ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರು ಈ ಚರಕ ಕ್ಯಾಲೆಂಡರ್ ಜನಕ..?

 

ಸುರೇಶ ಕಂಜರ್ಪಣೆ 

ಖಾದಿ ಕಮಿಷನ್ ಚೇರ್ಮನ್ ಯಾರು ಅಂತ ಕುತೂಹಲ ಇದ್ದರೆ ತಗೊಳ್ಳಿ. ಈ ಫೊಟೋದಲ್ಲಿರುವಾತ.

ಈತನ ಹೆಸರು ವಿನಯ್ ಸಕ್ಷೇನಾ.

ಈತನ ಸಾಧನೆ ಇರುವುದು ಅದಾನಿ ಕಂಪೆನಿಯಲ್ಲಿ ದುಡಿದದ್ದು.

ಮತ್ತು ಅದರ ಪರವಾಗಿ ಪರಿಸರ ಸಂಬಂಧಿ  ಚಳವಳಿ ಮಾಡುತ್ತಿದ್ದವರ ಚಾರಿತ್ರ್ಯ ಹನನ ಮಾಡಿದ್ದು. ಮೇಧಾ ಪಾಟ್ಕರ್ ಅವರ ಬಗ್ಗೆ ಅಪಪ್ರಚಾರ ಮಾಡಿದ್ದು ಈತನ ಪ್ರಮುಖ ಸಾಧನೆ..

ಖಾದಿ ಬಿಡಿ ಚರಕಾ ನೋಡಿದ ದಾಖಲೆಯೂ ಇಲ್ಲ.

ಖಾದಿ ಕಮಿಷನ್ನಿನ ಈತನ bio-data ದಲ್ಲಿ ಬರೆದುಕೊಂಡಿರುವ ವಾಕ್ಯ ಹೀಗಿದೆ-

His immense social and legal efforts in keeping at bay the vested interests that tried to disrupt the good work of Sardar Sarovar Project are also highly regarded in Gujarat, MP and Rajasthan Any instance of anti-Development campaign will find him fighting it tooth and nail through a combination of technical, legal, social and cultural skills.

ಅಂದರೆ ಅಭಿವೃದ್ಧಿ ಯೋಜನೆಗೆ ವಿರೋಧ ಬಂದಾಗಲೆಲ್ಲಾ ತನ್ನ ಸಕಲ ಕೌಶಲ್ಯ ಬಳಸಿ ಅದರ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವಾತ .

( ಸಾಮಾನ್ಯ ಪರಿಭಾಷೆಯಲ್ಲಿ ಇಂತವರಿಗೆ ಬಾಡಿಗೆ ಹಂತಕರು ಎನ್ನುತ್ತಾರೆ..!!!)

ಈತನ ಈ ಹನನ ಸೇವೆಗೆ ಖಾದಿ ಕಮಿಷನ್ ಚೇರ್ಮನ್ ಹುದ್ದೆ ಕಾಣಿಕೆ ನೀಡಲಾಗಿದೆ. ಮೋದಿ ಸರ್ಕಾರ ನೇಮಿಸಿರುವ ಅಯೋಗ್ಯ ತಾರಾಮಣಿಗಳಲ್ಲಿ ಈತನೂ ಒಬ್ಬ..!!

‍ಲೇಖಕರು admin

21 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading