ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುಗಾದಿ ಬೆಲ್ಲದ ಆಸೆ…

ಮಾಲಾ ಅಕ್ಕಿಶೆಟ್ಟಿ 

ವಿಶಾಲ ಆಕಾಶ ಯುಗಾದಿ
ಆದಿ ಅಂತ್ಯಗಳಾಚೆ ನಿರಂತರ
ಸಂಭ್ರಮಾಚರಣೆ ಸಸ್ಯ, ಗಿಡ, ಪ್ರಾಣಿ, ಪಕ್ಷಿ
ಮಾನವನೋ ಹೊಸದರ ನಿರೀಕ್ಷೆಯಲ್ಲಿ

ಹೊಸ ವರ್ಷ ತೆರೆಯುವ
ಬೇವು ಬೆಲ್ಲದ ಸ್ನೇಹ
ಕಷ್ಟ ಸುಖಗಳ ಸಮಾಗಮ
ಮಿಶ್ರಿತ ಸಂವೇದನೆಗಳ ನೋಟ

ಕಷ್ಟಗಳೆಂದಿರೆ ಜೀವನ ಕಹಿ
ಸುಖವೆಂದಿರೆ ಬೆಲ್ಲದ ಹೂರಣ
ಸಮತೋಲನವೇನೋ ಸರಿ
ಬರದಿರೆ, ಅನಿರೀಕ್ಷಿತ ಬೇವು ಸಂಪೂರ್ಣ

ಅವನೊಬ್ಬ ಬೆಲ್ಲದ ಆಸೆಗಾರ
ಬೇವು ದೇಹದಾದ್ಯಂತ
ಈ ಯುಗಾದಿಗೆ ಸಿಗಬಹುದೇ
ಕಹಿಯಿಲ್ಲದ ಬೇವು

ಜೀವನವೇ ಸಿಹಿಯಾದವ
ಓಗೊಡಲಾರ ಬೇವಿಗೆ
ಬೇವಿನಲ್ಲಿ ಮಿಂದೆದ್ದ ಕಣ್ಣಾಲಿಗಳು
ಸಿದ್ಧ ಬೆಲ್ಲ ಚೀಪಲು

‍ಲೇಖಕರು Avadhi

13 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading