ಗೊರೂರ್ ಶಿವೇಶ್

ಭಾರತೀಯ ಚಲನಚಿತ್ರರಂಗದ ಇತಿಹಾಸದಲ್ಲಿಯೆ ‘ಅತಿ ಹೆಚ್ಚು ಬಜೆಟ್‍ನ (550 ಕೋಟಿ) ಚಿತ್ರವೆಂದು, ಮೂರು ವರ್ಷಗಳ ಸುದೀರ್ಘ ಚಿತ್ರೀಕರಣದ ಕಾರಣಕ್ಕಾಗಿ ಚಿತ್ರ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದ್ದ ಎಂದಿರನ್-ರೋಬೋಟ್ ಸರಣಿಯ ಚಿತ್ರ 2.0 ಬಿಡುಗಡೆಯಾಗಿ ನಾಲ್ಕೇ ದಿನಕ್ಕೆ ನಾನೂರು ಕೋಟಿ ಸಂಪಾದಿಸಿ ಗಲ್ಲಾಪೆಟ್ಟಿಗೆಯ ಇತಿಹಾಸದಲ್ಲಿಯೇ ದೊಡ್ಡ ಸದ್ದು ಮಾಡಿದೆ.
ಕಾದಲನ್, ಇಂಡಿಯನ್, ಅನ್ನೀಯನ್ ಮೂಲಕ ದೊಡ್ಡ ಹೆಸರು ಮಾಡಿರುವ ಶಂಕರ್ ಹಾಗೂ ಸೂಪರ್ ಸ್ಟಾರ್, ರಜನಿಕಾಂತ್ ಜೋಡಿಯ ರೋಬೋಟ್ ಚಿತ್ರ ಅಪಾರ ಯಶಸ್ಸುಗಳಿಸಿದ ಕಾರಣಕ್ಕಾಗಿಯೆ ಚಿತ್ರಪ್ರೇಮಿಗಳಲ್ಲಿ ಅತಿಯಾದ ನಿರೀಕ್ಷೆಯನ್ನು ಉಂಟುಮಾಡಿತ್ತು. ಅದೇ ಕಾರಣಕ್ಕಾಗಿ ಚಿತ್ರ ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಜನಜೀವನದ ಅನಿವಾರ್ಯ ಭಾಗವಾಗಿ, ಒಂದೆರಡು ಗಂಟೆ ದೂರವಿದ್ದರೂ ಸಾಕು ಚಡಪಡಿಸುವ ಹಂತಕ್ಕೆ ತಲುಪಿರುವ, ಜನಜೀವನವನ್ನು ಅತಿಯಾಗಿ ಪ್ರಭಾವಿಸಿರುವ ಸೆಲ್‍ಫೋನ್‍ಗಳು, ಅವರುಗಳ ವಿಪರೀತ ಬಳಕೆ, ಸೆಲ್‍ಫೋನ್‍ಗಳಿಂದ ಬಿಡುಗಡೆಯಾಗುವ ವಿಕಿರಣದಿಂದಾಗಿ (ರೇಡಿಯೇಷನ್) ನಾಶವಾಗುತ್ತಿರುವ ಪಕ್ಷಿ ಸಂಕುಲ. ಆ ಪಕ್ಷಿಸಂಕುಲದ ಆತ್ಮಗಳು ಭೂತಗಳಾಗಿ ಮನುಷ್ಯನ ಮೇಲೆರೆಗಿದರೆ ಆಗಬಹುದಾದ ದುರ್ಘಟನೆಗಳ ಕಾಲ್ಪನಿಕ ಕಥಾಹಂದರದ ಈ ಕಥೆ ಇಂದು ಮೊಬೈಲ್ ಫೋನ್‍ಗಳ ಬಳಕೆಯ ದುಷ್ಟಪರಿಣಾಮಗಳ ಹಿನ್ನೆಲೆಯಲ್ಲಿ ಹೇಳಿರುವುದರಿಂದ ಅಬಾಲವೃದ್ಧರಾಗಿ ಎಲ್ಲರನ್ನು ಸೆಳೆದಿರುವುದು ದಿಟ.
ಚಿತ್ರದಲ್ಲೇ ಬಳಕೆಯಾಗಿರುವ ತಂತ್ರಜ್ಞಾನ ಹಾಗೂ ಗ್ರಾಫಿಕ್ಸ್ 3D ಪರದೆಯಲ್ಲಿ ವಿಶಿಷ್ಟವಾಗಿ ಸೆಳೆಯಬಹುದಾದರೂ ನಾನು ನೋಡಿದ್ದು 2D ಪರದೆಯಾದ್ದರಿಂದ ಅಂಥ ನಿರೀಕ್ಷೆಯನ್ನು ಹುಸಿಮಾಡಿತು. ಎಂದಿರನ್ ಚಿತ್ರ ಯಂತ್ರಮಾನವನ ಕಥೆಯೇ ಅದರೂ ಆ ಯಂತ್ರ ಮಾನವನಿಗೆ ಮಾನವನ ಗುಣ ಸ್ವಭಾವವನ್ನು ಹೊರಿಸಿ ಅದು ನಾಯಕಿಯೆಡೆಗೆ ಆಕರ್ಷಿತವಾಗುವ ಮತ್ತು ಪ್ರೇಮದ ಬಲೆಗೆ ಬೀಳುವ ಚಿತ್ತಿಯ ವಿಲಕ್ಷಣ ಕಥೆಯು ಯುವ ಸಮುದಾಯವನ್ನು ದೊಡ್ಡಮಟ್ಟದಲ್ಲಿ ಆಕರ್ಷಿಸಿತ್ತು.
2.O ನಲ್ಲಿ ಪ್ರೇಮಕಥಾನಕವು ಹಿಂದೆ ಸರಿದು ಸೆಲ್‍ಫೋನ್‍ಗಳ ಹಾವಳಿ, ಪಕ್ಷಿಪ್ರೇಮಿಯಾದ ಪಕ್ಷಿರಾಜ್ ಮೊಬೈಲ್ ಫೋನ್ ವಿರುದ್ಧ ಜನ ಸರ್ಕಾರವನ್ನು ಎಚ್ಚರಿಸುವ ಕಾರ್ಯದಲ್ಲಿ ವಿಫಲನಾದ ನಂತರ ಟೆಲಿಫೋನ್ ಟವರ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೀಡಾದ ನಂತರ ಅವನು ಆತನೊಡನೆ ಗುಬ್ಬಚ್ಚಿ ಆತ್ಮಗಳು ಸೇರಿ ಮಾನವ ಲೋಕದ ಮೇಲೆ ಮಾಡುವ ದಾಳಿ, ಸೆಲ್‍ಫೋನ್‍ಗಳು, ಟವರ್‍ಗಳ ನಾಶದ ಜೊತೆಗೆ ಅದರ ತಯಾರಕ, ವಿತರಕರನ್ನು ನಾಶ ಮಾಡಲು ಹೊರಟಾಗ ಚಿತ್ತಿಯನ್ನು ನಾಯಕ ಪುನರ್ ನಿರ್ಮಾಣಗೊಳಿಸಿ ಅದರ ಒಡಲಿನಿಂದ ಮರಿಚಿತ್ತಿಗಳನ್ನು ನಿರ್ಮಿಸಿ ಆ ಪಕ್ಷಿರಾಜನನ್ನು ನಾಶಮಾಡುವ ಕಥೆ ಚಿತ್ರದಲ್ಲಿದೆ.

ಪ್ರೌಢಶಾಲಾ ಹಂತದಲ್ಲಿ ಏರ್ಪಡಿಸುವ ಪ್ರಬಂಧ, ಚರ್ಚಾಸ್ಪರ್ಧೆ, ಬಾಷಣಸ್ಪರ್ಧೆಗಳಲ್ಲಿ ಮೊಬೈಲ್ ಬಳಕೆ ಕುರಿತ ದುಷ್ಪರಿಣಾಮಗಳನ್ನು ಹೇಳುವ ಅಂಶಗಳೇ ಇಲ್ಲಿವೆ. ಆದರೆ ಅವು ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟಾಗ ಅದರ ಪ್ರಭಾವ ಹೆಚ್ಚು ಪರಿಣಾಮಕಾರಿ.
ಮಧ್ಯಂತರದಲ್ಲಿ ವಿಜ್ಞಾನಿ ಪಕ್ಷಿರಾಜನನ್ನು ಪರಿಚಯಿಸುವ ನಿರ್ದೇಶಕರು ಸೆಲ್‍ಫೋನ್‍ಗಳ ಅತಿಯಾದ ಬಳಕೆ, ಚೀನಾ, ಅಮೇರಿಕಾದಂಥ ರಾಷ್ಟ್ರಗಳು ಎರಡು ಮೂರು ಸರ್ವೀಸ್ ಪ್ರೊವೈಡರ್ ಗಳನ್ನು ಹೊಂದಿದ್ದರೆ ಬಾರತದಲ್ಲಿ ಅವುಗಳ ಸಂಖ್ಯೆ ಹತ್ತು. ಇದರಿಂದ ಗಲ್ಲಿಗಲ್ಲಿಗಳಲ್ಲಿ ಏಳುತ್ತಿರುವ ಮನೆಯ ಟೆರಸ್‍ಗಳ ಮೇಲೆ ಏಳುತ್ತಿರುವ ಟವರ್‍ಗಳು ಅವುಗಳು ಹೊರಸೂಸುತ್ತಿರುವ ವಿಕಿರಣಗಳು ಪ್ರಾಣಿಪಕ್ಷಿಗಳ ಕಣ್ಮರೆಗೆ ಕಾರಣವಾಗಿವೆ. ಪ್ರಾಣಿಪಕ್ಷಿಗಳಿಗೆ ನಮ್ಮಂತೆ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂದು ಹೇಳಲು ಪ್ರಯತ್ನಪಟ್ಟಿದ್ದಾರೆ ನಿರ್ದೇಶಕರು. ಮುಂದೆ ಅವೇ ಪಕ್ಷಿಗಳು ಮಾನವಲೋಕದ ಮೇಲೆ ದಾಳಿ ಮಾಡಿದಾಗ ಅಥವಾ ಅವುಗಳನ್ನು ರೋಬೋಟ್ ಚಿತ್ತಿ ನಾಶ ಮಾಡುವ ಸಂದರ್ಭ ಆತ ಮಾಡುವ ವಿಕಟ ಅಟ್ಟಹಾಸ ಪಕ್ಷಿಗಳನ್ನು ಅಣಕಿಸುವ ಕಿ.ಕಿ.ಕಿ. ಸದ್ದು ಮುಜುಗರ ಉಂಟುಮಾಡದೆ ಇರಲಾರದು.
ಇಂಗ್ಲೀಷ್ ಚಿತ್ರಗಳು ಅದರಲ್ಲೂ ಅಮೇರಿಕನ್ ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳು ಮಾನವ ಲೋಕವನ್ನು ಪ್ರವೇಶಿಸಿ ತನ್ನ ನಿಯಂತ್ರಣದೊಳಗೆ ತೆಗೆದುಕೊಳ್ಳಲು ಯತ್ನಿಸುವ ಅತೀ ಬುದ್ಧಿವಂತ ಅನ್ಯಗ್ರಹ ಜೀವಿಗಳ ಸಮೂಹ ಇಲ್ಲವೆ ಅತಿ ಬುದ್ಧಿವಂತರ ದುಷ್ಟಪಡೆ ಮತ್ತು ಅವುಗಳನ್ನು ಅದೇ ಟೆಕ್ನಾಲಜಿಯ ಮೂಲಕ ನಾಶ ಮಾಡುವ ಅತಿ ಮಾನುಷ ಹೀರೋಗಳ ಕಥೆಯನ್ನು ಹೊಂದಿರುತ್ತವೆ. ಅಲ್ಲಿ ಭಾರತೀಯ ಸಿನಿಮಾಗಳಲ್ಲಿ ಸಾಮಾನ್ಯವಾಗಿರುವ ಮಾನವೀಯ ನೆಲೆಯ ಪ್ರೀತಿ, ವಾತ್ಸಲ್ಯ, ಅನುಕಂಪ ಮಮತೆಯ ಪ್ರಧಾನವಾದ ಸಿನಿಮಾಗಳಿಗಿಂತ ವಿಭಿನ್ನವಾದ ಸಿನಿಮಾಗಳು ಅವು. ಆದರೆ 2.0ಚಿತ್ರದ ಯಶಸ್ಸು ಅಂಥ ಚಿತ್ರಗಳಿಗೆ ನಾಂದಿ ಹಾಡುವ ಸಾಧ್ಯತೆಯೂ ಇದೆ.
ಶಂಕರ್ ರವರ ಚಿತ್ರವನ್ನು 2.೦ ವರ್ಷನನ್ನು ನೋಡಿದಾಗ ಮಕ್ಕಳು ಆಡುವ ವಿಡಿಯೋ ಗೇಮ್‍ಗಳಿಗಿಂತ ಅದು ಭಿನ್ನವೆನಿಸುವುದಿಲ್ಲ. ಅಲ್ಲಲ್ಲಿ ಅನ್ನಿಯನ್ ಸಿನಿಮಾದ ದಾಟಿಯನ್ನು ಹೊಂದಿರುವ ಶಂಕರ್ ರವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇದು ಸಪ್ಪೆಯೆ ಸರಿ. ರಜನೀಕಾಂತ್ ಅಕ್ಷಯಕುಮಾರ್ ರವರ ಅಭಿನಯದಲ್ಲಿ ಸಹಜತೆ ಎಷ್ಟು, ಗ್ರಾಫಿಕ್ಸ್ ಎಷ್ಟು ಎಂಬ ಗೊಂದಲದ ನಡುವೆ ಚಿತ್ರ ನಗರದ ಕಂಪ್ಯೂಟರ್ ಜ್ಞಾನ ಹೊಂದಿರುವವರಿಗೆ ಹಿಡಿಸಬಹುದಾದರೂ ಉಳಿದ ಜನಸಾಮಾನ್ಯರಿಗೆ ಇದು ಶಂಕರ್ ಹೇಳಿದ ಕಾಗಕ್ಕ, ಗೂಬಕ್ಕನ ಕಥೆಯೆ ಸರಿ.







0 Comments