
ಮೂಲ: ಫರೀಹ ನಖ್ವಿ
ಅನು: ಮೆಹಬೂಬ ಮುಲ್ತಾನಿ
ಬಣ್ಣದ ಕನಸುಗಳು ಅದೆಲ್ಲಿಂದ ಬರುತ್ತವೋ…!
ನಾವು ಕಾಣಿಕೆಯಲ್ಲಿ ಗಡಿಯಾರ ಕೊಡುತ್ತೇವೆ
ಒಬ್ಬರಿಗೊಬ್ಬರು ಸಮಯ ಕೊಡುವದಿಲ್ಲ
ಕಣ್ಣುಗಳು ಕಪ್ಪು ಬಿಳುಪಾಗಿವೆ
ಈ ಬಣ್ಣದ ಕನಸುಗಳು ಅದೆಲ್ಲಿಂದ ಬರತ್ತವೆಯೋ?
ಕನಸುಗಳ ಮಣ್ಣಿನಿಂದಾದ ಆ ಎರಡು ಕುಂಡಗಳಲ್ಲಿ ಎರಡು
ನದಿಗಳಿವೆ ಅದರೂ ಕೂಡಿ ಹರಿಯುತ್ತವೆ
ಬಿಡಿ …..
ಅದ್ಯಾರೆಂದರೊ ರಾಜಕುಮಾರಿಯೆಂದು
ರಾಜಕುಮಾರಿಯ ಕೈಯೆಲ್ಲಾ ಹುಣ್ಣು….
ನೋವಿಗೆ ಇದರಿಂದ ಏನೂ ವ್ಯತ್ಯಾಸವಿಲ್ಲ
ನಾವು ಸುಮ್ಮನೆ ಪುಟ ಹೊರಳಿಸುತ್ತೆವೆ..







ಒಳ್ಳೆಯ ಕವಿತೆಯ ಅನುವಾದ. ತುಂಬಾ ಧನ್ಯವಾದಗಳು.