ಯು ಆರ್ ಅನಂತಮೂರ್ತಿ ಆರೋಗ್ಯದಲ್ಲಿ ತೀವ್ರ ಏರುಪೇರು


 
ತೀವ್ರ ಅನಾರೋಗ್ಯದ ಕಾರಣದಿಂದ ಸಾಹಿತಿ ಅನಂತಮೂರ್ತಿ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಸಾಹಿತಿ ಅನಂತಮೂರ್ತಿ ಆರೋಗ್ಯದ ಬಗ್ಗೆ ವಿವರಣೆ ನೀಡಿದ ವೈದ್ಯರು, ’ಅವರ ಎರಡೂ ಕಿಡ್ನಿ ಕಾರ್ಯ ನಿರ್ವಹಿಸುತ್ತಿಲ್ಲ, ಮನೆಯಲ್ಲೇ ಡಯಾಲಿಸಿಸ್ ನಡೆಯುತ್ತಿತ್ತು, ಬ್ಲಡ್ ಇನ್ಫೆಕ್ಷನ್, ಹೃದಯ ಸಂಬಂಧಿ ತೊಂದರೆ, ಲೋ ಬಿ ಪಿ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ.’
’ಕಳೆದ ಹದಿನೈದು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು, ಈಗ ಮತ್ತಷ್ಟು ಚಿಂತಾಜನಕವಾಗಿದೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಅರೋಗ್ಯದ ಬಗ್ಗೆ ಈಗಲೆ ಏನೂ ಹೇಳುವುದು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
 
 

‍ಲೇಖಕರು G

August 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. hg malagi

    ಸನ್ಮಾನ್ಯ ಅನಂತಮೂತರ್ಿಯವರು ಕನ್ನಡ ನಾಡು ಕಂಡ ಬಹುಮುಖ ಪ್ರತಿಭೆಯ ಬಹು ಚಚರ್ಿತ ಬಹು ವಿವಾದಾತ್ಮಕ ಬರಹಗಾರ. ಕನ್ನಡ ಕುಸುಮದ ಕಂಪನ್ನು ತಮ್ಮ ಕೃತಿಗಳಿಂದ ವಿಶ್ವಾದ್ಯಂತ ಪಸರಿಸಿದ ಕೀತರ್ಿ ಅವರಿಗೆ ಸಲ್ಲುತ್ತದೆ. ಸದಾ ಒಂದಿಲ್ಲೊಂದು ಹೇಳಿಕೆಗಳಿಂದ ವಿವಾದವನ್ನು ಮೈಮೇಲೆಳೆದುಕೊಂಡವರು. ಅನೇಕಸಲ ಮಡಿವಂತರನ್ನು ಟೀಕಿಸುವ ಭರದಲ್ಲಿ ನಮ್ಮ ಸನಾತನರನ್ನು ಎದುರು ಹಾಕಿಕೊಂಡವರು. ಇತ್ತೀಚೆಗೆ ಡಾ: ಕಲಬುಗರ್ಿಯವರ ಮೂತರ್ಿ ಮೇಲೆ ಮೂತ್ರ ವಿಸರ್ಜನೆಯ ಹೇಳಿಕೆಯ ಸಂದರ್ಭದಲ್ಲಿಯೂ ಅವರನ್ನು ವಿವಾದವು ಸುತ್ತಿಕೊಂಡಿತ್ತು. ಈಗಿನ ಪ್ರಧಾನಿಯವರ ವಿಷಯದಲ್ಲಿಯೂ ಹೇಳಿಕೆ ನೀಡಿ ಜನಾಕ್ರೋಶವನ್ನು ಎದುರಿಸಿದವರು. ಆದರೂ ಅವರೆಂದೂ ವಿಚಾರಗಳೊಂದಿಗೆ ರಾಜಿಮಾಡಿಕೊಂಡವರಲ್ಲ. ಆ ಧೈರ್ಯಕ್ಕಾಗಿಯಾದರೂ ಅವರನ್ನು ಅನೇಕರು ಇಷ್ಟಪಡುತ್ತಾರೆ.(ಬಹುಶಃ ಅವರು ನಂಬದ) ದೇವರು ಅವರನ್ನು ಬೇಗ ಗುಣಮುಖರನ್ನಾಗಿ ಮಾಡಲೆಂದು ಪ್ರಾಥರ್ಿಸುವೆ. ಮೂತರ್ಿಗಳೇ ಬೇಗ ಗುಣಮುಖರಾಗಿ ಬನ್ನಿ! ನಮ್ಮೆಲ್ಲರ ಹಾರೈಕೆ ನಿಮ್ಮೊಂದಿಗೆ ಸದಾ ಇರುತ್ತದೆ

    ಪ್ರತಿಕ್ರಿಯೆ
  2. kvtirumalesh

    ಅನಂತಮೂರ್ತಿಯವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅವರು ಚಂದನ ವಾಹಿನಿಯಲ್ಲಿ ಪ್ರತಿ ಭಾನುವಾರ ನೀಡುತ್ತಿದ್ದ ಸಾಹಿತ್ಯ ಕಾರ್ಯಕ್ರಮವನ್ನು ನಾನು ವೀಕ್ಷಿಸುತ್ತಿದ್ದೆ; ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಇನ್ನು ಯಾರೂ ನೀಡದ ಹೊಳಹುಗಳನ್ನು ಅವರು ನೀಡುತ್ತಿದ್ದರು. ಆದರೆ ಈಚೆಗೆ ಆ ಕಾರ್ಯಕ್ರಮ ಕಾಣಿಸುತ್ತಿರಲಿಲ್ಲ. ಅವರ ದೇಹಪ್ರಕೃತಿ ಹದಗೆಟ್ಟಿರಬೇಕು ಎಂದು ಊಹಿಸಿದ್ದೆ. ಅವರು ಶೀಘ್ರವೇ ಮತ್ತೆ ಆರೋಗ್ಯವಂತರಾಗಲಿ.
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: