ರಜಿಯಾ ಡಿ ಬಿ
ಹಂಚಿ ಹೋಗುವ
ಮುಗ್ಧ ಮನಸ್ಸುಗಳೇ
ಈ ತುಂಡು ಬಟ್ಟೆಗೆ
ಯಾರೋ ಬಿತ್ತಿದ್ದ;
ಈ ವಿಷ ಬೀಜವು
ನಿಮ್ಮ ವಿಚಾರಗಳ
ವಿಕಾಸಕ್ಕೆ ಕೊಳ್ಳಿ ಇಡುವ
ಷಡ್ಯಂತ್ರಕ್ಕೆ
ಬಲಿಯಾಗದೆ
ಪಥ
ಸಂಕುಚಿತ
ಗೋಡೆಗಳಿಂದ
ಶುಷ್ಕ ಕಟ್ಟಲೆಗಳಿಂದ
ಹೊರ ಬಾ—
ನಿರ್ಮಲ ವಿಚಾರಗಳು
ಪರಿಪೂರ್ಣತೆ ಎಡೆಗೆ
ತಲೆಯೆತ್ತಿ ನಡೆಸುತ್ತವೆ.

ಆತಂಕ
ಆ –ನಯವಾದ
ಮಾತು ಕೇಳಿದಾಗ;
ಗಾಬರಿಯಾಗುವೆ
ಮತ್ತೇನೋ ಮೋಡಿಯ
ಹೊಂಚು ಎಂಬ
ಅಳುಕಲ್ಲೇ






ತುಂಬಾ ಚೆನ್ನಾಗಿದೆ