ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯೋಗೇಂದ್ರಾಚಾರ್ ಎ ಎನ್ ಕವಿತೆ- ಸ್ಥಾನ ಗಿಟ್ಟಿಸಿಕೊಂಡವರು…

ಯೋಗೇಂದ್ರಾಚಾರ್ ಎ ಎನ್

ಮನೆಯ ಹಬ್ಬದಲಿ
ತಟ್ಟೆ ಲೋಟ ಹಿಡಿದು
ಸಿಹಿ ಹೋಳಿಗೆಯ ಪಡೆದು
ಸ್ಥಾನ ಗಿಟ್ಟಿಸಿಕೊಂಡಿದ್ದಾರೆ

ತಟ್ಟೆ ಲೋಟಗಳಷ್ಟೇ ಅಲ್ಲ
ಕೈ ಕಾಲು ಹಿಡಿದರೂ
ಹೂರಣದ ಘಮಲು
ಕಾಣದ ಕಣ್ಮಣಿಗಳು
ಜಾಗಟೆ ಬಾರಿಸಿದ್ದಾರೆ
ಬೀದಿ ಬೀದಿಗಳಲ್ಲಿ
ದೊಂಬರಾಟ ನಡೆಸಿ
ಮನೆ ಹೋಳಿಗೆಯ
ಹೂರಣಕ್ಕೆ ಹೇಸಿಗೆಯ ಮೆತ್ತಿ
ಹೆದರಸಿ ಬೆದರಿಸಿ
ಮನೆಯಲ್ಲೇ
ಸ್ಥಾನ ಗಿಟ್ಟಿಸಿಕೊಂಡಿದ್ದಾರೆ

ಮತ್ತೊಷ್ಟು ಮನೆ ಮಂದಿ
ಮನೆಗೆ ಬೆಂಕಿ ಹಚ್ಚಿದ್ದಾರೆ
ಬೇರೊಂದು ಮನೆ ಕಟ್ಟಿ
ಹೊಸ ಮನೆ ಪ್ರವೇಶಕ್ಕೆ
ಹೋಳಿಗೆಯ ತಟ್ಟಿದ್ದಾರೆ

ಸಗ್ಗದ ಗೂಡು ಸೇರಿದ
ಷರೀಫಜ್ಜನನ್ನು ಕರೆದು
ಸರ್ವಜ್ಞ ಚೌಡಯ್ಯರಿಗೆ
ಸಜ್ಜೆಯನು ನೀಡಿ
ಬೆಂಕಿ ಹಚ್ಚಿದವರ
ಕೈ ಹಿಡಿದು
ಸ್ಥಾನ ಗಿಟ್ಟಿಸಿಕೊಂಡಿದ್ದಾರೆ
ಈ ಮನೆ ಇಲ್ಲದಿದ್ದರೂ
ಆ ಮನೆಯಲ್ಲಿ
ಸ್ಥಾನ ಗಿಟ್ಟಿಸಿಕೊಂಡಿದ್ದಾರೆ

‍ಲೇಖಕರು Admin

10 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading