ಯುದ್ದ ಮತ್ತು ಪ್ರೇಮದ ಅಧ್ಯಾಯಗಳು

ಲಕ್ಷ್ಮಣ್
ಹೆದ್ದಾರಿಯ ಮೈಲುಗಲ್ಲುಗಳಂತಹ
ಬಣ್ಣ ಮಾಸಿದ
ಹಳೆಯ ಪುಸ್ತಕದ ಪುಟಸಂಖ್ಯೆಗಳು
ಮೊದಲ ಪುಟದಲಿ
ಆಕಾಶ ಬಣ್ಣದ ಇಂಕಿನಲಿ
ಮೋಡಿ ಲಿಪಿಯಲಿ ಬರೆದು ಹಾರೈಸಿದ
ಪುಟ್ಟ ಹಸ್ತಾಕ್ಷರ
ಮುಟ್ಟಿದರೆ ಎಲ್ಲಿ ಮುರಿದೆ
ಹೋಗುವ ನಾಜೂಕಿನ ತರಗೆಲೆಯ
ಅಥವ ತಾಳೆಗರಿಯಂತಹ
ಚಲಾವಣೆಯಿಲ್ಲದ ಹಳೆಯ ನೋಟಿನ ಕಂತಿನ
ಕಟ್ಟುಗಾಳಿಯ ಉಸಿರು ಬಿದಿರು ಮೆಳೆಗಳಲ್ಲಿ ಸಿಕ್ಕು
ದೂರದಲ್ಲೆಲ್ಲೋ ಇರುವ ಗೊಲ್ಲನಿಗೆ
ಕೊಳಲು ದನಿ ಕೇಳುವಂತೆ
ಓದುತ್ತ ಹೋದಂತೆ ನಿಮಗೆ ಅರಿವಾಗುವ
ಬಗೆ ಅಚ್ಚರಿ
ಮೊದಲ ಪ್ರೇಮ ಹಸಿ ಹಸಿ ಕಾಮ
ನಂತರದ ಮಹಾಯುದ್ಧ
ದೇಶ ವಿಭಜನೆ
ಕ್ಷಾಮ ,ಊರು ನುಂಗಿದ ಪ್ಲೇಗು ಮಾರಿ
ಎಷ್ಟು ಸಹಸ್ರಮಾನದ ನಡಿಗೆಯಿದು ?
ಯಾವ ದುರ್ಗಮದ ದಾರಿ
ಎಷ್ಟು ಕಾಡು ಕಣಿವೆ ಪ್ರಪಾತಗಳ ಏಳು ಬೀಳುಕಪಾಟಿನ ತುಂಬ ಓದಲಾರದ
ಪುಸ್ತಕಗಳ ಜೊತೆ ಹೇಗೋ ವೇಷಮರೆಸಿಕೊಂಡ ಹೊತ್ತಿಗೆ.,
ಇಷ್ಟು ದಿನ ಅದು ಹೇಗೆ ನನ್ನ ಕಣ್ಣು ತಪ್ಪಿಸಿ
ಮುನಿಸಿಕೊಂಡ
ಮನೆದೇವರು
ಇದ್ದಕ್ಕಿಂದ್ದಂತೆ ಜಾತ್ರೆಯಲಿ ಭೈರಾಗಿಯಂತೆ ಎದಿರಾಗಿಅಲ್ಲಲ್ಲಿ ಕಿವಿ ಮಡಚಿದ ಪುಟಗಳು
ಚುಕ್ಕೆ ಬಾಣದ ಗುರುತುಗಳು
ದಿಕ್ಕು ತಪ್ಪು ವವರ ದಾರಿ ತೋರುವ ಹೆದ್ದಾರಿಯ
ಸಂಕೇತಗಳು
ಪುಸ್ತಕದಲ್ಲಿ ಮಡಚಿಟ್ಟು ಯಾರೋ ಮರೆತಿರಬಹುದಾದ
ಒಣಗಿದ ಹೂ ಪಕಳೆಗಳು
ಯಾವ ಚೆಲವಿಯ ಮುಡಿಯದ್ದು
ಕೈ ಗಂಟಿದ ಹುಡಿ ಎಷ್ಟು ತೊಳೆದರೂ ಹಸನಾಗುತಿಲ್ಲ
ಯುದ್ದ ಮತ್ತು ಪ್ರೇಮದ
ಅದ್ಧ್ಯಾಯಗಳು ಇನ್ನೂ ಪೂರ್ತಿಯಾಗಿಲ್ಲ
ಹೀಗಾಗಿ ಕೊನೆಯ ಪುಟ ಸಂಖ್ಯೆ
ನಮೂದಾಗದೆ ಖಾಲಿಯಿದೆ
ಈ
ದಾರಿ ಎಲ್ಲಿಯೂ ಕೊನೆಯಾಗುವುದಿಲ್ಲ .
ಬಣ್ಣ ಮಾಸಿದ
ಹಳೆಯ ಪುಸ್ತಕದ ಪುಟಸಂಖ್ಯೆಗಳು
ಮೊದಲ ಪುಟದಲಿ
ಆಕಾಶ ಬಣ್ಣದ ಇಂಕಿನಲಿ
ಮೋಡಿ ಲಿಪಿಯಲಿ ಬರೆದು ಹಾರೈಸಿದಪುಟ್ಟ ಹಸ್ತಾಕ್ಷರ
ಮುಟ್ಟಿದರೆ ಎಲ್ಲಿ ಮುರಿದೆ
ಹೋಗುವ ನಾಜೂಕಿನ ತರಗೆಲೆಯ
ಅಥವ ತಾಳೆಗರಿಯಂತಹ
ಚಲಾವಣೆಯಿಲ್ಲದ ಹಳೆಯ ನೋಟಿನ ಕಂತಿನ
ಕಟ್ಟುಗಾಳಿಯ ಉಸಿರು ಬಿದಿರು ಮೆಳೆಗಳಲ್ಲಿ ಸಿಕ್ಕು
ದೂರದಲ್ಲೆಲ್ಲೋ ಇರುವ ಗೊಲ್ಲನಿಗೆ
ಕೊಳಲು ದನಿ ಕೇಳುವಂತೆ
ಓದುತ್ತ ಹೋದಂತೆ ನಿಮಗೆ ಅರಿವಾಗುವ
ಬಗೆ ಅಚ್ಚರಿ
ಮೊದಲ ಪ್ರೇಮ ಹಸಿ ಹಸಿ ಕಾಮ
ನಂತರದ ಮಹಾಯುದ್ಧ
ದೇಶ ವಿಭಜನೆ
ಕ್ಷಾಮ ,ಊರು ನುಂಗಿದ ಪ್ಲೇಗು ಮಾರಿ
ಎಷ್ಟು ಸಹಸ್ರಮಾನದ ನಡಿಗೆಯಿದು ?
ಯಾವ ದುರ್ಗಮದ ದಾರಿ
ಎಷ್ಟು ಕಾಡು ಕಣಿವೆ ಪ್ರಪಾತಗಳ ಏಳು ಬೀಳುಕಪಾಟಿನ ತುಂಬ ಓದಲಾರದ
ಪುಸ್ತಕಗಳ ಜೊತೆ ಹೇಗೋ ವೇಷಮರೆಸಿಕೊಂಡ ಹೊತ್ತಿಗೆ.,
ಇಷ್ಟು ದಿನ ಅದು ಹೇಗೆ ನನ್ನ ಕಣ್ಣು ತಪ್ಪಿಸಿ
ಮುನಿಸಿಕೊಂಡ
ಮನೆದೇವರು
ಇದ್ದಕ್ಕಿಂದ್ದಂತೆ ಜಾತ್ರೆಯಲಿ ಭೈರಾಗಿಯಂತೆ ಎದಿರಾಗಿಅಲ್ಲಲ್ಲಿ ಕಿವಿ ಮಡಚಿದ ಪುಟಗಳು
ಚುಕ್ಕೆ ಬಾಣದ ಗುರುತುಗಳು
ದಿಕ್ಕು ತಪ್ಪು ವವರ ದಾರಿ ತೋರುವ ಹೆದ್ದಾರಿಯ
ಸಂಕೇತಗಳು
ಪುಸ್ತಕದಲ್ಲಿ ಮಡಚಿಟ್ಟು ಯಾರೋ ಮರೆತಿರಬಹುದಾದಒಣಗಿದ ಹೂ ಪಕಳೆಗಳು
ಯಾವ ಚೆಲವಿಯ ಮುಡಿಯದ್ದು
ಕೈ ಗಂಟಿದ ಹುಡಿ ಎಷ್ಟು ತೊಳೆದರೂ ಹಸನಾಗುತಿಲ್ಲ
ಯುದ್ದ ಮತ್ತು ಪ್ರೇಮದ
ಅದ್ಧ್ಯಾಯಗಳು ಇನ್ನೂ ಪೂರ್ತಿಯಾಗಿಲ್ಲ
ಹೀಗಾಗಿ ಕೊನೆಯ ಪುಟ ಸಂಖ್ಯೆ
ನಮೂದಾಗದೆ ಖಾಲಿಯಿದೆ
ಈ
ದಾರಿ ಎಲ್ಲಿಯೂ ಕೊನೆಯಾಗುವುದಿಲ್ಲ .





0 Comments