ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಕ್ತದ ನದಿಯಲ್ಲಿ ಧರ್ಮದ ದೋಣಿ ಎಲ್ಲಿಗೆ ಹೊರಟಿದೆ?

ಹೆಸರಿಲ್ಲದ ಪುಟಗಳು

ಸಿ ವಿ ಶೇಷಾದ್ರಿ ಹೊಳವನಹಳ್ಳಿ

1 ರೆಕ್ಕೆಗಳನ್ನು ಕಿತ್ತು ಹೊದೆಸಿ ಮಾಡಲಾದ ಕುಟೀರದಲ್ಲಿ ವಾಸ ಮಾಡಿದೆ ಆಕಾಶ. ಹೆಣಗಳ ಹೆಗಲ ಮೇಲೆ ಮಲಗಿದೆ ಭೂಮಿ. ಚರ್ಮದ ಬಟ್ಟಲುಗಳು ಬಳುಕುತಿವೆ. ಒಮ್ಮೆ ವಿಷ, ಒಮ್ಮೆಅಮೃತ ಬಿಂದುತೊಟ್ಟಿಕ್ಕುತ್ತಿವೆ. ರಕ್ತದ ನದಿಯಲ್ಲಿ ಧರ್ಮದ ದೋಣಿ ಎಲ್ಲಿಗೆ ಹೊರಟಿದೆ? 2 ಸಮುದ್ರವನ್ನೇ ಹಾರಿ ಬಂದ ರೆಕ್ಕೆಗಳು ದಡದಲ್ಲಿ ಬೀಸಣಿಗೆಯಾಗಿ ಮಾರಾಟವಾದವು. ಘೋರ ಕಾಡನ್ನೇ ದಾಟಿ ಬಂದ ಪಾದುಕೆಗಳು ಊರೊಳಗೆ ಉರುವಲಾದವು. 3 ಆಯುಧಗಳು ಬೇರೆ ಬೇರೆಕಡೆ ಹೋಗುವ ಮುಂಚೆ ಇದೇ ಮಾರುಕಟ್ಟೆಯಲ್ಲಿದ್ದವು. 4 ನೀರು ಸೇರುವ ಮುಂಚೆ ಚರಂಡಿ. ಬನ್ನಿ ಬೇಗ ಚಾಚೋಣ ಚೊಂಬು. ಬನ್ನಿ ಬೇಗ ಏಣಿ ಮಾಡೋಣ ಚಟ್ಟವಾಗುವ ಮುಂಚೆ ಬೊಂಬು. 5 ಮಧುರಕಂಠದ ಹಕ್ಕಿಗಳೇ.. ಏಕಾಂತದಲ್ಲಿ ಎಷ್ಟು ಹುಳುಗಳ ಸಾಯಿಸಿದಿರಿ. 6 ಎಂತೆಂಥ ಭೀಕರ ಘಟನೆಗಳು ಎಷ್ಟೊಂದು ಸೋಲುಗಳ ಸಮಾಚಾರ..! ಎಂಥ ಭಯದ ಸಮಯ..! ಮಧ್ಯೆ ಮಧ್ಯೆ ಹೇಳಲಾಗುತ್ತಿದೆ.. ಸಮಾಚಾರ್ಔರ್ ಭೀ ಹೈಂ ಪಹಲೆ ಲೇಂಗೆ ವಿರಾಮ್]]>

‍ಲೇಖಕರು G

9 September, 2012

1 Comment

  1. ಡಿ. ಎಸ್.ರಾಮಸ್ವಾಮಿ

    ಕವಿಯ ಆತಂಕಕ್ಕೆ ಓದುಗನೂ ಒಳಗೊಳ್ಳುವಂತೆ ಕವಿತೆ ಸಶಕ್ತವಾಗಿದೆ. ಘಟನಗೆಳ ಭ(ಭಾ)ರದಲ್ಲಿ ಉತ್ತರ ಸಿಕ್ಕದ ತತ್ತರಗಳಿಗೆ ಕೊನೆ ಎಂದೋ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading