ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿಕಾಂತೇ ಗೌಡ ಹೊಸ ಕವಿತೆ- ನನಗೆ ಕತ್ತಲೆಂದರೆ ಇಷ್ಟ!..

ರವಿಕಾಂತೇ ಗೌಡ

ಕತ್ತಲೆಂಬುದು ಕತ್ತಲಲ್ಲ !
ನನಗೆ ಕತ್ತಲೆಂದರೆ ಇಷ್ಟ!
ಕಾವ್ಯದ ಮುಂಚೆಗಿನ ಕವಿಯ ತಲ್ಲಣಗಳಂತೆ
ಒಂದು ನಿದಾನದಂತೆ ಆವರಿಸಿ
ನಿಗೂಢವಾಗುವದಲ್ಲ?
ಎಲ್ಲಕೂ ಮಾಯಕದ ಮುಸುಕ
ಹೊದಿಸೇ ಬಿಡುತ್ತಲ್ಲ
ಹೆಣ್ಣು ಗಂಡ ಪಿಸು ಮಾತ ಹೊತ್ತ
ಗಾಳಿಯ ಹಿಡಿದೂ
ಎಷ್ಟು ಒಂಟಿಯಾಗಿಸಿಬಿಡುತ್ತೆ ಇದು
ಮರ್ಮಕ್ಕೆ ತಾಗುವಂತೆ
ಮೌನದಂತೆ
ಬೆಳಕೋ ತೆರೆದು ತೋರಬಹುದು
ನಮ್ಮ ಸುತ್ತಲ್ಲನ್ನ
ಹಾತೊರೆದಿರಬಹುದು ನಾನು ನೀವು.

ಒಂದು ಬೆಳಕು
ತಿಂದು ಹಾಕಬಹುದು ಕತ್ತಲ್ಲನ್ನ
ಆದರೂ ಅದು ಹೇಗೆ ಜೀವಿಸಿರುತ್ತೆ
ನಮ್ಮ ಸುತ್ತಲೂ
ಸದ್ದಿಲ್ಲದ ಸಂತನ ಹಾಗೆ
ಹಾ! ಈ ಕತ್ತಲೋ
ಅವ್ವನ ಬೆಚ್ಚನೆದೆಯ ನೆನಪಲ್ಲಿ
ನನ್ನ ಇಳುಕಿ ಸಮಾಧಾನಪಡಿಸುತ್ತೆ
ಕರುಳುಳ್ಳ ಇಂಥ ಕತ್ತಲು
ಕಾವು ಕೂತಾಗಲೇ
ಬೆಳಕೆಂಬುದು ಮೊಟ್ಟೆಯೊಡೆದು
ಮರಿಯಾಗೋದು
ಕತ್ತಲೆಂದರೆ ನನಗಿಷ್ಟ

‍ಲೇಖಕರು Admin

24 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading