ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಶಂಕರದಲ್ಲಿ ’ಕುಡಿಯಾಟ್ಟಂ’ ಶಿಬಿರ


‘ಕುಡಿಯಾಟ್ಟಂ’ ವಿಶ್ವದ ಅತ್ಯಂತ ಪುರಾತನ ಕಲಾ ಪ್ರಕಾರಗಳಲ್ಲಿ ಒಂದು. ಕುಡಿಯಾಟ್ಟಂನ ಒಬ್ಬ ನಟ ಅಥವಾ ನಟಿಗೆ ತನ್ನ ಶರೀರದ ಮೇಲೆ ಅಸಾಧ್ಯ ನಿಯಂತ್ರಣವಿರಬೇಕಾದ್ದು ಅನಿವಾರ್ಯ. ಶರೀರದ ಜೊತೆಯಲ್ಲೇ ತನ್ನ ಮನಸ್ಸಿನ ಮೇಲೂ ಹಿಡಿತವಿರಬೇಕಾದದ್ದೂ ಅನಿವಾರ್ಯ. ಕಪಿಲ ವೇಣು ಇಂದಿನ ಭಾರತದ ಕುಡಿಯಾಟ್ಟಂನ ಏಕೈಕ ನಟಿ. ಪ್ರಪಂಚದಾದ್ಯಂತ ಪ್ರದರ್ಶನಗಳನ್ನು ನೀಡಿರುವ ಈಕೆ ಏಪ್ರಿಲ್ 16ರಿಂದ 20ರವರೆಗೆ ಪ್ರತಿದಿನ ಸಂಜೆ 5ರಿಂದ 7ರವರೆಗೆ ನಟರಿಗೆ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆ. ಐದು ದಿನಗಳ ಈ ತರಬೇತಿ ಶಿಬಿರದ ಪ್ರವೇಶ ಶುಲ್ಕ 3000 ರುಪಾಯಿಗಳು. ಭಾಗವಹಿಸಲು ಇಚ್ಚೆಯುಳ್ಳ ನಟರು ಕೂಡಲೇ office@rangashankara.in ಅನ್ನು ಸಂಪರ್ಕಿಸಿ

‍ಲೇಖಕರು avadhi

12 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading