ರಮಾಕಾಂತ ಆಯ೯ನ್ ನೋಡಿದ ‘ಸರ್ಪಟ್ಟ ಪರಂಬರೈ’

ರಮಾಕಾಂತ ಆಯ೯ನ್

Thank you ಪಾ ರಂಜಿತ್

ಬಾಕ್ಸಿಂಗ್ ಎಂದರೆ ಮೊಹಮ್ಮದ್ ಅಲಿ, ಮೈಕ್ ಟೈಸನ್, ಇವಾಂಡರ್ ಹೋಲಿಫೀಲ್ಡ್, ರಾಕಿ ಸೀರೀಸ್ ನ ಸಿಲ್ವಸ್ಟರ್ ಸ್ಟಾಲೋನ್ ಮಾತ್ರಾನಾ? No…. ಇದು ಪಾ ರಂಜಿತ್ ಎಂಬ ದಕ್ಷಿಣದ ಪ್ರತಿಭೆಯ ಸರ್ಪಟ್ಟ ಪರಂಬರೈ ಎನ್ನುವ ಅಸಲಿ ತೂಫಾನ್. ಇಲ್ಲಿ ಬಾಕ್ಸಿಂಗ್ ಕೇವಲ ಆಟವಲ್ಲ. ಅದೊಂದು ಪರಂಪರೆ. ಸದಾ ತುಳಿತಕ್ಕೊಳಗಾದವರ, ಗುಡಿಸಲಲ್ಲೇ ಜೀವನದ ಆದಿ, ಅಂತ್ಯವನ್ನ ಕಂಡವರ ಕಥೆ. ನಿಮ್ಮನ್ನ ಇದ್ದಕ್ಕಿದ್ದಂತೆ ನಲ್ವತ್ತೈದು ವರ್ಷಗಳ ಹಿಂದಕ್ಕೆ ಎಳೆದುಬಿಡುವ ಜಾದು.

ಒಂದೊಂದು ಪಾತ್ರವೂ ಆ ಕಾಲದ ಅಸ್ತಿತ್ವ. ಇಲ್ಲಿ ದ್ವೇಷ, ಹಣ, ಮರಾಮೋಸ, ಸಂಚಿನ ಗುಂಪು ಮತ್ತು Supremacy ಯ ರೂಪದಲ್ಲಿ ವೆಂಬುಲಿಯ ಗುಂಪಿದ್ದರೆ, ಅದರ ವರ್ಸಸ್ ಇದ್ದಿಲು ಕಾರ್ಖಾನೆಯ ಗುಡಿಸಲು ವಾಸಿ‌ ಕಾರ್ಮಿಕ ಕಬಿಲನ್ ಹೋರಾಟವಿದೆ. ಇಲ್ಲಿ ಇದ್ದಿಲು ಕಪ್ಪಾ?ಅದೊಂದು ಶೋಷಣೆಯಾ? ಕೀಳರಿಮೆ ಬರಿಸಿದ ಕೂಪವಾ? ಉತ್ತರವಾಗುತ್ತಾನೆ ಆರ್ಯ ಎಂಬ ಕಥಾ ನಾಯಕ‌ ಕಬಿಲನ್. ಅವನದ್ದು ಜಿದ್ದಲ್ಲ, ಅಸೂಯೆಯಲ್ಲ, ದ್ವೇಷವೂ ಅಲ್ಲ, ಅವನು ಒಂದು ಪರಂಪರೆಗೆ ಸಿಕ್ಕ ಅವಕಾಶ ಅಷ್ಟೇ.

ಗುರು ರಂಗನ್ ವಾತಿಯಾರ್ ನಿಷ್ಠೆ, ಬದ್ಧತೆಗೆ ಕಳಶವಿಟ್ಟಂತೆ ಸಾಗಿದ್ದಾರೆ. ಗೆದ್ದೇ ಬಿಟ್ಟಾನು ಎಂಬ ಕಾರಣಕ್ಕೆ ಅವನು, ಗುರು ರಂಗನ್ ವಾತಿಯಾರ್ ಮಗನೂ ಸೇರಿ ಅನೇಕರು ಹೆಣೆಯುವ ಸಂಚಿನ ಸಂಚಾರಿ. ಕಳ್ಳಭಟ್ಟಿ ಕಾಯಿಸಿದವನೂ ಅವನೇ, ಕುಡಿದೂ ಕುಡಿದೂ ದಾರಿ ಹೆಣವಾಗುವ ಪರಿಸ್ಥಿತಿಯ ದಾಳವೂ ಅವನೇ! ಅಪ್ಪನಂತೆ ತನ್ನ ಮಗುವನ್ನ ಅನಾಥ ಮಾಡಲಾರೆ ಎಂದು ಹೆಂಡತಿಯ ಕಾಲಿಗೆ ಬಿದ್ದು ಶಪಥ ಮಾಡುವ ರೋಷವೂ ಅವನೇ! ಬಾಕ್ಸಿಂಗ್ ಕಲಿತಿದ್ದ ಅಪ್ಪ ಕೊಲೆಯಾದ ಎಂಬ ಒಂದೇ ಕಾರಣಕ್ಕೆ, ಆ ಶಬ್ಧ ಎತ್ತಿದರೆ, ಅಮ್ಮ ಬಾಕ್ಯಮ್ಮಳಿಂದ ಪೊರಕೆ ಏಟು.

ಬಡವಾ ನೀನು ಮಡಗಿದಂಗೇ ಇರಬೇಕಾ ಎಂಬಂಥ ಮಗ. ರಕ್ತದಲ್ಲಿ ಬಂದ ಹೋರಾಟದ ಕಿಚ್ಚು, ಒಳಗೇ ಸುಡುತ್ತಿರುತ್ತಾ? ಬೆಂಕಿ ಆಚೆ ಬರಲೇ ಬೇಕಲ್ಲಾ? ಆ ಬೆಂಕಿಯೇ ಸರ್ಪಟ್ಟ ಪರಂಬರೈನ ಜೀವಾಳ. ಇದು ಏನೂ ಬರದವನ ಆರ್ಭಟವಲ್ಲ. ಇಲ್ಲಿ ವಿಧಿಯೇ ಅವಕಾಶ. ತಮಟೆ ಸದ್ದಿಗೆ, ದಿಬ್ಬಣದುದ್ದಕ್ಕೂ ಕುಣಿತ ಅದುಮಿಟ್ಟಿದ್ದ ಮದುಮಗಳು, ಮೊದಲ ರಾತ್ರಿಯ ಕೋಣೆಯ ಕದವಿಕ್ಕುತ್ತಿದ್ದಂತೆ ಮನಸೋ ಇಚ್ಛೆ ಕುಣಿದುಬಿಡುತ್ತಾಳೆ.

ಇದು ಒತ್ತರಿಸಲ್ಪಟ್ಟವರ ಉತ್ತರವಾ? ಗೊತ್ತಿಲ್ಲ . ಅದೇ ಹೆಂಡತಿ, ಕಂದನನ್ನ ತಬ್ಬಿಕೊಂಡು, ಚಾಕು , ಚೂರಿ, ಮಚ್ಚಿನಿಂದ ಗಂಡನನ್ನ ಮುಗಿಸಲಿಕ್ಕೇ ಬಂದವರ ವಿರುದ್ಧ ಸೆಣಸುವ ದೃಶ್ಯ ಸತ್ಯಕ್ಕೆ ತುಂಬ ಹತ್ತಿರ. ನಾನ್ ಕಡವುಳ್ ನ ಆರ್ಯ ನಿಮ್ಮನ್ನ ಕಾಡುತ್ತಾರೆ.

ಪಾ ರಂಜಿತ್ ಬದ್ಧತೆ, ಸಿನಿಮಾದ Preparation, Camera, ಟಿಂಟ್, ಬಾಕ್ಸಿಂಗ್ ರಿಂಗ್, Script work, ಧ್ವನಿಯ ಗತ್ತು, ಮ್ಯಾಚ್ ನ ಸೊಗಸು ಕಟ್ಟಿಕೊಟ್ಟ ರೀತಿ ಅದ್ಭುತ. ಪಾತ್ರಗಳ ಆ ಯ್ಕೆ, ಪೋಷಣೆ, ಒಂದೇ ಒಂದು ಶಾಟ್ ಕೂಡಾ ಬೋರ್ ಹೊಡೆಸದ ರೀತಿ ಕಟ್ಟಿಕೊಡುವುದಕ್ಕೆ ಸ್ಥಿತಿಯನ್ನ ಜೀವಿಸಿದವರಿಂದ ಮಾತ್ರ ಸಾಧ್ಯ. ಅಂತ ಜೀವಿ ಪಾ.ರಂಜಿತ್! ಇಲ್ಲಿ ಬಾಕ್ಸಿಂಗ್ ಅದೊಂದು Perfection ಮತ್ತು Art ನಂತೆ ಕಂಡಿದೆ.

Boxer ಒಬ್ಬನ Foot work, Fitness, Moment, Ring ನ ಸೊಗಸನ್ನ ನಿಜವಾದ ಆಟದಲ್ಲಿ ನೋಡುವುದು ಬೇರೆ. ಸಿನಿಮಾಗಾಗಿ ಅದನ್ನ ಸಿದ್ಧಪಡಿಸುವುದು ಬೇರೆ. ಬಾಕ್ಸಿಂಗ್ ವಿಷಯದಲ್ಲಿ Perfectionಗೆ ಇಷ್ಟು ಹತ್ತಿರದಲ್ಲಿ ಇನ್ನೊಂದು ಸಿನಿಮಾ ಭಾರತದಲ್ಲಿ ಬಂದಿದ್ದು ವಿರಳ ಅಥವಾ ನಾನು ನೋಡಿಲ್ಲ. ದಕ್ಷಿಣ ಭಾರತದ ಸಿನಿಮಾಗಳು ದಿನೇ ದಿನೇ ಭಾರತ ಚಿತ್ರರಂಗವನ್ನ ಆವರಿಸುತ್ತಿವೆ.

ಹೊಸ ತಲೆಮಾರಿನ ನಿರ್ದೇಶಕರಲ್ಲಿ ಕಥೆಯ ಗಟ್ಟಿತನ, ಕಟ್ಟಿಕೊಡುವ ಶ್ರದ್ಧೆ, ವಾಸ್ತವಕ್ಕೆ ತೀರಾ ಹತ್ತಿರವಾಗಿ ಕಾಣುವ ಹೋಮ್ ವರ್ಕ್ ಯಶಸ್ಸಿನ ಗುಟ್ಟು. ಕಮರ್ಷಿಯಲ್ ಗಾಗಿ ಅನಗತ್ಯ ವಿಜೃಂಭಣೆಗಳಾಚೆಗೆ ಒಂದು ತಲೆಮಾರು ಹೊಸದೇನನ್ನೋ ಯೋಚಿಸುತ್ತಿದೆ. ಅದು ನೋಡುಗರಲ್ಲಿ ಪಾತ್ರಗಳು ಜೀವಿಸುವಂತೆ ಮಾಡುತ್ತಿದೆ ಅಷ್ಟೇ.

‍ಲೇಖಕರು Admin

July 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: