ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಜಿಯಾ ಡಿ ಬಿ ಕವಿತೆ- ಅಂತರಂಗದ ಬೆಳಕು…

ರಜಿಯಾ ಡಿ ಬಿ

1. ನಯವಂಚನೆಯ
ಚಾಲಾಕಿ ಮಾತು
ಬೆನ್ನಿಗೆ ಚೂರಿ ಹಾಕಿ
ಬಾಂಧವ್ಯ ಒಡೆಯುವ
ಹತಾರ.

ಮರೆಯಾಗಿದೆ
ಮುಗುಳ್ನಗೆ
ಬೀರುತ್ತಾ…..
ಶಮನವಾದ ಗಾಯ
ಕೆದಕದಿರು.

2. ಇತಿಹಾಸದ
ಗರ್ಭವನ್ನು
ಮತ್ತೆ ಬಗೆಯುತ್ತಿರುವ
ಈ ಭೂತವಾದವು
ವರ್ತಮಾನದ
ಒಡಲೊಳಗೆ
ಬೆಂಕಿ ಹಚ್ಚುವ ಭಯಾನಕ.

3. ಅಂತರಂಗದ
ಬೆಳಕು
ಆ- ತಂಗಾಳಿ
ಗಡಿಗಳನ್ನು ಮೀರಿ
ಕಣಕಣದಲ್ಲೂ
ತುಳುಕುವುದು
ಸೋಜಿಗ.

4. ಬದುಕಿನ
ಪ್ರತಿಫಲನವಾಗುವ
ಕಣ್ಣಹನಿಗಳು
ಅರ್ಥವ್ಯಾಪ್ತಿಯ
ಬಿಂಬಗಳು.

‍ಲೇಖಕರು avadhi

8 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading