ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರಾತ್ರಿಗಳ ಮಾರಿಕೊಂಡು ಕನಸುಗಳ ಕೊಳ್ಳುವವರು' ಶಾಂತಿ ಅಪ್ಪಣ್ಣ ಕವನ

ಶಾಂತಿ ಅಪ್ಪಣ್ಣ

ನಾವು ……
ರಾತ್ರಿಗಳ ಮಾರಿಕೊಂಡು
ಕನಸುಗಳ ಕೊಳ್ಳುವವರು ..
ಹಗಲ ಬೆಳಕಿಗೆ ಕಣ್ಮುಚ್ಚಿಕೊಂಡು
ಕತ್ತಲಲಿ ಬೆತ್ತಲಾಗುವವರು
 
ನಾವು …
ಬೀದಿ ದೀಪದ ನೆರಳಿಗೆ
ಬಣ್ಣ ತುಂಬುವವರು ..
ಬೆವರು ನೆತ್ತರು ಬಸಿದು
ಬೆವರ ಈಂಟುವವರು

​ನಾವು …
ಹಿಮಗಲ್ಲಿನೆದೆಯವರು
ಯಾರದೋ ದಾಹಕ್ಕೆ ನೀರಾಗುವರು ..
ಕಿಬ್ಬೊಟ್ಟೆಯಾಳದಲಿ
ಆತ್ಮವನು ಹೂತವರು ​
 
ನಾವು..
ಬೇಗುದಿಯ ಬೆಂಕಿಯಲಿ
ಬೂದಿಯಾಗದೆ ಉಳಿದವರು
ಒಡಲ ದಳ್ಳುರಿಯಲಿ
ಅವಮಾನಗಳ ಸುಡುವವರು ..
 
 
ನಾವು ..
ಛಂದ ಬಂಧಗಳ ಗುಂಗು ಮರೆತು
ಅಭಂಗವಾದವರು …
ಮಾನ ಪ್ರಾಣದ ಹಂಗು ತೊರೆದು
ನಿರ್ವಾಣವಾದವರು .
 

‍ಲೇಖಕರು avadhi

18 April, 2014

3 Comments

  1. Praveen Kulkarni

    Shanti avare tumba chennagide

  2. mmshaik

    nice very nice..shanti avare..!!!

  3. Aravind

    Simple yet very nice, as always, Shanthi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading