆ. ಬದಲಾಗಿ ಒಂದು ಸರಾಸರಿ ಟಿಕೆಟ್ ಬೆಲೆ Rs:120 ಮಾಡಿದರೆ ನಾಲ್ಕು ದಿನಕ್ಕೆ 72 ಕೋಟಿಯಾಗುತ್ತದೆ.

ಕೊನೆಗೂ ಬಿಕಾಂ ಓದಿದ್ದು ಈಗ ಕೆಲಸಕ್ಕೆ ಬಂತು! ಅಂದ ಹಾಗೆ ನಾನು ಮೊದಲ ಮೂರು ದಿನ ನಾನು ದೊಡ್ಡ ಸ್ಟಾರುಗಳ ಸಿನಿಮಾವನ್ನು ನೋಡುವುದಿಲ್ಲ. ಏಕೆಂದರೆ ನನಗೆ ಮೊದಲ ಮೂರು ದಿನದ ಅಭಿಮಾನಿಗಳ ಸಂಭ್ರಮದಲ್ಲಿ ನನಗೆ ಸಿನಿಮಾದ ದೃಶ್ಯ ಮತ್ತು ಶಬ್ದ ಸರಿಯಾಗಿ ಕೇಳಿಸುವುದಿಲ್ಲ. ಅದಕ್ಕಾಗಿ ಅವರೆಲ್ಲ ಆರ್ಭಟ ಮುಗಿದ ಮೇಲೆ ಸೋಮವಾರ, ಮಂಗಳವಾರ ಒಂದು ಉತ್ತಮವಾದ ಸ್ಕ್ರೀನ್ ಅದರಲ್ಲಿ ಅತ್ಯುತ್ತಮವಾದ ಸೌಂಡ್ ಕೇಳಿಸುವಂತ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡುತ್ತೇನೆ.

ಸಿನಿಮಾ ಅಂದರೆ ನನಗೆ ಕೇಳುವ ಅತ್ಯುತ್ತಮ ಶಬ್ದದ ಸಹಾಯದೊಂದಿಗೆ ನೋಡುವ ದೃಶ್ಯ ಮಾದ್ಯಮ. ಇವತ್ತು ನನಗೆ ನೋಡುವ ದೃಶ್ಯಗಳು ತಾಂತ್ರಿಕವಾಗಿ ಯಾವ ಮಟ್ಟಿಗೆ ನನ್ನನ್ನು ಬೆರಗುಗೊಳಿಸಿ ತನ್ಮಯನಾಗುವಂತೆ ಮಾಡುತ್ತವೆ ಮತ್ತು ಆದಕ್ಕೆ ತಕ್ಕಂತೆ ಇವತ್ತಿನ ಹೊಸ ತಂತ್ರಜ್ಞಾನದಲ್ಲಿ ಒಂದು ಸಣ್ಣ ಗುಂಡು ಪಿನ್ ಬಿದ್ದರೂ ಕೇಳಿಸುವಂತ ಹೊಸ ಸೌಂಡ್ ಸಿಸ್ಟಮ್ ಯಾವ ಸಿನಿಮಾ ಮಾಲ್ ಅಳವಡಿಸಿಕೊಂಡಿದೆ ಅಂತ ತಿಳಿದು ಅದನ್ನು ಹುಡುಕಿಕೊಂಡು ಹೋಗಿ ಸಿನಿಮಾ ನೋಡುವ ಸಾಮಾನ್ಯ ಪ್ರೇಕ್ಷಕ ನಾನು.

ಇವೆರಡರ ಜೊತೆಗೆ ಉತ್ತಮವಾದ ಕಥೆ ಬಿಗಿಯಾದ ಚಿತ್ರಕಥೆ, ಛಾಯಾಗ್ರಹಣ, ಅತ್ಯುತ್ತಮವಾದ ಸಂಕಲನ, ನಟನೆ, ಇತ್ಯಾದಿಗಳೆಲ್ಲವನ್ನು ಗಮನಿಸುತ್ತಾ ಸಿನಿಮಾವನ್ನು ಅಸ್ವಾದಿಸುವ ಪ್ರೇಕ್ಷಕ ನಾನು. ಮತ್ತೆ ಚಿತ್ರ ಚೆನ್ನಾಗಿದ್ದಲ್ಲಿ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತೇನೆ. ಸುಮಾರು ಅಥವಾ ಚೆನ್ನಾಗಿಲ್ಲದಿದ್ದಲ್ಲಿ ಚೆನ್ನಾಗಿಲ್ಲವೆನ್ನುವ ವಿಚಾರವನ್ನು ಯಾರೊಂದಿಗೆ ಹಂಚಿಕೊಳ್ಳುವುದಿಲ್ಲ. ಏಕೆಂದರೆ ನಾನು ವಿಮರ್ಶಕನಲ್ಲ.

‍ಲೇಖಕರು Avadhi

March 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: