ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿ ಮೂರ್ನಾಡ್‍ ಅಮ್ಮನಾದಾಗ..



ರವಿ ಮೂರ್ನಾಡ್‍

ಮಗುವಿನ ನಿದ್ರೆ..!

  ಅದು ಹೇಗೆ ಮಲಗಿದೆ ನೋಡಿ… ಅರೆಬಿರಿದ ಕಂಗಳಲಿ ಅರ್ಧ ಲೋಕವ ತೆರೆದು ! ಚಂದಮಾಮನ ಕರೆಯುತ್ತಿದೆ ಕೈಬೆರಳು ! ಹಾಗೇ ಕೇಳುತ್ತಿದೆ ತಟ್ಟಿ ಮಲಗಿಸುವ ಜೀಕುವ ಮರಗಳ ತೀಡನ ಭೂಮಿಯ ತೊಟ್ಟಿಲಲ್ಲಿ ಹಕ್ಕಿ ಚಿಲಿಪಿಲಿಯ ಜೋಗುಳದ ಗಾನ ಎಚ್ಚರವಿರದ ಕನಸುಗಳ ಹಗಲು-ರಾತ್ರಿಯ ಪಯಣ ಗಾಳಿ ಚಾಮರವಾಗಲಿ ಸೋಕದಿರಲಿ… ಹಾಲ್ದುಟಿಗೆ ನೋಣಗಳು ! ಆಗಸಕೆ ಸೆರಗು ಬರಲಿ ! ಮುತ್ತದಿರಲಿ.. ನಾಯಿ-ರಣಹದ್ದಿನ ಕಂಗಳು ! ಹೂವಾಗಲಿ….. ಧೋ ಎಂದು ಸುರಿವ ಮಳೆಹನಿಗಳು ಅವುಚಿಕೊಳ್ಳಲಿ ಭೂಮಿ ! ಬುಸುಗುಟ್ಟದಿರಲಿ ಬಿರುಗಾಳಿ ! ಹಠಮಾರಿ ಸುನಾಮಿ ! ಮಲಗಿದ ಮಗು ಮಲಗಿಯೇ ಇರಲಿ ಬಣ್ಣವಿರಲಿ.. ಅಮ್ಮನಿಗೆ ಮಗುವಿನ ಕನಸಿರಲಿ !  ]]>

‍ಲೇಖಕರು G

12 February, 2012

1 Comment

  1. D.RAVI VARMA

    ನಿಮ್ಮ ಕವನದಲ್ಲಿ ಪ್ರೀತಿಯಿದೆ,ಆರ್ದ್ರತೆ ಇದೆ ,ಅಸ್ತಕ್ಕು ಮಿಗಿಲಾಗಿ ಮಗುವಿನ ಮನಸಿದೆ. ಬಹುಷಃ ಇಡೀ ಜಗತ್ತಿನ ವಿಸ್ಮಯವೆಂದರೆ ನನಗೆ ಮಗು,ಅದರ ನಿಷ್ಕಲ್ಮಶ ಬದುಕು ,ಅದು ಬದುಕನ್ನು ತಬ್ಬಿಕೊಳ್ಳುವ ರೀತಿ ಅಲ್ಲವೇ , ನನಗೇಕೋ “ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗೋ ಮಗುವೆ ಹಾಡು ನೆನಪು ಬಂತು, ನನ್ನ ಮಗಳಿಗೆ ಈ ಹಾಡು ಕೇಳಿಸುತ್ತ,ಹಲವೊಮ್ಮೆ ಹಾಡುತ್ತ ಮಲಗಿಸುತ್ತಿದ್ದೆ.
    ರವಿ ವರ್ಮ ಹೊಸಪೇಟೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading