ರಾಜೇಂದ್ರ ಚೆನ್ನಿ ಓದಿದ Know More English…

No or Know

ಶಿವಕುಮಾರ ಮಾವಲಿ ಸೊಗಸಾದ ಕೃತಿಯೊಂದಿಗೆ ನಮ್ಮ ಮುಂದೆ ಬಂದಿದ್ದಾರೆ.

ಇಂಗ್ಲಿಷ್ ಕಲಿಕೆ ಹೀಗೂ ಇರಬಹುದಾ ಎಂದು ವಿಸ್ಮಯ ಹುಟ್ಟುವ ಹಾಗೆ..

‘ವಿಜಯ ಕರ್ನಾಟಕ’ದಲ್ಲಿ ಪ್ರಕಟವಾದ ಅಂಕಣ ಬರಹ ಇದು

ಇಲ್ಲಿರುವುದು no ಇಂಗ್ಲಿಷ್ ಅಲ್ಲ

know ಇಂಗ್ಲಿಷ್

ಈ ಕೃತಿಗೆ ಮುನ್ನುಡಿ ಬರೆದ ರಾಜೇಂದ್ರ ಚೆನ್ನಿ ಅವರ ನೋಟ ಇಲ್ಲಿದೆ-

ರಾಜೇಂದ್ರ ಚೆನ್ನಿ

‘ನೊ ಮೋರ್ ಇಂಗ್ಲಿಷ್’ ಕೃತಿಯ ಶೀರ್ಷಿಕೆಯಿಂದ ಕೆಲವು ವಿದ್ಯಾರ್ಥಿಗಳು ಮೋಸ ಹೋಗಿ ಸದ್ಯ ಇನ್ನು ಇಂಗ್ಲಿಷ್ ಎನ್ನುವ ತರಲೆ ಇಲ್ಲ ಎಂದು ‘ನೊ ಮೋರ್’ ಘೋಷಣೆ ಕೂಗುವ ಮೊದಲು ಅದು ‘ Know More English’ ಅಂದರೆ ಇಂಗ್ಲಿಷ್ ಬಗ್ಗೆ ಇನ್ನೂ ಹೆಚ್ಚು ಅರಿಯಿರಿ ಎಂದು ಹೇಳುವ ಕೃತಿಯಿದು ಎಂದು ಹೇಳಿಬಿಡುವುದು ಸೂಕ್ತ. ಇಂಗ್ಲಿಷ್ ಭಾಷೆಯ ಬಗ್ಗೆ ನಾವು ಭಾರತೀಯರು ಶತಮಾನಗಳಿಂದ ವಿರೋಧಾಭಾಸದ ಧೋರಣೆಯನ್ನು ಹೊಂದಿದ್ದೇವೆ.

ಒಂದು ಕಡೆ ಅದು ಅಧಿಕಾರದ ಭಾಷೆ, ಅವಕಾಶಗಳ ಭಾಷೆ ಮತ್ತು ಸಮಾಜದಲ್ಲಿ ಹೆಗ್ಗಳಿಕೆ ತರುವ ಭಾಷೆಯೆಂದು ಅದನ್ನು ಬಯಸುತ್ತೇವೆ. ಇನ್ನೊಂದು ಕಡೆಗೆ ಅದು ಕನ್ನಡದ ಸ್ಥಾನವನ್ನು ಕಸಿದುಕೊಳ್ಳುತ್ತಿದೆ, ಸಮಾಜದಲ್ಲಿ ಇನ್ನೊಂದು ಪ್ರಬಲವಾದ ಜಾತಿ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ, ಅದು ಕಲಿಕೆಯ ಮಾಧ್ಯಮವಾಗಿರಬಾರದು ಎಂದು ತಿರಸ್ಕರಿಸುತ್ತೇವೆ. ಈ ಇಬ್ಬಂದಿತನದಿಂದಾಗಿ ಇಂಗ್ಲಿಷ್ ಕಲಿಯುವುದರಲ್ಲಿ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅನೇಕ ವಿದ್ವಾಂಸರು, ಬರಹಗಾರರು ಇಂಗ್ಲಿಷ್ ಈಗ ಭಾರತೀಯ ಭಾಷೆಗಳಲ್ಲಿ ಒಂದು ಎಂದು ಹೇಳುತ್ತಿದ್ದಾರೆ.

ಈ ಕೃತಿಯು ತುಂಬಾ ಲವಲವಿಕೆ ಹಾಗೂ ಆಕರ್ಷಕ ಶೈಲಿಯನ್ನು ಬಳಸಿಕೊಂಡು ಇಂಗ್ಲಿಷ್ ಭಾಷೆಯ ಕೆಲವು ವಿಶಿಷ್ಟ ಸಂಗತಿಗಳ ಬಗ್ಗೆ ವಿವರಗಳನ್ನು ನೀಡುತ್ತದೆ. ಇಂಗ್ಲಿಷ್ ಭಾಷೆಯಷ್ಟು ಜಗತ್ತಿನ ಇತರ ಭಾಷೆಗಳಿಂದ ಪದಗಳನ್ನು ಸ್ವೀಕರಿಸಿದ ಇನ್ನೊಂದು ಭಾಷೆಯು ಇಲ್ಲ. ಇದಕ್ಕೆ ಈ ಭಾಷೆ ಕಾರಣವಲ್ಲ. ಆ ಭಾಷೆಯಾಡುವ ಜನರು ಚರಿತ್ರೆಯಲ್ಲಿ ಭಾಗಿಗಳಾದ ಸ್ವರೂಪವೇ ಕಾರಣ. ವಿಶೇಷವಾಗಿ ಇಂಗ್ಲೆಂಡ್ ತನ್ನ ವಸಾಹತುಶಾಹಿ ಪ್ರಾಬಲ್ಯದಿಂದ ಜಗತ್ತಿನ ಅನೇಕ ಸಮಾಜಗಳ ಸಂಪರ್ಕವನ್ನು ಪಡೆಯಿತು.

ಹೀಗಾಗಿ ಇಂಗ್ಲಿಷ್ ಭಾಷೆಯ ಅನೇಕ ಪದಗಳ ಹಿಂದೆ ಕುತೂಹಲಕಾರಿ ಚರಿತ್ರೆಯೆ ಇದೆ. ಇಂಥ ಅನೇಕ ಮಾಹಿತಿಗಳು ಈ ಕೃತಿಯಲ್ಲಿವೆ. ಇಂಗ್ಲಿಷ್ ಎಲ್ಲಾ ಭಾಷೆಗಳ ಹಾಗೆ ಬೆಳೆಯುತ್ತಾ ಬದಲಾಗುತ್ತ ಬಂದಿದ್ದರಿಂದ ಅದರ ವಾಕ್ಯರಚನಾ ಕ್ರಮಗಳು, ಪದಕ್ರಮ (word order) ಇವೆಲ್ಲವೂ ಬದಲಾಗುತ್ತ ಮುದ್ರಣ ತಂತ್ರಜ್ಞಾನ ಬಂದ ಮೇಲೆ ಸ್ಥಿರಗೊಂಡವು. ಅದನ್ನು ದ್ವಿತೀಯ ಅಥವಾ ವಿದೇಶೀ ಭಾಷೆಯಾಗಿ ಕಲಿಯುವವರೆಗೆ ಈ ಹಿನ್ನೆಲೆಯಿಂದಾಗಿ ಕೆಲವೊಮ್ಮೆ ಸಮಸ್ಯೆಗಳೂ ಉಂಟಾಗುತ್ತವೆ.

ಪ್ರಸ್ತುತ ಕೃತಿಯು ಹಗುರವಾಗಿ, ಆಕರ್ಷಕವಾಗಿ ಉಪಯುಕ್ತವಾದ ಮಾಹಿತಿಯನ್ನು ಇಂಗ್ಲಿಷ್ ಭಾಷೆಯ ಬಗ್ಗೆ ನೀಡುತ್ತದೆ. ಇಂಗ್ಲಿಷ್ ಕಲಿಯುವವರಿಗೆ ಮಾತ್ರವಲ್ಲ, ಭಾಷೆಗಳ ಬಗ್ಗೆ ಕುತೂಹಲವಿರುವ ಎಲ್ಲರೂ ಈ ಕೃತಿಯನ್ನು ಖುಷಿಯಿಂದ ಓದಬಹುದು. ಈ ಕೃತಿಯು ಮುಂದಿನ ಆವೃತ್ತಿಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಸೇರಿಸಿಕೊಂಡು ಬೆಳೆಯುತ್ತಲೆ ಹೋಗುತ್ತದೆಯೆಂದು ನಾನು ಈಗಲೇ ಅಂದುಕೊಂಡಿದ್ದೇನೆ. ಏಕೆಂದರೆ ಭಾಷೆಗಳೇ ಹಾಗೆ – ನಿರಂತರವಾಗಿ ಪಾತ್ರ ಬದಲಾಯಿಸುತ್ತ ಹರಿವ ನದಿಗಳ ಹಾಗೆ.

‍ಲೇಖಕರು Admin

November 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: