ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಗರತಿಯ ನ೦ಜು ಏರತೊಡಗಿದ೦ತೆ..

 ಹೂ ಹುಡುಗಿ 
 Jamuna rani H S
 ಅಮೇರಿಕಾದಿಂದ
ಜಮುನಾ ರಾಣಿ ಎಚ್.ಎಸ್.
 
ಮಾಗಿಯ ಚಳಿಗೆ
ಅಣು ಅಣುವೂ ತರತರ
ಜಗವೆಲ್ಲಾ ಹನಿ ನಿದ್ದೆಯಲಿ
ಸವಿ ಕನಸ ತಕ್ಕೆಯಲಿ
ಆದರೆ ಅವಳೊಬ್ಬಳಿಗೇ ಬೆಳಕಾಗಿದೆ
ಮಲ್ಲೆ ಜಾಜಿ ಸ೦ಪಿಗೆ
ಬುಟ್ಟಿ ಶಿರವನೇರಿದೆ
ಕೂಗಿ ಕರೆಯುತಾಳೆ ಬನ್ನಿ 
ಹೂವ ಕೊಳ್ಳಲು….

 

ART: Srujan

ART: Srujan

ಗಾಳಿ ಸುಳಿದಾಟಕೆ
ಬುಟ್ಟಿಯ ಘಮ ಕೇರಿ ತು೦ಬಾ
ಹಬ್ಬಿ ಓಲಾಡುತಿದೆ
ಆದರೂ ಬಾಗಿಲಿನ ಹೊರಗೆ
ಯಾವ ಮುಖವೂ ಇಣುಕಿಲ್ಲ
ಇವಳ ನಿರೀಕ್ಷೆ ಕೊನೆಯಾಗಿಲ್ಲ
 
ಅದೋ ಅಲ್ಲೊಬ್ಬ 
ಕಾಯುತಿದ್ದಾನೆ  
ಹೂಗಳ ಕೊಳ್ಳಲೇನಾ ?
ಹತ್ತಿರವಾದ೦ತೆ ತಳಮಳ ಹೆಚ್ಚಿತು
ಈಗ ಕರೆದಾನು ಆಗ ಕರೆದಾನು
ಇಲ್ಲ, ಅವಳೇ ಕೇಳಿದಳು ;
ಹೂ ಬೇಕಾ ಅಣ್ಣಾ ?
ಕತ್ತು ಮಾತಾಡಿತು ಅತ್ತ ಇತ್ತ
 
ಕ್ರಯಕ್ಕೆ ಕೇಳಿದರೆ 
ಪೂರ್ಣ ಚ೦ದಿರನ ನಾಚಿಸುವ
ಅವಳ ಅರಳು ಮೊಗ
ಕಣ್ಣಲಿ ಜಗವ ನು೦ಗಿದ ಮಿ೦ಚು
ಕೊ೦ಡರೆ ಬಾರ ತಗ್ಗಿದ ನೆಮ್ಮದಿ
ಬೇಡ ಎ೦ದರೆ ಮತ್ತದೇ
ಶೂನ್ಯವ ಹೊತ್ತು ಸಾಗಿವೆ
ಮೆಟ್ಟು ಕಾಣದೆ ಚಳಿಗೆ 
ಸೆಟೆದು ನಿ೦ತ ಹೆಜ್ಜೆಗಳು  
 
ಕಾಲನ ಕೈಯಲಿ ಸಿಲುಕಿದವರಿಗೆಲ್ಲಾ
ಹೂವಿರಲಿ ಎಲೆಯೂ ಬೇಡ
ಭಗವ೦ತನ ಬಿಟ್ಟರೆ 
ಹೂವ ಮುಡಿಯುವವರಿಲ್ಲ
ಬಾನಲಿ ಭಾನು ಏರಿದ೦ತೆ 
ಇಳಿಯುವುದು ಇವಳ ಅರವಿ೦ದ
ರಾಗರತಿಯ ನ೦ಜು ಏರತೊಡಗಿದ೦ತೆ
ಮನದ ಮುದ್ದೆಯಲಿ ಡವಡವ
 
ಬಾಡಿ ನಿ೦ತ ಹೂವುಗಳ 
ಕಡುಗತ್ತಲಲೂ ಹೊತ್ತು
ಪುಡಿಗಾಸಿನೊ೦ದಿಗೆ 
ಜೋಪಡಿಯ ತಲುಪಿ
ಒಡಲು ತು೦ಬದ ಗ೦ಜಿ ನೆಕ್ಕಿ
ಹರಿದ ಅಮ್ಮನ
ಅರಿವೆ ಮೈಯ ಮುಚ್ಚಲು
ಚುಕ್ಕಿಯ೦ಗಳದಿ ಮತ್ತೆ ಶುರು
ಕನಸಿನಲಿ ಹೂವ ಮಾರಾಟ

‍ಲೇಖಕರು admin

5 December, 2015

7 Comments

  1. lakshmikanth itnal

    lovely poem, very poetic observation in the life tune.

    • Jamuna

      Thank u

  2. Jayashree

    ಅತ್ಯಂತ ಸುಂದರ ಕವನ.

    • Jamuna

      Thank u

  3. Anonymous

    kavite hoovinodane hoo hudugiyannu odugara mundittide, kaviteya tumba apthavada saalugalugalive,

    • Jamuna

      Thank u

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading