ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿಕಾಂತೇಗೌಡ ಹೊಸ ಕವಿತೆ- ಕಾಣುವುದೇ ಹೀಗೆ !

ರವಿಕಾಂತೇಗೌಡ

ಕಣ್ಣ ಕಣ್ಣಿಂದ ಕಾಣಲಾಗದು
ನೋಟದಿಂದ ಅರಿಯಬಹುದು
ಕಣ್ಣೊಳಡಗಿದ ಬಿಸಿನೀರಿಂದ !

ಚರ್ಮವ ಬಣ್ಣದಿಂದ ಅರಿಯಲಾಗದು
ಸ್ಪರ್ಶದಿಂದ
ಅದು ಹೊಮ್ಮಿಸುವ ಘಮದಿಂದ
ಕಾಣಬಹುದು !!

ಉಸಿರೋ
ಉಸಿರಿಂದ ಹುಡುಕಬಹುದು
ನಿಟ್ಟುಸಿರಿಂದ ಅರಿತು
ಒಳಹೊಗಬಹುದು
ಉಸಿರೇ ಆಗಬಹುದು !!!

ಅರಿಯೆನು
ನುಡಿಯ ಎಂಜಲಾಗಿಸುವ ನಾಲಗೆಯಿಂದ
ಏನನ್ನೂ !
ಗಾಢ ಮೌನದಿಂದ
ಪ್ರಶಾಂತ ಏಕಾಂತದಿಂದ
ಅರಳಿಯ
ಚಿಗುರುವ ,ಉದುರುವ
ಮತ್ತೇಳುವ ಆ ಎಲೆ ತೋರುವ
ಬುದ್ಧದೇವನ ಮುಗುಳು
ಇಂಗಳದ ಬೇಗೆ ಕಳೆದು
ಹರಡೀತು ಬೆಳದಿಂಗಳು
ಶಬ್ದವನಳಿಸಿ ನಿಶ್ಯಬ್ದವನರಸಿ !

‍ಲೇಖಕರು Admin

2 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading