ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಯಾವುದಾದರೇನು ಮೊದಲು, ಕೋಳಿ ಅಥವ ಮೊಟ್ಟೆ’ – ಹೀಗೊಂದು ಮಕ್ಕಳ ಪದ್ಯ

ಮೊದಲಾವುದು ?

-ಅಕ್ಕಿಮಂಗಲ ಮಂಜುನಾಥ

 
ಕೋಳಿ ಹೊಟ್ಟೆಯಿಂದ ಪುಟ್ಟ
ಮೊಟ್ಟೆ ಇಟ್ಟಿತು
ಮೊಟ್ಟೆಯಿಂದ ಸೊಟ್ಟದಾದ
ಮರಿ ಹುಟ್ಟಿತು
 
ಮೊಟ್ಟೆಯಿಂದ ಕೋಳಿಯಾಗಿ
ಕೋಳಿಯಿಂದ ಮೊಟ್ಟೆ
ಎರಡರಲ್ಲಿ ಮೊದಲಾವುದು
ಯಾರಿಗಾದ್ರೂ ಗೊತ್ತೇ ?

ಹಲವು ಮತದ ಅಂಧರೆಲ್ಲ
ನೂರು ಕತೆಯ ಹಬ್ಬಿಸಿ
ಲೊಳಲೊಟ್ಟೆಯ ಬಿಡುವರಣ್ಣ
ಕೇಳುವವರ ನಂಬಿಸಿ
 
ವೇದಾಂತಿ ವಿಜ್ಞಾನಿ ಕೊಡರು
ಇದಕ್ಕೆ ಉತ್ತರ
ಕೇಳಿದೊಡನೆ ತಲೆಯ ಕೆರೆದು
ಆಗುತಿಹರು ತತ್ತರ
 
ಯಾವುದಾದರೇನು ಮೊದಲು ?
ಕೋಳಿ ಅಥವ ಮೊಟ್ಟೆ
ಸುಟ್ಟು ತಿನಲು ರುಚಿಯಾಗಿದೆ
ತುಂಬುವುದು ಹೊಟ್ಟೆ.
 

‍ಲೇಖಕರು G

10 January, 2015

1 Comment

  1. ಲಲಿತಾ ಸಿದ್ಧಬಸವಯ್ಯ

    ಕರೆಕ್ಟ್ ಮಂಜುನಾಥ್, ಕೋಳೀನೋ ಅದರ ಮೊಟ್ಟೇನೋ ಯಾವುದಾದ್ರು ಮೊದಲು ಬರ್ಲಿ ಆಮೇಲೆ ಬರ್ಲಿ ನಮಗೇನು…. ತಿಂದ್ರೆ ಎರಡೂ ಒಂದೆ. ಕರೆಖ್ಟ್ ಅಹ್ಹಹ್ಹ್ಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading