ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’

ಎ ಮಿಡ್ ಸಮ್ಮರ್ ನೈಟ್ಸ್ಡ್ರೀಮ್ ನಾಟ ಕಒಂದು ಮದುವೆಯ ಕುರಿತಾದದ್ದು ಥೀಸಿಯಸ್, ಹಿಪ್ಪೊಲಿಟ, ಲೈಸ್ಯಾಂಡರ್, ಹರ್ಮಿಯ, ಡಿಮಿಟ್ರಿಯಸ್ ಮತ್ತು ಹೆಲೆನ ಪ್ರೇಮದಲ್ಲಿ ಬಿದ್ದಿದ್ದಾರೆ. ಥೀಸಿಯಸ್ ಮತ್ತು ಹಿಪ್ಪೋಲಿಟಾಳ ಮದುವೆ ನಿಶ್ಚಯವಾಗಿತಯಾರಿ ನಡೆದಿದೆ. ಹರ್ಮಿಯ ಮತ್ತು ಲೈಸ್ಯಾಂಡರ್‌ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಹೆಲೆನಾಳಿಗೆ ಡಿಮಿಟ್ರಿಯಸ್ ಮೇಲೆ ಪ್ರೇಮ, ಆದರೆ ಹರ್ಮಿಯಾಳ ತಂದೆ ಈಜಿಯಸ್ ಅವಳ ಮದುವೆಯನ್ನುಡಿಮಿಟ್ರಿಯಸ್‌ಜೊತೆ ಮಾಡಲು ನಿಶ್ಚಯಿಸಿರುತ್ತಾನೆ.

ಮದುವೆಯ ಸಂಭ್ರಮಾಚರಣೆಯಲ್ಲಿಆಡಬೇಕಾದ ನಾಟಕದ ತಾಲೀಮನ್ನು ಬಾಟಮ್ ಮತ್ತು ಅವನ ತಂಡಕಾಡಿನಲ್ಲಿ ನಡೆಸುತ್ತಿರುತ್ತದೆ. ಇದೇ ವೇಳೆಯಲ್ಲಿ ಕಿನ್ನರ ಲೋಕದ ಒಬೆರಾನ್ ಮತ್ತು ಟೈಟಾನಿಯ ಮಧ್ಯೆ ವಾಗ್ವಾದ ಉಂಟಾಗುತ್ತದೆ. ಇದರ ಭಾಗವಾಗಿ ಒಬೆರಾನ್‌ ತನ್ನ ಸೇವಕ ಪಕ್‌ಎಂಬುವನನ್ನುರಹಸ್ಯ ನಿಯೋಜನೆಯೊಂದಕ್ಕೆ ಕಳುಹಿಸುತ್ತಾನೆ.

ಮೊದಲೇ ಗೊಂದಲದಲ್ಲಿದ್ದ ಮದುವೆ ಮನೆಯ ಪ್ರೇಮಿಗಳು, ಪಕ್‌ಗೊತ್ತಿಲ್ಲದೆ ಮಾಡುವ ಒಂದುತ ಪ್ಪಿನಿ೦ದಾಗಿ ಇನ್ನೂ ಹೆಚ್ಚು ಗೊಂದಲಕ್ಕೆ ಒಳಗಾಗುತ್ತಾರೆ. ತಾನು ಮಾಡಿದತಪ್ಪನ್ನು ಪಕ್ ಸರಿಪಡಿಸಿದ ಮೇಲೆ ಎಲ್ಲಾ ಸುಖಾಂತ್ಯವಾಗಿ ಜೋಡಿಗಳು ಒಂದಾಗುತ್ತಾರೆ.

ಒಬೆರಾನ್: ಟೈಟಾನಿಯ ನಿದ್ರಿಸುವುದನೇಕಾದು ಆ ರಸವಕಣ್ಣೆವೆಗೆ ಬಳಿವೆ. ಎದ್ದೊಡನೆ ಸಿಂಹವೊ, ಕರಡಿಯೊ, ತೋಳವೊ, ಗೂಳಿಯೊ, ಕಿಚಾಯಿಸುವ ಸಿಂಗಳೀಕವೊ ಮೊದಲುಕಣ್ಣಿಗೆ ಬಿದ್ದ ಪ್ರಾಣಿಯನ್ನು

ಅತಿತೀವ್ರವಾಗಿ ಕಾಮಿಸುವಳು. ಬಳಿಕ ನಾನರಿತ ಮತ್ತೊಂದು ಪ್ರತಿರಸದಿಂದ- ಮುತ್ತೈದೆ ಮೊಗ್ಗಿನ ರಸದಿಂದ
ಈ ರಸದ ಪ್ರಭಾವವನು ನಿವಾರಿಸುವ ಮುಂಚೆ ಆ ಹಸುಳೆ ನನ್ನ ಸೇವೆಗೆ ಸಲ್ಲುವಂತೆ ಪ್ರಚೋದಿಸುವೆ.
ಅರೆ, ಯಾರಿಲ್ಲಿ ಬಂದವರು? ನಾನವರಿಗದೃಶ್ಯ; ಕದ್ದು ಕೇಳುವೆನವರ ಸಂಭಾಷಣೆ.

ಡೆಮಿಟ್ರಿಯಸ್: ಬೆನ್ನಟ್ಟಿ ಬರಬೇಡ ನಾ ನಿನ್ನ ಪ್ರೀತಿಸುವುದಿಲ್ಲ, ಚೆಲುವೆ ಹರ್ಮಿಯ ಮತ್ತು ಲೈಸ್ಯಾಂಡರ್‌ಎಲ್ಲಿ?
ಒಬ್ಬಳನ್ನು ನಾನು ಕೊಲ್ಲುತ್ತಿದ್ದರೆ, ಮತ್ತೊಬ್ಬಳು ನನ್ನ ಕೊಂದಿದ್ದಾಳೆ. ಅವರುಕದ್ದುಕಾಡಿಗೆಓಡಿದ್ದನ್ನ ನೀನು ತಿಳಿಸಿದ್ದಕ್ಕೆ; ನನ್ನ ಮೆಚ್ಚಿನ ಹರ್ಮಿಯಳನ್ನ ಕಾಣದೆ ಈ ಕಗ್ಗಾಡಿನಲ್ಲಿ ಹುಚ್ಚನಂತಲೆದಿದ್ದೇನೆ. ನಡೆ ಇಲ್ಲಿ೦ದ, ಮತ್ತೆಂದೂ ಹಿಂಬಾಲಿಸಿ ಬರಬೇಡ.

ಹೆಲೆನ: ಡೆಮಿಟ್ರಿಯಸ್. ನನಗೆಸಗಿರುವಕೇಡು ಸ್ತ್ರೀಕುಲಕ್ಕೆ ಅಪಚಾರ, ನಾವು ಪ್ರೇಮಕ್ಕಾಗಿಕಾದಾಡುವಂತಿಲ್ಲ, ಗಂಡಸರ ಹಾಗೆ. ನಾವು ಪ್ರೀತಿಸಲ್ಪಡಲು ಹುಟ್ಟಿರುವೆವೇ ಹೊರತು ನಾವಾಗಿ ಪ್ರೀತಿಸುವುದಕ್ಕಲ್ಲ. ನಿನ್ನ ಬೆಂಬತ್ತಿ ಬರುತ್ತೇನೆ. ಅತಿಯಾಗಿ ಪ್ರೇಮಿಸಿದ ತೋಳುಗಳಲ್ಲೇ ನನ್ನ ಬಾಳ ಕೊನೆಕಂಡು ಈ ನರಕಯಾತನೆಯನ್ನೆ ಸ್ವರ್ಗ ಸುಖವಾಗಿಸುತ್ತೇನೆ.

ನೇಪಥ್ಯದಲ್ಲಿ…
ಬೆಳಕು, ವಿನ್ಯಾಸ ಹಾಗೂ ನಿರ್ದೇಶನ: ಜೀವನ್‌ಕುಮಾರ್ ಹೆಗ್ಗೋಡು
ವ ಸ್ತ್ರ ವಿನ್ಯಾಸ: ಬಿ.ಎನ್. ಶಶಿಕಲಾ
ನೃತ್ಯ ಹಾಗೂ ಸಹ ನಿರ್ದೇಶನ: ಕಾರ್ತಿಕ್‌ಉಪಮನ್ಯು
ರಂಗಸಜ್ಜಿಕೆ, ಪರಿಕರ, ಪ್ರಸಾದನ: ಮಂಜುನಾಥ್ ಕಾಚಕ್ಕಿ
ಸಹಾಯ: ಪುರುಷೋತ್ತಮ ಕಾಕಂಬಿ
ಹಿನ್ನೆಲೆ ಸಂಗೀತ ನಿರ್ವಹಣೆ: ಮಂಜು ಮಂಗಲ
ಸ೦ಗೀತ ಸಾಂಗತ್ಯ: ಚಿರ೦ತ್‌ಎನ್.ಅಮೋಘ್, ಶಾಂತಕುಮಾರ್
ರ೦ಗ ನಿರ್ವಹಣೆ: ಕು. ಮಾನಸ ಮತ್ತು ಕು. ಸ್ನೇಹಾ
ನಿರ್ಮಾಣ ನಿರ್ವಹಣೆ: ರವಿಪ್ರಸಾದ್ ಹೆಚ್.ಆರ್. ಮತ್ತುರಾಜೇಶ್ ಬಿ.
ನಿರ್ಮಾಣ: ರಂಗವಲ್ಲಿ

ಪಾತ್ರ ಪರಿಚಯ
ಥೀಸಿಯಸ್: ಸಂದೀಪ್
ಹಿಪಾಲಿಟ: ಸುನೀತಾ, ಮಾನಸ,
ಫಿಲಾಸ್ಟ್ರೇಟ್: ವಾಸುದೇವ್
ಲೈಸ್ಯಾಂಡರ್: ಗೌತಮ್
ಹರ್ಮಿಯಾ: ದವನಧನರಾಜ್
ಡೆಮಿಟ್ರಿಯಸ್: ಹೊಯ್ಸಳ
ಹೆಲೆನ: ದವನಧನರಾಜ್, ಸುಷ್ಮಾ
ಪೀಟರ್‌ಕ್ವಿನ್ಸ್: ಮಂಜುಆರ್.
ನಿಕ್ ಬಾಟಮ್: ಆದರ್ಶ್
ಟಾಮ್ ಸ್ನೌಟ್: ರಾಕೇಶ್
ಫ್ರಾನ್ಸಿಸ್ ಫ್ಲೂಟ್: ಸಂಜಯ್
ಬಡಗಿ ಸ್ನಗ್: ರಕ್ಷಿತ್
ರಾಬಿನ್ ಸ್ಟಾರ್ವಲಿಂಗ್: ಧನುಷ್
ಒಬೆರಾನ್: ಪ್ರಣವ್ ಸ್ವರೂಪ್
ಟೈಟಾನಿಯಾ: ಭಾರ್ಗವಿ, ಚಂದನರೋಹಿಣಿ
ಪಕ್: ಮಜು, ಧನುಷ್
ನೃತ್ಯ ಮೇಳದವರು: ಹರ್ಷಿತ್, ಸುಚರಿತ, ವೆಂಕಟೇಶ, ಶ್ರೀಲಕ್ಷ್ಮೀ
ಸ್ನೇಹಾ, ಪ್ರಜ್ವಲ್, ಹರ್ಷಾ, ದೀಪ್ತಿ

‍ಲೇಖಕರು Admin

May 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: