ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗ ಶಂಕರದ ಕನ್ನಡ ನಾಟಕೋತ್ಸವ – ಯುವ ಪ್ರಸ್ತುತಿಗಳು

ರಂಗ ಶಂಕರ ನಾಟಕಕ್ಕೆಂದೇ ಮೀಸಲಾದ ರಂಗ ಮಂದಿರ. ಹಾಗಾಗಿ ನಾಟಕಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪ್ರಯತ್ನಗಳಿಗೆ
ಎಡೆ ಮಾಡಿಕೊಡುವುದಷ್ಟೇ ಅಲ್ಲದೆ, ನಾಟಕದ ಹೊಸ ಆಯಾಮಗಳನ್ನು ಗುರುತಿಸಿ ವಿಸ್ತಾರಗೊಳಿಸುವುದು, ಹೊಸ
ಪ್ರಯೋಗಗಳನ್ನು ಸಿದ್ಧಮಾಡುವುದು ರಂಗ ಶಂಕರದ ಉದ್ದೇಶಗಳಲ್ಲೊಂದು. ಈ ದಿಸೆಯಲ್ಲಿ ರಂಗ ಶಂಕರ ಅನೇಕಾನೇಕ
ಚಟುವಟಿಕೆಗಳನ್ನು ಯೋಜಿಸಿಕೊಂಡಿದೆ. ರಂಗ ಶಂಕರ ನಾಟಕೋತ್ಸವ, ಆಹಾ ಅಂತರ ರಾಷ್ಟ್ರೀಯ ಮಕ್ಕಳ ನಾಟಕೋತ್ಸವ,
ಲಿಟ್ಲ್ ಕ್ಲೌಡ್ ಕಥಾ ಸಮಯ, ಮಾರುತಿ ಗೊಂಬೆ ರಂಗ ಮಂದಿರ ಇತ್ಯಾದಿಗಳು ರಂಗ ಶಂಕರದ ವಾರ್ಷಿಕ ಚಟುವಟಿಕೆಗಳಲ್ಲಿನ
ಹೆಗ್ಗುರುತುಗಳು.

2014ರಿಂದ ರಂಗ ಶಂಕರ ತನ್ನ ಪಂಚಾಂಗದಲ್ಲಿ ಒಂದು ಹೊಸ ಕಾರ್ಯಕ್ರಮವನ್ನು ಗುರುತಿಸಿಕೊಂಡಿದೆ. ರಂಗ ಶಂಕರದ
ಕನ್ನಡ ನಾಟಕೋತ್ಸವ. ಕಳೆದ ವರ್ಷ ಈ ನಾಟಕೋತ್ಸವದಲ್ಲಿ ಕನ್ನಡ ರಂಗಭೂಮಿ ಕಂಡ ಅತಿ ಮಹತ್ವದ ನಾಟಕ
ಪ್ರಯೋಗಗಳನ್ನು ಪ್ರಸ್ತುತ ಪಡಿಸಲಾಗಿತ್ತು. 500ಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡ ನಾಟಕಗಳನ್ನು ಶತ ಸಂಭ್ರಮದ
ನಾಟಕಗಳು ಎನ್ನುವ ಶೀರ್ಷಿಕೆಯಲ್ಲಿ ಪ್ರಸ್ತುತ ಪಡಿಸಲಾಗಿತ್ತು.
 
ನಾಟಕ ಮತ್ತು ರಂಗಭೂಮಿಯ ಆಯಾಮಗಳು ಬದಲಾಗುತ್ತಿವೆ. ನಾಟಕದ ಪರಿಕಲ್ಪನೆ ಬದಲಾಗುತ್ತಿದೆ. ಬದಲಾಗುತ್ತಿರುವ
ಆಧುನಿಕ ಜಗತ್ತಿಗೆ ತಕ್ಕಂತೆ ನಾಟಕಗಳು, ಪ್ರಯೋಗಗಳು ಸ್ಪಂದಿಸುತ್ತಿವೆ. ಪ್ರಸಕ್ತ ತಲೆಮಾರಿನ ಪ್ರತಿಭೆಗಳು ನಾಟಗಳಲ್ಲಿ ತಮ್ಮ
ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಾಟಕಗಳ ಮೂಲಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ನಾಟಕಗಳಿಗೆ ಹೊಸ ತಂತ್ರಗಳನ್ನು ಪರಿಚಯಿಸುತ್ತಿದ್ದಾರೆ. ನಾಟಕ ರಂಗ ಹಿಂದಿನಂತಿರದೆ ಬದಲಾಗುತ್ತಿದೆ. ಈ ದಿಸೆಯಲ್ಲಿ ಯುವ
ಪ್ರತಿಭೆಗೆ ಹೆಚ್ಚು ಅವಕಾಶ ಮಾಡಿಕೊಡುವ ಉದ್ದೇಶದಿಂದ ರಂಗ ಶಂಕರದ ಮುಂದಿನ ದಿನಗಳಲ್ಲಿ ಯುವ ಸಮಸ್ಯೆಗಳನ್ನು
ಕುರಿತಂತೆ ಯುವ ನಿರ್ದೇಶಕರು, ಯುವ ನಾಟಕಕಾರರು, ಯುವ ನಟ-ನಟಿಯರಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು.
ಈ ದಿಸೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ರಂಗ ಶಂಕರ ಯೋಜಿಸಿಕೊಂಡಿದೆ.
ಈ ವರ್ಷದ ಕನ್ನಡ ನಾಟಕೋತ್ಸವದಲ್ಲಿ ಆಯ್ದ ಆರು ಯುವ ನಿದರ್ೇಶಕರ ಪ್ರಯೋಗಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.
ರಂಗ ಶಂಕರದ ಕನ್ನಡ ನಾಟಕೋತ್ಸವ – ಯುವ ಪ್ರಸ್ತುತಿಗಳು.
ಕನ್ನಡ ರಂಗ ಭೂಮಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ನಾಟಕಗಳ ನಿರ್ದೇಶನ ಮಾಡುತ್ತಾ, ತಮ್ಮದೇ ನಾಟಕಗಳನ್ನು ಬರೆದು
ಕೊಳ್ಳುತ್ತಾ, ತಮ್ಮ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳುವ ಪ್ರಯತ್ನ ಮಾಡುತ್ತಾ, ರಂಗಭೂಮಿಯ ಆಳ-ಅಗಲವನ್ನು
ಹುಡುಕುವ ಪ್ರಯತ್ನದಲ್ಲಿರುವ ಆರು ಯುವ ನಿರ್ದೇಶಕರನ್ನು ರಂಗ ಶಂಕರ ಆಯ್ಕೆ ಮಾಡಿ ಆರು ನಾಟಕಗಳನ್ನು
ನಿರ್ದೇಶಿಸುವ ಜವಾಬ್ದಾರಿ ಹೊರಿಸಿದೆ.
ಈ ಆರು ಯುವ ನಿರ್ದೇಶಕರು:
ಶ್ರೀ ಅವಿನಾಶ್ ಶಟಮರ್ಶನ,
ಶ್ರೀಮತಿ ದಾಕ್ಷಾಯಿಣಿ,
ಶ್ರೀ ವೆಂಕಟೇಶ್ ಪ್ರಸಾದ್,
ಶ್ರೀಮತಿ ಅರ್ಚನಾ ಶ್ಯಾಮ್,
ಶ್ರೀ ವಿನಯ್ ಶಾಸ್ತ್ರಿ,
ಶ್ರೀ ಶರತ್ ಪರ್ವತವಾಣಿ.
ಈ ನಿರ್ದೇಶಕರು ಆಯ್ದ ನಾಟಕಗಳ ವಿವರಗಳು ಹೀಗಿವೆ.
ಕತ್ತಲೆ ಬೆಳಕು (ಶ್ರೀರಂಗ)
ದಿ ಬೆಟ್ (ಚೆಕಾವ್ನ ಕಥೆಯನ್ನಾಧರಿಸಿದ ನಾಟಕ)
ಶಾಪುರದ ಸೀನಿಂಗಿ ಸತ್ಯ (ಬಿ ಸುರೇಶ)
ಚೆರ್ರಿ ತೋಟ ( ಆಂಟನ್ ಚೆಕಾವ್ ಮತ್ತು ವೆಂಕಟೇಶ್ ಪ್ರಸಾದ್)
ರಕ್ತ ಕಣಗಿಲೆ (ರವೀಂದ್ರನಾಥ್ ಟಾಗೂರ್ ಮತ್ತು ಕೆ ವಿ ಸುಬ್ಬಣ್ಣ)
ನಿನ್ನೆಯ ನಾಳೆ (ಅವಿನಾಶ್)
ತಾವು ಆಯ್ದು ಕೊಂಡ ನಾಟಕಗಳ ಸಂಪೂರ್ಣ ಪರಿಚಯ ಪಡೆಯಲು, ನಾಟಕ ರಚನೆಯಲ್ಲಿ, ನಾಟಕ ಪ್ರಯೋಗದ ಹುಡುಕಾಟದಲ್ಲಿ ಈ ಯುವ ನಿದರ್ೇಶಕರಿಗೆ ಮಾರ್ಗದರ್ಶನ ನೀಡಲು ಆರು ಗುರುಗಳನ್ನು ರಂಗ ಶಂಕರ ಕೇಳಿಕೊಂಡಿದೆ. ಶ್ರೀ ವಿವೇಕ್ ಶಾನಬಾಗ್, ಶ್ರೀ ಜೋಗಿ, ಶ್ರೀ ಸುರೇಂದ್ರನಾಥ್, ಶ್ರೀ ಬಿ ಸುರೇಶ, ಶ್ರೀಮತಿ ದೀಪಾ ಗಣೇಶ್, ಶ್ರೀಮತಿ ಕೀರ್ತನ ಕುಮಾರ್ ಈ ಮಾರ್ಗದರ್ಶಕರು.
ಮೇ 26ರಿಂದ ಆರಂಭವಾಗುವ ನಾಟಕೋತ್ಸವದ ವಿವರಗಳು ಹೀಗಿವೆ.
ದಿನಾಂಕ   ತಂಡ      ನಾಟಕ    ನಿರ್ದೇಶಕ
ಮೇ 26   ಬೆಂಗಳೂರು ಥಿಯೇಟರ್ ಕಂಪನಿ  ಚರ್ರಿ ತೋಟ   ವೆಂಕಟೇಶ್ ಪ್ರಸಾದ್
ಮೇ 27   ದೃಶ್ಯ,  ಬೆಂಗಳೂರು     ಕೆಂಪು ಕಣಗಿಲೆ   ದಾಕ್ಷಾಯಿಣಿ ಭಟ್
ಮೇ 28  ವಿ ಎ ಎಸ್ ಪಿ,  ಬೆಂಗಳೂರು  ಕತ್ತಲೆ ಬೆಳಕು   ವಿನಯ್ ಶಾಸ್ತ್ರಿ
ಮೇ 29   ಯು ಆಂಡ್ ಮಿ ಥಿಯೇಟರ್, ಬೆಂಗಳೂರು   ದಿ ಬೆಟ್  ಶರತ್ ಪರ್ವತವಾಣಿ
ಮೇ 30   ಅಂತರಂಗ , ಬೆಂಗಳೂರು    ಶಾಪುರದ ಸೀನಿಂಗಿ ಸತ್ಯ ಅರ್ಚನ ಶಾಮ್
ಮೇ 31  ಎಸ್ ಎ ಆರ್ ಕೆ, ಬೆಂಗಳೂರು  ನಿನ್ನೆಯ ನಾಳೆ   ಅವಿನಾಶ್
 
ನಾಟಕೋತ್ಸವ ರಂಗ ಶಂಕರದಲ್ಲಿ ನಡೆಯಲಿದೆ
ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 3.30ಕ್ಕೆ ಕೂಡಾ ಪ್ರದರ್ಶನಗಳಿರುತ್ತವೆ.

‍ಲೇಖಕರು G

25 May, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading