–
-ರಾಜು ಹೆಗಡೆ..
ಕನಸು
ಕಾಣುತ್ತಿದ್ದ ಹುಡುಗನಿಗೆ
ಕೂದಲು ಹಣ್ಣಾಗಿದೆ
ಹೊತ್ತು
ಗೊತ್ತಿಲ್ಲದೆ
ಹೊಗುತ್ತಿದ್ದ
ಹುಡುಗಿಯರು
ಅಂಕಲ್ ಎಂದು
ಆಚೆ ನಡೆಯುತ್ತಾರೆ
ಏಜಾದವರು ಮಾತ್ರ
ಪ್ರೀತಿಯೊ ವಿಶ್ವಾಸವೊ
ಮುಗುಳು ನಗುತ್ತಾರೆ

ಮರಗಿಡಗಳು
ಪ್ರತಿ ವಸಂತದಲ್ಲೂ
ಹೂ ಅಗಲಿಸಿ
ದುಂಬಿಯ ಜತೆ
ಗುಣಗುಡುತ್ತವೆ
ಅದೂ ಸರಿಯೆ,
ಬರಿ ಪರಾಗ ಸ್ಪರ್ಷವಾದರೆ
ಹೇಗಾದರೂ
ನಡೆಯುತ್ತದೆ!
ಯಯಾತಿಗೆ ಜಯವಾಗಲಿ!







madhya vayassu maru praayada kaala.
yayaati yannu dhyaanisuvudu swaabhaavika. kavana chennaagide.
Kavana chennagide
ಫೋಟೋ ನೋಡಿದರೆ ಯಯಾತಿಯನ್ನು ನೆನಪಿಸಿಕೊಳ್ಳುವಷ್ಟು ಏಜ್ ಆಗಿದೆ ಅನ್ನಿಸ್ತಿಲ್ಲವಲ್ಲ ರಾಜು ಅವರೆ ಹ್ಹ ಹ್ಹ , ಪದ್ಯ ಚೆನ್ನಾಗಿದೆ.
A photo tappi kalisibittidde.sampadakaru haakibittiddaare!mattu bari nanna bagge allavalla kavite.thak u.
odida mele olage uliyuvashtu taakattu kavitegide
Olleya kavana raju,
-Kiran Bhat