ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವೀಂದ್ರ ಮಾವಖಂಡ recommends ‘ಬಾಲಗಂಧರ್ವ’

ಗೆಳೆಯ ಅವಿನಾಶ್ ಕಾಮತ್ ಈ ‘ಬಾಲಗಂಧರ್ವ’ ಮರಾಠಿ ಸಿನಿಮಾವನ್ನು ಎರಡೆರಡು ಸಲ ನೋಡಿದರಂತೆ.

ಈ ಚಿತ್ರದಲ್ಲಿ ಖ್ಯಾತ ಗಾಯಕ ರಾಹುಲ್ ದೇಶಪಾಂಡೆ ಅಭಿನಯಿಸಿದ್ದಾರೆ. ಬೆಂಗಳೂರಿನಲ್ಲಿರುವ ನಮಗೆ ಇದು ನೋಡಲು ಸಿಗುವುದಿಲ್ಲ ಅನಿಸುತ್ತದೆ.

ಹೀಗಾಗಿ ಇದರ ಸುಮಧುರ ಹಾಡುಗಳನ್ನಾದರೂ ಕೇಳಿ ತೃಪ್ತಿಪಡೋಣ.

http://www.4shared.com/audio/VW1pIVXV/Pariyeva_Ke_Payal_sajani.html

‍ಲೇಖಕರು G

24 May, 2011

3 Comments

  1. ರವೀಂದ್ರ ಮಾವಖಂಡ

    ಈ ಚಿತ್ರದ ಇತರ ಹಾಡುಗಳು ಈ ಲಿಂಕ್(http://amolchiduniya.blogspot.com/2011/05/balgandharva-2011.html)ನಲ್ಲಿವೆ.

    ಈ ಚಿತ್ರವನ್ನು ನೋಡಿ ಬಂದ ಅಕ್ಕ ರಜನಿ ಗರೂಡ ಅವರ ಪ್ರತಿಕ್ರಿಯೆ ಹೀಗಿದೆ:

    ಪ್ರಿಯ ಮುಖಪುಸ್ತಕದ ಗೆಳೆಯರೆ, ಬಾಲಗಂಧರ್ವ ನೋಡಿಬಂದೆ. ಮರಾಠಿಗರ ರಂಗಭೂಮಿಯ ಅಭಿಮಾನ ಮೆಚ್ಚುವಂತಹದು. ನನಗೆ ಸ್ಕ್ರಿಪ್ಟ್ ಬಗೆಗೆ ಸ್ವಲ್ಪ ನಿರಾಸೆ ಆಯಿತು. ಅದರಲ್ಲಿ ನಾಟಕೀಯತೆ ಇಲ್ಲ. ಜಾಳು ಜಾಳಾಗಿದೆ. ಗಂಧರ್ವರ ಬಗೆಗೆ ಅನೇಕ ಐತಿಹ್ಯಗಳಿವೆ . ಅವರು ರಂಗಭೂಮಿಯ ದಂತಕಥೆ. ಆದರೆ ಕಲೆಯ ವಿಷಯದಲ್ಲಿ ಗುಣಗ್ರಾಹಿಗಳಾಗಿರಬೇಕೆ ಹೊರತು ಅಂಧಾಭಿಮಾನವಲ್ಲ. ಗೋಹರಜಾನ್ ಮತ್ತು ಬಾಲಗಂಧರ್ವರ ಸಂಬಂಧದಲ್ಲಿ ಸತ್ಯ ಹೊರಬೀಳಬೇಕು. ಇದರ ಕುರಿತು ಸಿನೆಮದಲ್ಲಿ ಪೂರ್ವಾಗ್ರಹವಿದ್ದಂತೆ ತೋರುತ್ತದೆ. ಒಟ್ಟಾರೆ ಇದು ಪೇಲವವಾಗಿದೆ.

  2. ರವೀಂದ್ರ ಮಾವಖಂಡ

    ಅಕ್ಕ ರಜನಿ ಗರೂಡರ ಪ್ರತಿಕ್ರಿಯೆಗೆ ಗೆಳೆಯ ಅವಿನಾಶ್ ಕಾಮತ್ ಪ್ರತ್ಯುತ್ತರ 🙂

    ಸ್ಕ್ರಿಪ್ಟ್.ನಲ್ಲಿ ನಾಟಕೀಯತೆ ಇಲ್ಲ ಎನ್ನುವುದು ಒಪ್ಪಿಕೊಳ್ಳಬೇಕಾದ ವಿಷಯ. ಆದರೆ ಸಾವಿರಾರು ಘಟನೆಗಳಿಂದ ಏರುಪೇರುಗಳಿಂದ ಕೂಡಿದ ಒಬ್ಬ ಮಹಾನ್ ಕಲಾವಿದನ ಜೀವನಗಾಥೆಯನ್ನು ಡ್ರಾಮ್ಯಾಟಿಕ್ ಮಾಡುವುದಕ್ಕಿಂತ ಇದ್ದದ್ದನ್ನು ಇದ್ದಂತೆಯೇ ತೋರಿಸಿರುವುದರಲ್ಲಿ ತಪ್ಪೇನಿಲ್ಲ. ನನ್ನಂಥ ಸಾವಿರಾರು ರಂಗಕ್ರಿಮಿಗಳಿಗೆ ಬಾಲಗಂಧರ್ವರ ಬಗ್ಗೆ ಏನೆಂದರೆ ಏನೂ ತಿಳಿದಿರಲಿಲ್ಲ, ಈ ಸಿನೆಮಾ ನೋಡುವ ಮೊದಲು.

    ಗೋಹರ್ ಜಾನ್ ಹಾಗೂ ಬಾಲಗಂಧರ್ವರ ಸಂಬಂಧ ಅತ್ಯಂತ controversial ವಿಷಯ. ಈ ಬಗ್ಗೆ ಹಲವು ಭಿನ್ನ ದೃಷ್ಟಿಕೋನಗಳಿವೆ. ಕನ್ನಡಿಗರಾದ ರಹಮತ್ ತರೀಕೆರೆಯವರದ್ದೇ ಒಂದು ವಿಭಿನ್ನ ಭಾಷ್ಯವಿದೆ, ಇತ್ತ ಕಡೆ ಮರಾಠಿ ಸಂಶೋಧಕರ ವಿವರಣೆ ಅತ್ಯಂತ ಭಿನ್ನವೂ ಆಗಿದೆ. ಹೀಗಾಗಿ ಆ ಅಂಶವನ್ನು ಕೈಬಿಡಲಾಗಿರುವ ಸಾಧ್ಯತೆಗಳಿವೆ. ಪೂರ್ವಾಗ್ರಹ ಇದೆ ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ.

    ಒಂದು biopic ನಿರ್ಮಾಣ ಮಾಡುವುದು ಅತ್ಯಂತ ಕಠಿಣ. ನಿಜವಾದ ಅರ್ಥದಲ್ಲಿ Biopic ಒಂದು ಯಶಸ್ಸನ್ನು ಗಳಿಸಿದ ಉದಾಹರಣೆ ಭಾರತದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ತನ್ನ ಇತಿಮಿತಿಗಳ ಮಧ್ಯದಲ್ಲೂ ಮರಾಠಿ ಚಿತ್ರರಂಗ ಒಂದು ಉತ್ತಮ ಸಿನೆಮಾ ನಿರ್ಮಿಸಿದೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.

  3. Jayalaxmi

    ಬಾಲ ಗಂಧರ್ವ ಅವರ ಹೆಂಡತಿಯ(ಎರಡನೆಯ)ಹೆಸರು ಗೋಹರ್ ಬಾಯಿ (Gohar bai). ಗೋಹರ್ ಜಾನ(Gauhar Jaan) ಅಲ್ಲ.
    ಗೋಹರ್ ಬಾಯಿ: ಮೂಲತಃ ಬಿಜಾಪುರ ಜಿಲ್ಲೆಯ ಬೀಳಗಿಯವರು. ಹೀಗಾಗಿಯೇ ಅವರು ಗೋಹರ್ ಬಾಯಿ ’ಕರ್ನಾಟಕಿ’(ಕರ್ನಾಟಕದವರು ಎನ್ನುವ ಅರ್ಥದಲ್ಲಿ) ಎಂದೇ ಪ್ರಸಿದ್ಧರು. ಹಿಂದುಸ್ತಾನಿ ಗಾಯಕಿ.

    ಗೋಹರ್ ಜಾನ: ಕಲ್ಕತ್ತಾದವರು. ಈಕೆಯೂ ಸಹ ಪ್ರಖ್ಯಾತ ಹಿಂದುಸ್ತಾನಿ ಗಾಯಕಿ ಜೊತೆಗೆ ನೃತ್ಯಗಾತಿಯೂ ಸಹ. ಗೋಹರ್ ಜಾನ್ ಅವರ ಹಾಡುಗಾರಿಕೆ ಭಾರತದಲ್ಲಿ ಪ್ರಪ್ರಥಮವಾಗಿ ಗ್ರಾಮಾಫೋನಿನಲ್ಲಿ ಮುದ್ರಿತಗೊಂಡ ಮೊದಲ ಧ್ವನಿಯಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading