ಸಂಧ್ಯಾ ಅಕ್ಕ… ಸಂಧ್ಯಾ ಅಕ್ಕ… ಅಂತ ಇಡೀ ಸಭಾಂಗಣದಲ್ಲಿ ಕೇಳಿಬರುತ್ತಿತ್ತು ಸಾಕಷ್ಟು ದನಿ
ಈ ಸಂಧ್ಯಾ ಅಕ್ಕ ಅಲಿಯಾಸ್ ಸಂಧ್ಯಾರಾಣಿ ಅವರ ಪುಸ್ತಕವೇ ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು…’
ಈ ಹಿಂದೆ ಜೋಗಿ ಅವರ ಕೃತಿಗಳಿಗೆ ಭರ್ಜರಿ ಪ್ರವೇಶ ಒದಗಿಸುವ ‘ಜೋಗಿ ರೀಡರ್ ಕೃತಿಯನ್ನು ಸಂಪಾದಿಸಿದ್ದರು. ಅಂಕಿತ ಪ್ರಕಾಶನ ಅದನ್ನು ಬೆಳಕಿಗೆ ತಂದಿತ್ತು. ಜೋಗಿ ಅವರ ಅಪಾರ ಪುಸ್ತಕಗಳನ್ನು ಓದಲೂ, ಅರಗಿಸಿಕೊಳ್ಳಲು, ಅದರಲ್ಲಿ ಇದೇ ನನ್ನ ಆಯ್ಕೆ ಎಂದು ಹೇಳಲು ಎಸ್, ಅದು ಸಂಧ್ಯಾ ಅಕ್ಕನಂತವರಿಂದ ಮಾತ್ರ ಸಾಧ್ಯ.
ಈಗ ಪಲ್ಲವ ಪ್ರಕಾಶನದ ವೆಂಕಟೇಶ್ ಅಷ್ಟೇ ಪ್ರೀತಿಯಿಂದ ಇದೇ ‘ಅವಧಿ’ಯಲ್ಲಿ ಪ್ರಕಟವಾದ ಅವರ ಅಂಕಣ ಬರಹಗಳ ಮೊದಲ ಕಂತನ್ನು ಕೈಗಿಟ್ಟಿದೆ.
ಪ್ರತಿಯೊಬ್ಬರನ್ನೂ ‘ಏನು ಬಂದಿರಿ ಸ್ವಾಮಿ, ಹದುಳವೇ..’ ಎಂದು ಪ್ರಶ್ನಿಸಲೂ ಆಗದಷ್ಟು ಜನ, ಜನ, ಜನ..
ಜನ ಅಂತ ಕರೆದರೆ ಪರಕೀಯ ಅನಿಸಿಬಿಡುತ್ತದೆ ಆಲ್ವಾ
ಅಷ್ಟು ಗೆಳೆಯರ ದಂಡು
ಅದಕ್ಕೆ ಇರಬೇಕು ಚಂದ್ರಶೇಖರ ಆಲೂರು ‘ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ ನಿಮಗೆಲ್ರೀ ಸಾಕಾಗುತ್ತೆ, ಅರಮನೆ ಮೈದಾನದಲ್ಲಿ ಇಟ್ಟುಬಿಡಿ’ ಅಂತ ಡೈಲಾಗ್ ಬಿಟ್ಟಿದ್ದು
ಇರಲಿ,
ಸಂಧ್ಯಾ ಅಕ್ಕನನ್ನು ಈ ಮೊದಲಿನಿಂದಲೂ ಚೆನ್ನಾಗಿಯೇ ಕ್ಲಿಕ್ಕಿಸುವ ರವಿ ಕುಲಕರ್ಣಿ ನಮ್ಮ ಕೈಗೆ ಭರ್ಜರಿ ಫೋಟೋ ಆಲ್ಬಮ್ ನೀಡಿದ್ದಾರೆ
ಪುಸ್ತಕದಲ್ಲಿ ಪ್ರಕಟವಾಗಿರುವ ಫೋಟೋ ತೆಗೆದದ್ದೂ ಇವರೇ
ಈ ಫೋಟೋ ಆಲ್ಬಮ್ ನೋಡ್ತಿದ್ರೆ ನಿಮಗೆ ಆವತ್ತಿನ ಕಾರ್ಯಕ್ರಮದ ಗಮ್ಮತ್ತು ಗೊತ್ತಾಗಿಬಿಡುತ್ತೆ
ಸೋ.. ಬನ್ನಿ ಒಂದು ರೌಂಡ್ ಹಾಕೋಣ. ಸಂಧ್ಯಾ ಅಕ್ಕನ ಸಂಭ್ರಮ ಲೋಕದಲ್ಲಿ
– ಅವಧಿ ಬಳಗ

ರವಿ ಕುಲಕರ್ಣಿ





























ಚಿತ್ರಸಂಭ್ರಮ ನೋಡಿ ಖುಷಿಯಾಯಿತು.
ಅಭಿನಂದನೆಗಳು ಸಂಧ್ಯಾರಾಣಿಯವರಿಗೆ.
ಶುಭಾಶಯಗಳು ಅಕ್ಕನಿಗೆ
ಅಭಿನಂದನೆಗಳು ಮೇಡಂ.