ಲಯ
ರಾಘವೇಂದ್ರ ದೇಶಪಾಂಡೆ
ನಾನು ಯಾರು
ಎಲ್ಲಿಂದ ಬಂದವನು ನಾನು
ಈ ಪ್ರಶ್ನೆಗಳಲ್ಲಿಯೇ ಇದೆ ನನ್ನ ಅಸ್ತಿತ್ವ
ಖಚಿತಪಡಿಸಿಕೊಳ್ಳುವೆ ನನ್ನ ಇರುವಿಕೆಯನ್ನು
ಕೆಲವೊಮ್ಮೆ ದೂರದಿಂದ
ಒಮ್ಮೊಮ್ಮೆ ಸಮೀಪದಿಂದ
ನಿಷ್ಠೆಯಿಂದ ಇರುವದಾದರೆ ಇರು
ಅನ್ಯಾಯದಿಂದ ಆದರೂ ಸರಿಯೇ
ನನ್ನ ಆತ್ಮಸಾಕ್ಷಿ ಮಾತ್ರ ನನ್ನೊಂದಿಗಿದೆ
ಆದರೇನಾಯಿತು ಈಗ
ತಪ್ಪಾಗಿರುವುದು ಎಂದಿಗೂ ನಿಜ
ಬದುಕು ಸಹ ಬೇಸರಗೊಂಡಿದೆ ನನ್ನೊಂದಿಗೆ

ಏನು ಮಾಡಲಿ ನಾನು
ಮತ್ತು ನಾನೇನು ಮಾಡಬಲ್ಲೆ
ಆಗಿದ್ದೇನೆ ನನ್ನಾತ್ಮ ಸಾಕ್ಷಿಯ ಧ್ವನಿ ಮಾತ್ರ
ಇಲ್ಲವಾದಲ್ಲಿ ಕೇಳಲೇ
ನನ್ನ ಹೃದಯದ ಧ್ವನಿಯನ್ನು
ಏಕೆಂದರೆ ನಾನು ಅವನ ಗೆಳೆಯನಾಗಿದ್ದೇನೆ
ಪರೀಕ್ಷೆ ಇರಬಹುದೇ
ಹೃದಯ ಮತ್ತು ಆತ್ಮಸಾಕ್ಷಿಗಳ ಮಧ್ಯೆ
ಇಲ್ಲವೇ ಇವೆರಡರ ತಂತ್ರವಾಗಿರಬಹುದೆ
ಯಾವ ರೀತಿಯ ಗಂಟೆ ಬಾರಿಸುತ್ತಿದೆ
ಇವೆಲ್ಲವುಗಳ ಮಧ್ಯೆ ಗೊತ್ತಾಗುತ್ತಿಲ್ಲ
ನನ್ನ ನಿಜವಾದ ಲಯ ಯಾವುದೆಂದು
ಯಾವ ರೀತಿಯ ಗಂಟೆ ಬಾರಿಸುತ್ತಿದೆ..
ನಿಮಗೆ ಇವೂ ಇಷ್ಟವಾಗಬಹುದು…





0 Comments