ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾತ್ರಿ ಯಾರೋ ಬಿಟ್ಟು ನಡೆದ ಮುತ್ತಿನ ಗುರುತು..

ವೇಶ್ಯೆಯೊಬ್ಬಳ ಆತ್ಮಕಥೆ

sandeep eshanya

ಸಂದೀಪ್ ಈಶಾನ್ಯ 

ವರುಷದ ಹಿಂದೆಯೆ ಬರೆದು ಮುಗಿದಿದೆ
ವೇಶ್ಯೆಯೊಬ್ಬಳ ಆತ್ಮಕಥೆ. ಬರೆಯಬೇಕಿದೆ
ಇನ್ನೂ ಮೊದಲ ಎರಡು ಪುಟಕೆ
ಮುನ್ನುಡಿ ಮತ್ತು ಅವಳದೇ ಸ್ವಲ್ಪ ಮಾತು
ಅದೊಂದು ಅಪರೂಪದ ಘಳಿಗೆ
ಅಯ್ಯ ಕವಿಗಳ ಅದೆಷ್ಪೋ ಕವಿತೆ ಬರೆದವರು ನೀವು
ಇಂದು ಖಾಲಿ ಕುಳಿತ್ತಿದ್ದೀರಿ ಬನ್ನಿ
ಇವಳಿಗೂ ನಾಲ್ಕು ಸಾಲುಗಳ ಹೊತ್ತು ತನ್ನಿ

thumb impressionವಿಳಾಸ ಮರೆತಿದೆಯೆ ನಿಮಗೆ
ನಿಮ್ಮಲೊಬ್ಬನನ್ನು ಕೇಳಿ ತಿಳಿಯಿರಿ ಅವನು
ಬಂದಿರಬಹುದು ಅವಳೊಂದಿಗೆ ಸುಖಿಸಲು

ಊರ ಗರತಿಯರ ಶಾಪಗಳಿಸುವ ಈ ಬೀದಿ ಚಂದ್ರನನ್ನು
ಕಂಡು ಮುಖ ತಿರುವಬೇಡಿ
ಇವಳು ಹೆಣ್ಣೆ ಇವಳಿಗೂ ಒಂದು ಮನಸ್ಸಿದೆ
ಆದರೆ ಕುಳಿತು ವಿಚಾರಿಸುವವರಿಲ್ಲ
ನಿಮ್ಮ ಈ ತಾತ್ಕಲಿಕ ಮಡದಿಯ ಕುರಿತು
ನೀವಾಗಬಯಸುವುದು ಕೇವಲ ಅರ್ಧ ತಾಸಿನ ಅತಿಥಿ

ಯಾರಿಗೂ ತಿಳಿಯದು ಅದೆಷ್ಟೋ
ಗಂಡಸರ ಗುಟ್ಟುಗಳಿವೆ ಇವಳ ಕಿವಿಯೊಳಗೆ

ಬಸ್ಸ್ಟಾಂಡು ರೈಲ್ವೆಸ್ಟೇಷನ್ನು ದೂರದ ವಸತಿಗೃಹವೇ
ಅವಳ ಆವಾಸಸ್ಥಾನ
ಅವಳು ನಿಮ್ಮನು ಹುಡುಕುವುದಿಲ್ಲ ನೀವೆ
ಅವಳನ್ನು ಅರಸಿ ನೆಡೆಯಬೇಕು
ಹಾಗೆ ಬಂದವರನ್ನು ಅವಳು ಮೋಸಗೊಳಿಸುವುದಿಲ್ಲ
ಬದಲಿಗೆ ತಕ್ಕ ನ್ಯಾಯ ಒದಗಿಸುತ್ತಾಳೆ
ಆಕೆ ಪಡೆವ ಅಲ್ಪ ಕಾಣಿಕೆಗೆ

ಎವೆ ಮುಚ್ಚಿದರೆ ಕಾಣ ಸಿಗುತ್ತಿದೆ ತನ್ನದೆ ಹಳೆಯ ನೆನಪು
ಬಾಲ್ಯದಲ್ಲಿ ಮನೆಯ ಮುಂದೆ ಕಟ್ಟಿದ ಮರಳು ಗೂಡು
ಮರಕೆ ತೂಗು ಹಾಕಿದ ಅಮ್ಮನ ಸೀರೆಯ ಜೋಕಾಲಿ

ನಾನು ಆಗಾಗ ಬೇಕೆನ್ನುವ ಪೂರ್ವ ಯೋಜನೆ
ಆದರೆ ಈಗ ಆಗಿರುವುದೇನು?
ಬದಲಿಸುವುದೆ ಒಂದು ಘಟನೆ ಪೂರ್ತಿ ಬದುಕನು

ಬೆಳಗೆದ್ದು ಮತ್ತೆ ಅಣಿಯಾಗುವಾಗ ಮೈ ತುಂಬಾ
ರಾತ್ರಿ ಯಾರೋ ಬಿಟ್ಟು ನೆಡೆದ ಮುತ್ತಿನ ಗುರುತು
ತೊಳೆದರೆ ಮೈ ಮೇಲಿನ ಗುರುತು ಹೋದೀತು
ಮತ್ತೆ ಮುಕ್ತ ಮನಸ್ಸಿನ ಗತಿಯೇನು?

ಇವಳೊಂದಿಗೆ ದೇಹ ಹಂಚಿಕೊಂಡವರ್ಯಾರು
ಮನಸ್ಸು ಹಂಚಿಕೊಳ್ಳುವ ತವಕ ತೋರುತ್ತಿಲ್ಲ ಯಾಕೆ?

ದೂರದಿಂದಲೆ ಇವಳನ್ನು ಕಂಡು ಮುಟ್ಟಲಾಗದೆ
ಭಯದಿಂದ ತ್ಯಜಿಸಿ ಹೊರಟವರರೆಷ್ಟೋ?

ಕೇಳಿಬರುತ್ತಿದೆ ಒಳಗಿನಿಂದ ಅವಳದೆ
ಮಗುವಿನ ಅಳುವಿನ ಕರೆ
ನಾಳೆ ಬೆಳೆದು ತಂದೆ ಕೇಳಿದರೆ
ಅವನನ್ನು ಹುಡುಕಿ ತರುವುದು ಎಲ್ಲಿ??

‍ಲೇಖಕರು Admin

24 May, 2016

1 Comment

  1. Sangeeta Kalmane

    ನಾನೊಂದು ಅಣಿಮುತ್ತು
    ಚೊಕ್ಕ ಚಿನ್ನದಂತೆ
    ಬೆಳೆಸಿದಳು ಹಡೆದವ್ವ
    ದೇಹ ಬೆಳೆದು ಸೊಂಪಾಗಿ
    ಕಂಡವರ ಕಣ್ಣು ಕುಕ್ಕುವ ಹಾಗಾದೆ
    ನಡೆದಾಡುವ ದಾರಿ ಬೀದಿಗಳ
    ಹಾದು ಹೋಗುವ ಹುಡುಗಳ ಮಾತು
    ಹಾಯ್ ಸ್ವೀಟಿ,
    ಹಾಯ್ ಬ್ಯೂಟಿ
    ಹೌ ಬ್ಯೂಟಿಫುಲ್ ಯು ಆರ್
    ಅಂದಾಗ ಯೌವ್ವನದ ಮಜಲು
    ತುಂಬು ಅಂಗಾಂಗ
    ಝಲ್ಲೆಂದು ಒಳಗೊಳಗೆ
    ಕುಣಿದು ಕುಪ್ಪಳಿಸಿದ ಮನಕೆ
    ಏನು ಗೊತ್ತು ಗಂಡಸರ ಒಳಗುಟ್ಟು.

    ಬಣ್ಣನೆಯ ಮಾತಿಗೆ ಕರಗಿದೆ
    ನೂರು ಕನಸುಗಳ ಹೊತ್ತು
    ತಲೆ ಗಿರಗಿಟ್ಟಿ ಅವನ ಮಾತಿಗೆ
    ಆತ ಅವಕಾಶವಾದಿ
    ತಿಂದುಂಡು ತೇಗಿ ತನ್ನ ತೆವಲಿಗೆ
    ನನ್ನ ತಿಥಿ ಹಾಡಿ
    ಮಾರಿಬಿಟ್ಟ ಮೂರು ಕಾಸಿಗೆ
    ಅದೇ ಮಂಚದ ಕಾಲಿಗೆ ಕಟ್ಟಿ.
    ಇಂದು ತೆವಲು ತೀರಿಸಿಕೊಂಡವರದೆಷ್ಟೊ
    ನನಗೇ ಗೊತ್ತಿಲ್ಲ
    ಯಾರೂ ನನಗೆ ಲೆಕ್ಕಕ್ಕಿಲ್ಲ
    ನನ್ನ ನೋವಿಗೆ ಯಾರೂ ಕಿವಿಗೊಟ್ಟಿಲ್ಲ
    ನಾನೇಕೆ ಲೆಕ್ಕವಿಡಲಿ?
    ಇಂದು ಮಂಡೂಕ ಕೂಪದಲ್ಲಿ
    ಹುಳ ನೆಣಗಳ ಜುಯ್ಯಗುಟ್ಟುವ
    ನರಕ ಕೂಪದಲ್ಲಿ ಒದ್ದಾಡುತಿದೆ
    ಸುಃಖ ಕೊಟ್ಟ, ಮನ ತಣಿಸಿದ ಈ ದೇಹ
    ಯಾರಾದರೂ ಚಿಕಿತ್ಸೆ ಕೊಡಿಸುವಿರಾ?
    ಏಕೆಂದರೆ ನನ್ನ ಕೈ
    ಖಾಲಿ, ಖಾಲಿ ಖಾಲಿ!

    ಸಮಾಜದಲ್ಲಿ ವೇಶ್ಯೆರಿಗೊಂದು ಸ್ಥಾನ ಕಲ್ಪಿಸಿ ಕೊಡಬೇಕು. ಅವರನ್ನು ಈ ಕೂಪದಿಂದ ಹೊರಗೆ ತರಭೇಕು. ಇದೇ ತರ ಅದೆಷ್ಟು ವೆಶ್ಯೆಯರ ಕಥೆಯಿರಬಹುದು ಊಹಿಸಿ.

Trackbacks/Pingbacks

  1. ರಾತ್ರಿ ಯಾರೋ ಬಿಟ್ಟು ನಡೆದ ಮುತ್ತಿನ ಗುರುತು.. | – Sandhyadeepa…. - […] http://avadhimag.online/2016/05/24/%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf-%e0%b2%af%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading