-ಅಕ್ಷಯ ಕಾಂತಬೈಲು
ಮುಟ್ಟಿದುದು ಮಾತ್ರ
ಬಿಡಿಸಿಕೊಳ್ಳಬಲ್ಲುದು
ಹೊರಡಿದುದು
ಹೋಗುವುದೇ ಹೋಗುವುದು
ಹೋಗುತ್ತಲಿರಬೇಕಷ್ಟೆ
ಈ ಪರಿಸ್ಥಿತಿಯಲ್ಲಿ ಬ್ರೇಕ್ ಇಕ್ಕಬಾರದು
ರಕ್ತವನ್ನೇ ಮಣಿ ಸರಕಾಗಿಸಿದ ರಕ್ತೇಶ್ವರಿಗೆ
ಮನುಜ ಪರಿಪೂರ್ಣ ವೇಗದಲ್ಲಿ
ಹೊರಬರುವ ನಿಯಂತ್ರಣ ಇರಬೇಕು
ಬೈಕ್ ಮಹಿಷನ ಥರ ಜಿಗಿಸುತ್ತಿದ್ದರೆ
ಅವಳ ಮಧು ತುಂಬಿ ಥುಳುಕುವುದು
ಮುದ್ದಿಸಿ ಹೇಳುವುದಾಕೆ ʼಯೌವನಕ್ಕೊಂದು
ಬ್ರೇಕ್ ಇರಲಿ ಎಳೆದು ಹಿಡಿತದ
ಸದ್ದು ವೀಣಾ ತಂತಿಗಳ ಮಿಡಿತದಂತಿರಲಿ
ಹೆಲ್ಮೆಟ್ ಛಾಯೆ ಹಿಂದಿನ ಸತ್ಯ
ಸರಿಯಾಗಿ ಘೋಚರಿಸುವುದು ರಾತ್ರಿಯ
ಮಬ್ಬು ಬೆಳಕಿನಲ್ಲಿ ಸವಾರ ಕಣ್ಣು ದೊಡ್ಡದು
ಮಾಡಿ ಬೈಕು ಬಿಡುವಾಗ
ಭವಾನಿ ಢಾಕಿನಿ ಶಂಕಿನಿಯರೇ ತುಂಬಿದ
ಹ್ಯಾಂಡಲ ಮೇಲೆ ಕೈಯಿಟ್ಟು ಚಲನಾ
ಚರಣಕ್ಕೆ ಮುಂದಡಿ ಇಡುವಾಗ
ಟ್ರಾಫಿಕ್ನಿಂದ ಹೊರಬರುವುದು
ಗೊತ್ತಿರಲೇ ಬೇಕಷ್ಟೆ!






0 Comments