ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಶಂಕರದಲ್ಲಿ ಕಂಡ ಲಂಕೇಶ್

ರಂಗಶಂಕರ ಈ ಬಾರಿ  ಉತ್ಸವ ನಡೆಸುವುದರ ಮೂಲಕ ಯುಗಾದಿಯನ್ನು ವಿಶಿಷ್ಟವಾಗಿ ಆಚರಿಸಿತು. ಇಡೀ ದಿನ ರಂಗ ಶಂಕರದ ಎಲ್ಲಿ ನೋಡಿದ್ದರೂ ಲಂಕೇಶ್ ಕಂಡು ಬಂದರು.  ವೇದಿಕೆಯ ಮೇಲೆ ಲಂಕೇಶರ ನಾಟಕಗಳು, ಆವರಣದಲ್ಲಿ ಲಂಕೇಶರ ಕವಿತೆಗಳು, ನೀಲು ಪದ್ಯಗಳು, ಪಾಪದ ಹೂಗಳು, ಲಂಕೇಶರ ಕಥೆಗಳ ವಾಚನ . ಅಲ್ಲೇ ಒಂದೆಜ್ಜೆ ಮುಂದಿಟ್ಟರೆ ಲಂಕೇಶರು ಬರೆದ ಅಷ್ಟೂ ಕೃತಿಗಳ ಮಾರಾಟ, ಹೊರಗೆ ಕಾಲಿಟ್ಟರೆ ಲಂಕೇಶರ ಮಲೆನಾಡಿನ ತಿಂಡಿಗಳು.

ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಸಾಹಿತಿ ಪುರಸ್ಕಾರ ಪಡೆದ ಅರ್ರೀಫ್ ರಾಜಾ, ಸಾಹಿತ್ಯ ಪರಿಷತ್ ನ ಶ್ರೀವಿಜಯ ಪುರಸ್ಕಾರ ಪಡೆದ ಜ ನಾ ತೇಜಶ್ರೀ ಕವಿತೆಗಳನ್ನು ವಾಚಿಸಿದ್ದು ವಿಶೇಷವಾಗಿತ್ತು. ಬಿ ಸುರೇಶ, ಅರುಣಕುಮಾರ ಜೋಳದಕೂಡ್ಲಿಗಿ, ಸುಧನ್ವ ದೇರಾಜೆ, ಅನಂತ ಚಿನಿವಾರ್ ಕವಿತೆಗಳನ್ನು ಓದಿದರೆ ಎಂ ಡಿ ಪಲ್ಲವಿ ಎಲ್ಲಿಂದಲೋ ಬಂದವರು ಚಿತ್ರಕ್ಕಾಗಿ ಲಂಕೇಶ್ ಬರೆದ ಹಾಡಿಗೆ ದನಿಯಾದರು ಮೌನೇಶ್ ಬಡಿಗೇರ್ ರೊಟ್ಟಿ ಕಥೆಯನ್ನು ವಾಚಿಸಿದರು. ಯೋಗರಾಜ್ ಭಟ್ ನೀಲು ಕವಿತೆಗಳನ್ನೂ ಜಿ ಎನ್ ಮೋಹನ್ ಪಾಪದ ಹೂಗಳನ್ನೂ ವಚನ ಮಾಡಿದರು.

ಅಭಿನಯ ತರಂಗ ಪ್ರಮೋದ್ ಶಿಗ್ಗಾಂವ್ ನಿರ್ದೇಶನದಲ್ಲಿ ಸಂಕ್ರಾತಿಯನ್ನು ಅಭಿನಯಿಸಿತು ಶ್ರೀನಿವಾಸ ಪ್ರಭು ಪೋಲೀಸರಿದ್ದಾರೆ ಎಚ್ಚರಿಕೆ ನಾಟಕದ ಏಕವ್ಯಕ್ತಿ ಪ್ರದರ್ಶನ ನೀಡಿದರು. ನಟರಾಜ ಹೊನ್ನವಳ್ಳಿ ಸಹಪಾಟಿ ಕಥೆಯನ್ನು ರಂಗಕ್ಕೇರಿಸಿದರೆ, ಎಸ್ ಆರ್ ರಮೇಶ್ ಟಿ ಪ್ರಸನ್ನನ ಗೃಹಸ್ಥಾಶ್ರಮ ನಿರ್ದೇಶಿಸಿದರು.

‍ಲೇಖಕರು G

9 April, 2013

2 Comments

  1. na.damodara shetty

    ho! eshtu olleya kaaryakrama erpadisidiri-naanu bengaluralli illada dinave hiigaagabekitta?

  2. KM

    ಲಂಕೇಶ್ ಎಂದಾಕ್ಷಣ ಅವರ ಪತ್ರಿಕೆ ರೋಮಾ೦ಚನಗೊಳ್ಳುತ್ತದೆ. ಅವರ ಪರವಾಗಿ ನಡೆಯುವ ಸಭೆ ಸಮಾರಂಭಗಳು ಜಾಣವಾಗುತ್ತವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading