ಓದಲೇಬೇಕಾದ ‘ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ’

ರಾಜು ಬಿ ಆರ್

ಬದಲಾದ ಮಾಧ್ಯಮದ ಸ್ವರೂಪ. ಪೀತ ಪತ್ರಿಕೋದ್ಯಮ ಹಾಗೂ ಮೌಲ್ಯಾಧಾರಿತ ಪತ್ರಿಕೋದ್ಯಮ
ಪತ್ರಿಕೋದ್ಯಮದ ಸ್ವರೂಪ ಬದಲಾಗುತ್ತಿದೆ. ಪತ್ರಿಕೋದ್ಯಮದಲ್ಲಿ ಮೌಲ್ಯಾಧಾರಿತ ಕುಸಿಯುತ್ತಿದೆ ಎನ್ನುವುದು ನೋಡುಗರ, ಓದುಗರ ಹಲವು ಪತ್ರಿಕೋದ್ಯಮ ದಿಗ್ಗಜರ ಅಭಿಪ್ರಾಯ. ಅದರಲ್ಲೂ ಯೂಟ್ಯೂಬ್ ಚಾನೆಲ್ ಗಳ ಪ್ರವೇಶದಿಂದ ಮಾಧ್ಯಮಕ್ಕೆ ಆಗುತ್ತಿರುವ ಧಕ್ಕೆಯ ಬಗ್ಗೆ ಹೇಳುವಂತಿಲ್ಲ, ಅಷ್ಟೊಂದು ಕಲುಷಿತ ವಾತಾವರಣ ಮಾಧ್ಯಮದಲ್ಲಿ ಹಬ್ಬುತ್ತಿದೆ ಎನ್ನುವುದು ಚರ್ಚಿತ ವಿಷಯ ಕೂಡ ಹೌದು!….ಇದರಿಂದ ರಾಜಕಾರಣಿಗಳು ಸಹ ಮಾಧ್ಯಮವನ್ನು ಗೇಲಿ ಮಾಡುವಂತ್ತಾಗಿದೆ. ಇನ್ನೊಂದಡೆ ಟ್ಯಾಬ್ಲಾಯ್ಡ್ ಪತ್ರಿಕೆಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ ಎನ್ನುವ ಮಾತುಗಳು.

ಒಂದೊಮ್ಮೆ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮಕ್ಕೆ ಇದ್ದ ಸ್ವರೂಪ ಕೂಡ ಬದಲಾಗಿ ಇದೀಗ ಅವು ಬ್ಲಾಕ್ಮೇಲ್‌ ಪತ್ರಿಕೆಗಳಾಗುತ್ತಿವೆ ಎನ್ನುವುದು ಪತ್ರಿಕೋದ್ಯಮ ಕ್ಷೇತ್ರದ ದಿಗ್ಗಜ್ಜರಲ್ಲಿ ಚರ್ಚೆಯಾಗುತ್ತಿದೆ. ಹಾಗಾಗಿ ಟ್ಯಾಬ್ಲಾಯ್ಡ್ ಜರ್ನಲಿಸಂ ಎಂದರೇನು? ಎನ್ನುವುದು ತಿಳಿದುಕೊಳ್ಳುವುದು ಸೂಕ್ತ. ಇಂತಹ ಟ್ಯಾಬ್ಲಾಯ್ಡ್ ಜರ್ನಲಿಸಂ ಕುರಿತು #ರಮೇಶಆರೋಲಿ, ದೆಹಲಿ ವಿವಿಯ ಕಮಲಾ ನೆಹರು ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಮಾಧ್ಯಮ ಅಕಾಡಮಿ ಪ್ರಕಟಿಸುವ ಪುಸ್ತಕ ಮಾಲೆಯಲ್ಲಿ #ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ಎಂಬು ಕಿರು ಪುಸ್ತಕದಲ್ಲಿ ಮಾಹಿತಿ ನೀಡಿದ್ದಾರೆ. ಓದಲೇಬೇಕಾದ ಪುಸ್ತಕ.


ಒಂದಿಷ್ಟು ನಿಮ್ಮ ಮಾಹಿತಿಗಾಗಿ
ಟ್ಯಾಬ್ಲಾಯ್ಡ್, ಟ್ಯಾಬ್ಲಾಯಿಡ್, ರೆಡ್ ಟಾಪ್ಸ್, ಗಟರ್ ಪ್ರೆಸ್, ಯಲ್ಲೋ ಜರ್ನಲಿಸಂ, ಬ್ಲಾಕ್ ಮೇಲ್ ಜರ್ನಲಿಸಂ, ಸೆನ್ಷೆಷನಲ್ ಜರ್ನಲಿಸಂ, ಪೊರ್ನೋಗ್ರಫಿಕ್ ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಯುವ ಪೀತ ಪತ್ರಿಕೋದ್ಯಮ ಅಥವಾ ಟಾಬ್ಲಾಯಿಡ್ ಪತ್ರಿಕೋದ್ಯಮದ ಬಗ್ಗೆ ಒಂದಿಷ್ಟು ಇತ್ತೀಚೆಗೆ ಪತ್ರಿಕೋದ್ಯಮ ಪ್ರವೇಶಿಸುತ್ತಿರುವ, ಪತ್ರಿಕೋದ್ಯಮ ಅಧ್ಯಯನ ಮಾಡುತ್ತಿರುವ ತಿಳಿದುಕೊಳ್ಳಲು ಅಗತ್ಯವಿದೆ.

ಟಾಬ್ಲಾಯಿಡ್ ಪತ್ರಿಕೋದ್ಯಮ ಅಧ್ಯಯನ ಮಾಡಬೇಕಾದ್ರೆ, ನ್ಯೂಯಾರ್ಕ್ ವರ್ಲ್ಡ್ ಹಾಗೂ ನ್ಯೂಯಾರ್ಕ್‌ ಜರ್ನಲ್ ಪತ್ರಿಕಗಳ ಇತಿಹಾಸ ಒಂದಿಷ್ಟು ಗೊತ್ತಿರಬೇಕು. ಈ ಪತ್ರಿಕೆಗಳ ಸಂಪಾದಕರಾದ ಜೋಸೆಫ್ ಫುಲಿಟ್ಜರ್ ಹಾಗೂ ವಿಲಯಂ ರ್ಯಾಂಡಲ್ಫ್ ಹರ್ಸ್ಟ್ ಹಾಗೂ ಫಿಯರ್ ಲೆಸ್ ಬ್ಲಿಟ್ಜ್ ಟ್ಯಾಬ್ಲಾಯ್ಡ್ ಸಂಪಾದಕ ರುಸ್ಸಿ ಕಾರಾಂಜಿಯ ಅಬರ ಬಗ್ಗೆ ತಿಳಿದುಕೊಳ್ಳಬೇಕು. ಇಷ್ಟೆ ಅಲ್ದೆ ಭಾರತದಲ್ಲಿ ಸಂಚಲ ಸೃಷ್ಟಿಸಿದ್ದ ತರುಣ್ ತೇಜಪಾಲ್ ಅವರ ತೆಹಲ್ಕಾ ಪತ್ರಿಕೆಯ ಅಧ್ಯಯನ ಮಾಡುವುದರ ಜೊತೆಗೆ ಕರ್ನಾಟಕದಲ್ಲಿ ಲಂಕೇಶ್, ಅಗ್ನಿ, ಹಾಯ್ ಬೆಂಗಳೂರು ಟ್ಯಾಬ್ಲಾಯ್ಡ್ ಪತ್ರಿಕಗಳನ್ನು ಹುಟ್ಟುಹಾಕಿದ ರವಿಬೆಳಗೆರೆ, ಅಗ್ನಿ ಶ್ರೀಧರ್, ಪಿ.ಲಂಕೇಶ್, ಗೌರಿ ಲಂಕೇಶ್, ಶಂಕರ್ ಅವರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಇದೆಲ್ಲವನ್ನು ಒಂದೆಡೆ ಸಂಗ್ರಹಿಸಿ ಆದಷ್ಟು ಮಟ್ಟಿಗೆ ರಮೇಶದ ಆರೋಲಿ ಅವರು ಸಂಶೋಧನಾತ್ಮಕವಾಗಿ ವಿವರಿಸಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶಿಸುವ ಪತ್ರಕರ್ತರಿಗೆ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ತಿಳಿಯಲು ರಮೇಶ ಆರೋಲಿಯವರ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಒಂದಿಷ್ಟು ಮಾಹಿತಿ ಒದಗಿಸುತ್ತದೆ.

‍ಲೇಖಕರು avadhi

February 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: