ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ: ಒಂದಾನೊಂದು ದೇಶದಲ್ಲಿ

ಎನ್. ರವಿಕುಮಾರ್ ಟೆಲೆಕ್ಸ್

ಮೂರೊತ್ತು ನೆಣತುಂಬಿದ ಮೃಷ್ಟಾನ್ನ ಉಣ್ಣುವ
ದೊರೆ -ಮತ್ತವನ ಸಂತತಿ
ಹಸಿದವರನ್ನು ಲೇವಡಿ ಮಾಡುತ್ತದೆ
**

ತನ್ನ ಅಂಗಿಗೆ ಚಿನ್ನದ ದಾರಗಳನ್ನೆ ಪೋಣಿಸಿಕೊಂಡು
ಊರೂರು ತಿರುಗುವವ ಶೋಕಿದಾರ
ಬೀದಿಯಲ್ಲಿ ಬರೀ ಮೈಲಿ ತಿರುಗುವವರನ್ನು ಮರೆತೆ ಇರುತ್ತಾನೆ
***

ವೈಭವದ ಮೇಳಗಳಲ್ಲಿ ಬಹುಪರಾಕಿನ ರಾಗಗಳಿಗೆ
ಮೈದೂಗುವ ಮೋಜುಗಾರನಿಗೆ
ಮಣಿಹಾರದ ಕಣಿವೆಯಲಿ
ಬೆಂಕಿಯಲ್ಲಿ ಬೆಂದು ನರಳುತ್ತಿರುವವರ
ಆರ್ತನಾದವಾದರೂ ಕೇಳಿಸುವುದಿಲ್ಲ
****
ತುಂಡು ರೊಟ್ಟಿ ಕೊಡಿ ಎಂದು ಹಸಿದು ಅಂಗಲಾಚಿದವರನ್ನು
ಕೇಕು ತಿನ್ನಿ ಎಂದ ಪಾತಕ ಚರಿತ್ರೆಯ ವಿಕಾರ ವಾರಸುದಾರ
ವರ್ತಮಾನದಲ್ಲೂ ಗಡಿ-ಗುಡಿಗಳ ತಿರುಗುತ್ತಾ ಮಾತು ಮಾತಿಗೂ
ಧರ್ಮವೆನ್ನುತ್ತಾನೆ-ದೇವರೆನ್ನುತ್ತಾನೆ-ದೇಶವೆನ್ನುತ್ತಾನೆ
ದೇಶಾವರಿ, ಅನ್ನದ ಬಗ್ಗೆ ಸೊಲ್ಲೆ ಎತ್ತುವುದಿಲ್ಲ

    ***

‍ಲೇಖಕರು avadhi

20 June, 2023

1 Comment

  1. prathibha nandakumar

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading