-ದಾಕ್ಷಾಯಣಿ ಮಸೂತಿ
ಅಚ್ಚುಳವಾದ ಗೂಡು
ಸುತ್ಮಮುತ್ತ
ಅತ್ತ ಇತ್ತ
ಎಲ್ಲೆಲ್ಲೂ ಪ್ರೀತಿಯನ್ನೇ
ಉಸಿರಾಡುತ್ತಿತ್ತು
ಗೂಡು
ಹರಿಯುವ ನದಿ
ಹುಟ್ಟುವ ರವಿ
ಇಳಿಸಂಜೆಯ ಚಂದಿರ
ಪಿಸುಪಿಸು ಗುಸುಗುಸುಗಳಲಿ
ತೇಲುತ್ತಿದ್ದ ಮೈ ಮನಸ್ಸುಗಳು
ಹೀಗೆ
ಸಹಜತೆಯ ಮಡಿಲಾಗಿತ್ತು
ಗೂಡು
ಸೋಕಿದೆ
ಬದಲಾವಣೆಯ ಕಿಡಿ
ಗೂಡಿಗೂ!
ಈಗೀಗ ಅಲ್ಲಿ
ಬರೀ ಕತ್ತಲೆಯ
ನೆರಳು ಹಾಸುಹೊಕ್ಕಾಗಿದೆ
ಅನುಮಾನದ ಜಂತುಗಳು
ಹೊರಳಾಡುತ್ತಿವೆ
ಯಾರೋ ಹೊಡೆದ
ಕಲ್ಲಿಗೆ
ಸಹಜತೆಯ ಕಳೆದುಕೊಂಡ
ಮನಸ್ಸುಗಳು
ಮುರುಟಿದ ಹೃದಯಗಳು
ಅಚ್ಚುಳವಾದ ಗೂಡಲ್ಲಿ
ಈಗ ನೋವಿನ ಎಳೆಗಳಷ್ಟೇ
ಉಳಿದಿವೆ






0 Comments