ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾವ ಹುತ್ತದ ಹಾವು ಯಾರಿಗೇನಾದರೂ ಹೇಳಲಿ…

ಹಗಲುಗಳ್ಳರ ಹಾಸಿಗೆಯಲಿ..

ಸುರೇಶ ಎಲ್ ರಾಜಮಾನೆ


ಹಸಿರೆಲೆಯ ಮೇಲಿನ ಹನಿಯೊಂದು ದನಿಗೂಡಿಸುತಿದೆ
ಹನಿಗೂಡಲಿ ಹಳ್ಳವಾಗಲಿ ಹರಿದು ಹೋಗಲಿ ಕೊಳೆಯಲ್ಲ
ಬಿದ್ದ ನೆಲವು ಸದ್ದುಮಾಡಲಿ ಕೈ ಹಿಡಿದು ನಿಲ್ಲಿಸಲಿ
ಹದವಾದೆದೆಯಲಿ ಹಸಿರು ಪೈರನ್ನ..
 
ಎತ್ತಲಿಂದೆದ್ದು ಬಂದರೇನು ಬಿರುಗಾಳಿ
ಕತ್ತಲೇನೂ ಆಗಿಲ್ಲ ಬಿತ್ತಿ ನಡೆ ನೀ ಮುಂದೆ
ಯಾವ ಹುತ್ತದ ಹಾವು ಯಾರಿಗೇನಾದರೂ ಹೇಳಲಿ
ದಾರಿಗಡ್ಡ ನಿಂತವರ ಬೇರು ಕಿತ್ತೆಸೆದುಬಿಡು
 
ಹರಿವ ನದಿಯೊಳು ಮುಳುಮುಳುಗೆದ್ದೇಳು
ಘಳಿಗೆಯೊಂದು ಕಾದಿರುವದು
ಬಳಿಗೆಬಂದ ಭೂತವೂ ಹೂತುಹೋಗುವದು ಬೆಳೇಯಲೇನೂ ಭಯವಿಲ್ಲ
ಭುವಿಯೇನು ಬಗವಂತನ ಬಿಕ್ಷಾ ಪಾತ್ರೆಯಲ್ಲ..
ಅದು ಬಡವನ ಬದುಕಿಗೆ ರಕ್ಷಾ ಪಾತ್ರೆ..
 
ಎಲ್ಲೆಂದರಲ್ಲಿ ಹರಿದು ಹೋಗಿಹಳು ಹಗಲುಗಳ್ಳರ ಹಾಸಿಗೆಯಲಿ
ಹೊರಳಾಡಿ, ನರಳಾಡಿ, ಹಸಿರೆಲ್ಲ ಬರಿ ಕೆಸರಾಗಿಹೋಗಿದೆ
ಹೆಸರಿಗೆ ಮಾತ್ರ ನಿಸರ್ಗದೇವತೆ ನಿಂತಿಹಳು ನಿಮ್ಮೆದುರು
ಸೃಷ್ಠಿಯಲಿ ಸೃಷ್ಟಿಯಾದ ದೃಷ್ಟಿಗೊಂಬೆಯಾಗಿ..
ಹಸಿರೆಲೆಯ ಮೇಲಿನ ಹನಿ ನೀನಾಗು ಜನಧನಿ..!!
 

‍ಲೇಖಕರು G

23 November, 2014

6 Comments

  1. ಪ್ರಕಾಶ ಬಿ ಜಾಲಹಳ್ಳಿ

    ಎಲ್ಲೆಂದರಲ್ಲಿ ಹರಿದು ಹೋಗಿಹಳು ಹಗಲುಗಳ್ಳರ ಹಾಸಿಗೆಯಲಿ
    ಹೊರಳಾಡಿ, ನರಳಾಡಿ, ಹಸಿರೆಲ್ಲ ಬರಿ ಕೆಸರಾಗಿಹೋಗಿದೆ
    ಕವಿತೆಯ ಸಾಲುಗಳು ಚೆನ್ನಾಗಿವೆ…

  2. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಧನ್ಯವಾದಗಳು ಪ್ರಕಾಶ.ಬಿ.ಜಾಲಹಳ್ಳಿ ಸರ್.

  3. ಡಾ.ಶಿವಾನಂದ ಕುಬಸದ

    ತುಂಬ ಸುಂದರ ಕವಿತೆ…

  4. ಗವಿಸಿದ್ಧ ಹೊಸಮನಿ

    ಪದ್ಯ ಬಾಳ ಚೊಲೊ ಐತ್ರಿ..

  5. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಧನ್ಯವಾದಗಳು ಡಾ.ಸರ್ ಮತ್ತು ಹೊಸಮನಿ ಸರ್… ನಿಮ್ಮ ಪ್ರೋತ್ಸಾಹದ ಜೊತೆಗೆ ಸಲಹೆಗಳಿಗೂ ಸ್ವಾಗತ ಸರ್

  6. amu bhavajeevi

    Nice lines Suresh sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading