ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಯಾಕಿಷ್ಟು ಕ್ರೂರವಾಗುತ್ತಿದೆ ಹೆಣ್ಣಿನ ಜೀವನ?' – ಸುಜಾತ ವಿಶ್ವನಾಥ್

ಸುಜಾತ ವಿಶ್ವನಾಥ್

ಹೆಣ್ಣು ಮಕ್ಕಳಾಗಿ ಹುಟ್ಟಿದ್ದು ನಮ್ಮ ತಪ್ಪೆ? ನಾವು ಹೆಣ್ಣಾಗಿ ಜನ್ಮತಾಳಬೇಕೆಂದು ನಾವು ಕೇಳಿಕೊಂಡೆವ? ನಮ್ಮದಲ್ಲದೆ ತಪ್ಪಿಗೆ ನಮಗೇಕೆ ಈ ಶಿಕ್ಷೆ? ಎಲ್ಲಿದೆ ನಮಗೆ ಭದ್ರತೆ? ಏನಾಗುತ್ತಿದೆ ಈ ಸಮಾಜ? ಯಾವ ದಿಕ್ಕಿನತ್ತ ಸಾಗುತ್ತಿದೆ ನಮ್ಮ ಬದುಕು? ನಾವು ಯಾರಲ್ಲಿ ಈ ಕೇಳಲಿ ನಮ್ಮ ಈ ಎಲ್ಲಾ ಪ್ರಶ್ನೆಗಳನ್ನ? ಇದಕ್ಕೆಲ್ಲಾ ಉತ್ತರಿಸುವವರಾರು. ನಮಗಂತೂ ರೋಧಿಸಿ ರೋಧಿಸಿ ಸಾಕಾಗಿದೆ ಕಣ್ಣಾಲೆಗಳಲ್ಲಿನ ನೀರು ಇಂಗಿಬಿಟ್ಟಿದೆ. ಇನ್ನೂ ಮುಂದೆ ನಾವು ಅತ್ತರೆ ಕಣ್ಣೀರು ಬಾರದು, ರಕ್ತ ಬರಬಹುದು ಕಣ್ಣೀರಿಡುವ ಮನಸ್ಥಿತಿ ನಮ್ಮಲ್ಲಿಲ್ಲ. ದಂಗೆಯ ಮನೋಭಾವ ನಮ್ಮ ಕಣ ಕಣದಲ್ಲಿಯೂ ತುಂಬಿದೆ. ಈ ಸಮಾಜದ ಮೇಲೆ ಆಕ್ರೋಶ ಉಕ್ಕ ಬರುತ್ತಿದೆ. ಈ ಅನ್ಯಾಯದ ವಿರುದ್ಧ ದನಿ ಎತ್ತಲು ನಮಗಿರುವ ಈಗಿನ ಬೆಂಬಲ ಸಾಲದು. ಬನ್ನಿ ಮಹಿಳೆಯರು ಹೊಸಿಲು ದಾಟಿ ಹೊರಬನ್ನಿ, ಈ ಸಮಾಜದಲ್ಲಿ ಏನಾಗುತ್ತಿದೆ ಎಂದು ನೋಡಿ, ನಮಗಲ್ಲ ನಮ್ಮ ಮಗುವಿಗಲ್ಲ ಎಂದು ಸುಮ್ಮನೆ ಕೂರಬೇಡಿ. ದಿಟ್ಟ ಹೆಜ್ಜೆ ಇಟ್ಟು ಹೊರ ಬನ್ನಿ ಹೆಣ್ಣು ಮನಸ್ಸು ಮಾಡಿದರೆ ಏನುಬೇಕಾದರೂ ಮಾಡಬಹುದು. ಈ ಅನ್ಯಾಯವನ್ನ ವಿರುದ್ಧ ಹೋರಾಡಲು ನಮ್ಮಿಂದ ಸಾಧ್ಯವಿಲ್ಲವೇ? ಬೀದಿಗೆ ಬನ್ನಿ…ಬನ್ನಿ…ಬನ್ನಿ…ನಮಗೆ ಜಯ ಸಿಗುವರೆಗೂ ಈ ಸಮರ ನಿಲ್ಲಬಾರದು.
ಹುಟ್ಟು ಅನಿವಾರ್ಯ, ಸಾವು ನಿಶ್ಚಿತ…ಆದರೆ ಮೂರು ದಿನದ ಈ ಜೀವನದಲ್ಲಿ ನಾವಾಗಿ ಬದುಕಲು ನಮ್ಮನ್ನೇಕೆ ಬಿಡುತ್ತಲ್ಲ? ಬದುಕುವ ಹಕ್ಕು ನಮಗಿಲ್ಲವೇ? ನಮ್ಮನ್ನೂ ಬದುಕಲು ಬೀಡಿ ಎಂದು ನಿಮ್ಮ ಬಳಿ ಬಿಕ್ಷೆ ಕೇಳಬೇಕೆ? ಯಾಕೆ ಈ ಪರಿಸ್ಥಿತಿಗೆ ತಳ್ಳೀದ್ದೀರ ಹೆಣ್ಣು ಜಾತಿಯನ್ನ? ಯಾಕಿಷ್ಟು ಅವಮಾನ ಮಾಡುತ್ತಿರುವಿರಿ? ಬರೀ ಇತಿಹಾಸದ ಪುಟಗಳಲ್ಲಿ ಮಾತ್ರ ಹೆಣ್ಣು ಪೂಜ್ಯಳು ಎಂಬ ಸಾಲುಗಳನ್ನು ಓದಿ ಓದಿ ನಮಗೆ ಚಿಟ್ಟು ಹಿಡಿದು ಬಿಟ್ಟಿದೆ. ಇದು ಕಾರ್ಯಗತವಾಗುತ್ತಿದೆಯೇ? ಹೆಣ್ಣು ಮಕ್ಕಳು ನಿಮಗೆ ಮಾಡಿದ ಅನ್ಯಾವಾದರೂ ಏನು?
ತೃಷೆ ತೀರಿಸಿಕೊಳ್ಳಲು ಎರಡು ವರ್ಷದ ಮಗುವಿನಿಂದ ಹಿಡಿದು ವಯೋವೃದ್ಧರನ್ನೂ ಬಿಡದೇ ಕಾಡುತ್ತಿರುವಿರಲ್ಲ? ತೃಷೆ ತೀರಿದ ಬಳಿಕ ಮುಗಿಯಿತೆ? ಇದೇ ಜೀವನವೇ? ಹುಟ್ಟಿನಲ್ಲಿ ನಿಮ್ಮ ಪಾಲೂ ಇದೆ ಎಂಬ ಸತ್ಯ ತಿಳಿದಿಲ್ಲವೇ? ಇಂಥಾ ಕಾಮುಕರ ವಿಕೃತಿಗೆ, ಅಟ್ಟಹಾಸಕ್ಕೆ ಮುಗ್ದೆಯರನ್ನು ಬಲಿತೆಗೆದುಕೊಳ್ಳುತ್ತಿರುವುದು ದುರಂತ. ಪಶು ರೀತಿಯಲ್ಲಿ ಅತ್ಯಾಚಾರ ನಡೆಸಿ ಆ ದೃಶ್ಯಗಳನ್ನು ಮೊಬೈಲ್ನಲ್ಲಿ ಚಿತ್ರಿಸಿಕೊಳ್ಳುವ ಇಂಥ ಕಾಮುಕರು, ಅದನ್ನೇ ತಮ್ಮ ಅಸ್ತ್ರವಾಗಿಟ್ಟುಕೊಂಡು ಬೇರೆ ಯುವತಿಯರನ್ನೂ ತಮ್ಮ ಕಾಮ ಬಲೆ ಕೆಡವಿಕೊಳ್ಳುತ್ತಿದ್ದಾರೆ. ಎಲ್ಲಿ ನೋಡಿದರೂ ಉಸಿರು ಗಟ್ಟಿಸುವ ರೋಧನೆ ಮುಗಿಲು ಮುಟ್ಟುತ್ತಿದೆ. ಎರಡೂವರೆ ವರ್ಷದ ಮಗುವಿನ ಮೇಲೆೆ ಅತ್ಯಾಚಾರ, 1ನೇ ತರಗತಿಯ ಮಗುವಿನ ಮೇಲೆ ಅತ್ಯಾಚಾರ, ಈ ಘಟನೆಗಳನ್ನ ಕೇಳಿಯೇ ನಮ್ಮ ಮನವಿಷ್ಟು ಕುದಿಯುತ್ತದೆಯಲ್ಲ? ಆ ಹೆತ್ತ ತಾಯಿಯರ ರೋಧನ, ಭೀಭತ್ಸ ಅಳು ಇನ್ನೆಷ್ಟು ಕುದಿಯುತ್ತಿರಬೇಕು. ಅವರ ಹೃದಗಳಂತೂ ಇಂದು ಅಗ್ನಕುಂಡಗಳಾಗಿಬಿಟ್ಟವೆ. ಬೇಡವೆಂದರೂ ಅಂತರಾಳದಿಂದ ದುಃಖ ಉಮ್ಮಳಿಸಿ ಬರುತ್ತಿದೆ. ಆ ನೋವನ್ನು ನೆನೆಯುತ್ತಾ ನೆನೆಯುತ್ತಾ ಕಣ್ಣಿರನ್ನು ತಡೆದರೂ, ಅದು ನಿಲ್ಲುತ್ತಿಲ್ಲ. ಅಗ್ನಿ ಪರ್ವತ ಉಕ್ಕಿ ಬರುವಂತೆ ಉಕ್ಕುಬರುತ್ತಿದೆ ನೋವು. ಎಷ್ಟು ಆರ್ಭಟಿಸಲಿ ನಾವು…ಆದರೂ ನಿಂತಿಲ್ಲ ಹೆಣ್ಣಿನ ಮೇಲೆನ ದೌರ್ಜನ್ಯ, ಅತ್ಯಾಚಾರ ದಿನಕ್ಕೆ 5-6ರಂತೆ ಪ್ರಕರಣಗಳು ದಾಖಲಾಗುತ್ತಲಿವೆ.

ಹೆಣ್ಣಿಗೆ ಎಲ್ಲಿದೆ ಸುರಕ್ಷೆ? ಈ ಪ್ರಶ್ನೆಗೆ ಇನ್ನೂ ನಮಗೆ ಉತ್ತರ ಸಿಕ್ಕಿಲ್ಲ. ಮನೆಯಲ್ಲಿ ತಂದೆಯೇ ಅತ್ಯಾಚಾರ ಮಾಡ್ತಾನೆ. ಅಕ್ಕಪಕ್ಕದ ಮನೆಯಲ್ಲಿನ ಮುದುಕ ಅತ್ಯಾಚಾರ ಮಾಡ್ತಾನೆ, 16,17,19 ವರ್ಷದ ಹುಡುಗರು ಅತ್ಯಾಚಾರ ಮಾಡ್ತಾರೆ, ಇಂಥಾ ಹುಡುಗರೋ, ನಾವೆಲ್ಲಾ ಬಾಲಾಪರಾಧಿಗಳು ನಮಗೇನೂ ಶಿಕ್ಷೆ ಇಲ್ಲ ಕಾನೂನಿನಲ್ಲಿ, ಎಂದು ದೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ. ಶಾಲೆಗೆ ಕಳುಹಿಸಿದರೆ ಅಲ್ಲಿ ಶಿಕ್ಷಕರೇ ಈ ಕೃತ್ಯವೆಸಗುತ್ತಾರೆ. ಎಲ್ಲಿದೆ ರಕ್ಷಣೆ ಹೆಣ್ಣಿಗೆ? ಇದನ್ನೆಲ್ಲಾ ನೋಡುತ್ತಿರುವ ನಮ್ಮ ಮನವೆಲ್ಲಾ ನರಳುತ್ತದೆ, ಚೀರಾಡುತ್ತಿದೆ, ಕೂಗಾಡುತ್ತಿದೆ, ಅರಚಾಡುತ್ತಿದೆ ನಮಗಂತೂ ಹುಚ್ಚೆ ಹಿಡಿದಂತೆ ಆಗುತ್ತಿದೆ.
ರಾಮಾಯಣ, ಮಹಾಭಾರತದ ಕಾಲದಿಂದಲೂ ಹೆಣ್ಣಿನ ಮೇಲಿನ ದೌರ್ಜನ್ಯ ನಿಂತಿಲ್ಲ. ಅಂದೇ ಅವರು ಆರ್ಭಟಿಸಿದ್ದರೆ, ಇಂದು ನಮಗೆ ಈ ಗತಿ ಬರುತ್ತಿರಲಿಲ್ಲ. ಅಗಸನ ಮಾತು ಕೇಳಿ ಸೀತೆಯನ್ನು ಕಾಡಿಗಟ್ಟಿದಾಗ, ಆಕೆ ಪ್ರತಿಭಟಿಸಬೇಕಿತ್ತು? ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುವಾಗ, ಆಕೆಯೂ ಪ್ರತಿಭಟಿಸಬೇಕಿತ್ತು. ಸೀತೆಯಂತೆ ನಾನು ಸಹನೆಯ ಒಡಲು ಎಂದು, ಮೌನವಾಗಿಯೇ ತಾಯಿಯ ಗರ್ಭ ಸೇರಿ ಬಿಟ್ಟಳು. ಇಂದು ಅದೇ ಗತಿ ನಮ್ಮ ಹೆಣ್ಣು ಮಕ್ಕಳಿಗೂ ಬಂದಿದೆ. ಇಂದು ನಾವು ಸಹ ಮೌನ ವಹಿಸಿದರೆ ನಮ್ಮ ಮುಂದಿನ ಪೀಳಿಗೆಯ ಹೆಣ್ಣು ಮಕ್ಕಳ ಗತಿಯೇನು? ಈಗ ನಡೆಯುತ್ತಿರುವ ಅನ್ಯಾಯಕ್ಕೆ ಕೊನೆ ಇಲ್ಲದಾಗುತ್ತದೆ?
ಈ ಸಮಾಜದಲ್ಲಿ ನಮಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸುವ ಹಕ್ಕು ನಮಗಿಲ್ಲವೆ? ನಮ್ಮ ಆತ್ಮ ರಕ್ಷಣೆಯ ಹೊಣೆ ನಮ್ಮದಲ್ಲವೇ? ನಾವೇ ಕಾನೂನನ್ನು ಕೈಗೆತ್ತಿಕೊಂಡು ಇಂಥಾ ದುರುಳರನ್ನು ಕಂಡಲ್ಲೆ ಕೊಂದು ಬಿಡಬೇಕು? ಇಂಥಾ ಘಟನೆಗಳೇನಾದರೂ ನಿಮ್ಮ ಅಕ್ಕಪಕ್ಕದಲ್ಲಿ ನಡೆದರೆ ಸುಮ್ಮನಿರಬೇಡಿ ಪೊಲೀಸರನ್ನು ಕಾಯುತ್ತಾ ಕೂರಬೇಡಿ, ನೀವೇ ಶಿಕ್ಷಿಸಲು ಮುಂದಾಗಿ ಬಿಡಿ. ಆ ಅಧಿಕಾರ ನಮಗೆ ಇದೆ…ನಮ್ಮ ರಕ್ಷಣೆ ಬಾರ ನಮ್ಮದು.
ಮೊದಲು ಇಂಥಾ ಮೂರ್ಖನ ಮಮರ್ಾಂಗವನ್ನು ಕತ್ತರಿಸಿಬಿಡಿ. ಇನ್ನೂ ಆ ಪಾಪಿ ಜೀವಂತವಾಗಿ ಇದ್ದರೆ…ಈ ಸಮಾಜದಿಂದ ಬಹಿಷ್ಕಾರ ಹಾಕಿಬಿಡಿ…ಗಡಿಪಾರು ಮಾಡಿಬಿಡಿ…ಇವನು ಅತ್ಯಾಚಾರಿಯೆಂಬ ಹಣೆ ಪಟ್ಟಿಯನ್ನು ಹಚ್ಚೆ ಹಾಕಿಸಿ ಬಿಡಿ…ಹೆಣ್ಣುಮಕ್ಕಳಲ್ಲಿ ಕುರುಣಾ ಮನೋಭಾವ ಕಡಿಮೆಯಾಗಲಿ. ಇಂಥವರಿಗೆ ಒಮ್ಮೆ ಈ ರೀತಿಯ ಶಿಕ್ಷೆ ಕೊಟ್ಟು ನೋಡಿ…ಇಡೀ ಸಮಾಜದಲ್ಲಿ ಇದು ನಡದೇ ನಡೆಯುತ್ತೆ ಹೆಣ್ಣಿಗೂ ಭದ್ರತೆ ಸಿಗುತ್ತದೆ.
ನಮ್ಮ ಹಳ್ಳಿಯ ಕಡೆ ಕೊಬ್ಬಿದ ಹೊರಿಗಳಿಗೆ ಮಾಡುತ್ತಾರಲ್ಲ!… ಹಾಗೆ ಇವರಿಗೂ ಮಾಡಬೇಕು. ಇದು ನೋಡಿರುವವರಿಗೆ ಮತ್ತು ಕೇಳಿರುವವರಿಗೆ ಗೊತ್ತಿರುತ್ತದೆ. ಅದನ್ನ ಹೇಳುಲು ನಮಗೆ ಇಂದು ನಾಚಿಕೆಯಾಗುತ್ತಿಲ್ಲ ಬದಲಾಗಿ ಅತ್ಯಾಚಾರಿಯ ವಿರುದ್ಧ ಕ್ರೂರತೆ ತುಂಬಿದೆ. ಇಂತಹ ಘಟನೆಗಳು ನಡೆದಾಗ ನಮ್ಮ ಹೆಣ್ಣು ಮಕ್ಕಳು ಅನುಭವಿಸುವ ಯಾತನೆಯನ್ನು ಅವನೂ ಅನುಭವಿಸಲಿ. ಈ ರೀತಿ ಒಂದು ಐದಾರು ಪ್ರಕರಣಗಳಾದರೆ ಸಾಕು ಈ ಅತ್ಯಾಚಾರವನ್ನು ಮಟ್ಟ ಹಾಕಬಹುದು. ಅತ್ಯಾಚಾರಕ್ಕೆ ಕೈ ಹಾಕುವವನಲ್ಲಿ ನಡುಕ ಹುಟ್ಟಬೇಕು. ಆ ಮಟ್ಟದಲ್ಲಿ ಬದಲಾವಣೆಯಾಗಬೇಕು. ಅತ್ಯಾಚಾರಿಯ ಮನೆಯವರೇ ಮೊದಲು ಶಿಕ್ಷೆ ಕೊಡಲು ಮುಂದಾಗಬೇಕು. ಅಂಥಾ ರಾಕ್ಷಿಸೀ ಪ್ರವೃತ್ತಿಯ ಮಗನಾಗಲಿ, ಗಂಡನಾಗಲಿ, ಮುದಕನ್ನನ್ನಾಗಲೀ ನೀವೆ ಕೊಂದು ಬಿಡಿ. ಬರೀ ಚಚರ್ೆಗಳು ನಡೆಯುತ್ತಲಿವೆಯೇ ವಿನಃ ಯಾವ ಕಾನೂನಿ ವ್ಯವಸ್ಥೆತೆಯೂ ಆಗುತ್ತಿಲ್ಲ. ಕಾನೂನನ್ನು ನಂಬಿ ಕುಳಿತರೆ ನಮ್ಮ ಮನೆಯ ಹೆಣ್ಣು ಮಕ್ಕಳು ಇಂಥಾ ಕೃತ್ಯಕ್ಕೆ ಬಲಿಯಾಗಿ ಬಿಡುತ್ತಾರೆ.
ಮೊನ್ನೆ ಒಂದು ದೃಶ್ಯ ಮಾಧ್ಯಮದಲ್ಲಿ ಇದರ ಬಗ್ಗೆ ಚಚರ್ೆಯಾಗುತ್ತಲಿದೆ. ಅಲ್ಲಿ ನಮ್ಮ ಪ್ರೇಮಿಳಾ ನೇಸಗರ್ಿಯವರು ಮತ್ತೆ ಮಂಜುಳ ನಾಯ್ಡುರವರು ಆ ಚಚರ್ೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಪುರುಷ ಗಣ್ಯ ವ್ಯಕ್ತಿಗಳೂ, ಚಿಂತಕರೂ ಇದ್ದರೂ ಅವರ ಹೆಸರು ಹೇಳಲು ನನಗೆ ಇಷ್ಟವಿಲ್ಲ, ಬದಲಾಗಿ ದುಖಃವಾಗುತ್ತಿದೆ. ಕಾರಣ ನಮ್ಮ ಪ್ರೇಮಿಳಾ ನೇಸಗರ್ಿಯವರು ಹೇಳಿದರು. ಇಂಥಾ ಕೃತ್ಯವೆಸಗುವ ಕ್ರೂರಿಗೆ ಮೊದಲು ಅವನ ಮಮರ್ಾಂಗವನ್ನ ಕತ್ತರಿಸಬೇಕು…ಎಂದು ಹೇಳಿದಾಗ, ಆ ಚಚರ್ೆಯಲ್ಲಿ ಭಾಗವಹಿಸಿದ್ದ ಪುರುಷರೊಬ್ಬರು ಹೇಳುತ್ತಾರೆ, ಅದು ತಪ್ಪು ನೀವು ಹಾಗೆಲ್ಲಾ ಹೇಳಬೇಡಿ ಎಂದು ಆಕ್ರೋಶಗೊಳ್ಳುತ್ತಾರೆ. ಎಲ್ಲರೂ ಹಾಗೆ ಇಲ್ಲ ಎಂದು ವಾದಿಸುತ್ತಾರೆ. ನಮ್ಮ ಪ್ರೇಮಿಳಾ ನೇಸಗರ್ಿಯವರೂ ಸಹ ಎಲ್ಲರ ಬಗ್ಗೆ ಹೇಳಲಿಲ್ಲ, ಆ ಕೃತ್ಯವೆಸಗಿದ ಕ್ರೂರಿಗೆ ಈ ಶಿಕ್ಷೆ ಕೊಡಬೇಕು ಎಂದು. ಇದರಲ್ಲಿ ತಪ್ಪೇನಿದು? ಗಂಡಿನ ಮಮರ್ಾಂಗ ಏಟು ಬಿಳುತ್ತದೆ ಎಂದಾಕ್ಷಣ ಎಷ್ಟು ಸಿಡಿದಿ ಬಿಟ್ಟಿರಲ್ಲ. ಮುಗ್ದ, ಅಮಾಯಕ, ಆಟವಾಡುವಾಡುವ ವಯಸ್ಸಿನ ಮುಗು, ಅದಕ್ಕೆ ಅತ್ಯಾಚಾರವೆಂಬ ಪದವೇ ಗೊತ್ತಿಲ್ಲ, ಅದರ ಮಮರ್ಾಂಗ ಮೇಲೆ ಕ್ರೂರತೆ ಮಾಡುದ್ದಾನಲ್ಲ ಆ ಪಾಪಿ. ಆ ಕಂದನಿಗೂ ಸಾವಿಕ್ಕೂ ಅಧಿಕ ಪಟ್ಟು ನೋವಾಗಿದೆಯೆಂಬುದು ನಿಮಗೆ ಅರಿವಿಲ್ಲವೇ? ಆ ಮಗುವಿಗೆ ಎಷ್ಟು ನೋವಾಗಿರಬೇಕು, ಅದರ ಮಾನಸಿಕ ಸ್ಥಿತಿ ಹೇಗಿರಬೇಕು. ಅಪ್ಪ-ಅಮ್ಮನ ಹೆಗಲೇರಿ ಕುಳಿತು ಆಟವಾಡು ವಯಸ್ಸದು, ಇದರ ಅರಿವು ನಿಮಗಿದ್ದಿದ್ದರೆ, ನೀವುಗಳು ಈ ರೀತಿ ಮಾತನಾಡುತ್ತಿರಲಿಲ್ಲ. ನಾಚಿಕೆಯಾಗಬೇಕು ನಿಮಗೆ…ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಈ ರೀತಿಯಾದಾಗ ನೀವು ಸುಮ್ಮನಿರಿ ಸ್ವಾಮಿ ನೋಡೋಣ. ನಿಮ್ಮ ಮನೆಯ ಪುಟ್ಟ ಪಾಪುವನ್ನು ಆ ಜಾಗದಲ್ಲಿ ಒಮ್ಮೆ ಊಹಿಸಿಕೊಳ್ಳಿ, ಆಗ ಆ ನೋವಿನ ವ್ಯಥೆ ನಿಮಗೆ ತಿಳಿಯುತ್ತದೆ. ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಲೂ ಸಹ ಬಾರದ ವಯಸ್ಸಿನ ಮುಗ್ದ ಕಂದಮ್ಮನದು. ಅಮ್ಮ ನನಗೆ ಅಣ್ಣ ಅಬ್ಬು ಮಾಡಿದ ಎಂದು ಆ ಜಾಗವನ್ನು ತೋರಿಸಿರೆ ಆ ತಾಯಿ ಕರುಳು ಎಂಥಾ ಆಘಾತಕ್ಕೆ ಒಳಗಾಗಿರಬೇಡ. ಆ ಮಗುವನ್ನು ತಪಾಸಣೆಗೆಂದು ಕರೆದ್ಯೋದಾಗ, ಅತ್ಯಾಚಾರವೆಸಗಿದ ಮನೆಯ, ಹುಡುಗನೊಬ್ಬ ಬಂದು ಡಾ|| ಹತ್ತಿರ ಹೇಳುತ್ತಾನಂತೆ, ಈ ಕೃತ್ಯವನ್ನು ನಾವು ಮಾಡಿದಲ್ಲ, ಅವರೇ ಅಲ್ಲಿಗೆ ಚುಚ್ಚಿದ್ದಾರೆ ಎಂದರಂತೆ. ಈ ವಿಷಯ ಕೇಳೀ ಮಗುವಿನ ಮನೆಯವರಿಗೆ ಎಷ್ಟು ಆಘಾತ, ನೋವು, ದುಃಖ, ಆಕ್ರೋಶವಾಗಿರಬೇಡ. ಇದೆಲ್ಲ ನಿಮಗೆ ತಿಳಿಯಬೇಡವೇ? ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಬಡಬಡಿಸಬಹುದೇ? ಆದರೂ ನಮ್ಮ ವೀಕ್ಷಕ ಬಂಧುಗಳು, ಅವರ ಮೇಲೆ ಸಿಡದೆದ್ದರು. ಎಲ್ಲಾ ಗಂಡಸರನ್ನೂ ನಾವು ಹೇಳುತ್ತಿಲ್ಲ. ಎಷ್ಟೋ ಗಂಡಸರು ನಮ್ಮ ಪರ ವಹಿಸಿ ಹೋರಾಟಕ್ಕಿಳಿದ್ದಿದ್ದಾರೆ. ಅವರಿಗೆಲ್ಲಾ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು. ಇನ್ನೂ ಒಟ್ಟಾಗಿ ಮುಂದೆ ಬನ್ನಿ.
ಒಟ್ಟ್ಟಾರೆ ಹೇಳುವುದಾದರೆ ನಮ್ಮ ಹೆಣ್ಣು ಜಾತಿಯೇ ಸಿಡಿದು ನಿಲ್ಲಬೇಕು. ‘ಅತ್ತ ಮಗುವಿಗೆ ಹಾಲು ಕೊಡದ ಈ ಸಮಾಜದ, ಅಳದ ಮಗುವಿಗೆ ಹಾಲು ಕೊಡುವುದೇ’ ನಾವೇ ಮುಂದಾಗಬೇಕು ನಮ್ಮ ಹಕ್ಕನ್ನು ಚಲಾಯಿಸಬೇಕು. ಇಲ್ಲಾ ಸಕರ್ಾರವೇ ಮುಂದಾಗಿ ಇಂಥಾ ದುರುಳರನ್ನು ಕಂಡಲ್ಲಿಯೇ ಗುಂಡು ಹಾರಿಸಿ, ಎನ್ ಕೌಂಟರ್ ಮಾಡಿಬೇಕು. ಆಗಲೆ ನಮ್ಮ ಹೆಣ್ಣು ಮಕ್ಕಳು ಈ ಸಮಾಜದಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯ…
 
ಮೌನ
ಮಾತಿಲ್ಲ ಮೌನವೇ ಎಲ್ಲ,
ಭಾರವಾಗಿದೆ ಎದೆಯಲ್ಲ
ಹೆಣ್ಣಾದೆನೆಂದು ಮಿಡಿಯುತಿದೆ ಹೃದಯ ದಿನವೆಲ್ಲ
ನೂರೆಂಟು ನೋವುಗಳ ಬುಗ್ಗಿ,
ಅಂತರಾಳದಿ ಉಕ್ಕಿ ಮುನ್ನುಗ್ಗಿ
ಕಾಮಾಂಧರ ಕ್ರೂರತೆಗೆ ಬಲಿಯಾಗಿ,
ಕಣ್ಣಲ್ಲಿ ಕಾಣುತಿವೆ ನೋವುಗಳೇ ಜಗ್ಗಿ
ಮಡದಿಯಾಗಿ ಹೆಣ್ಣುಬೇಕು,
ಅಕ್ಕ-ತಂಗಿ, ಅಮ್ಮ, ಅತ್ತಿಗೆಯಾಗಿ
ತೃಷೆಯ ತೀರಿದಿಕೊಳ್ಳಲು ಮೃಗಗಳಾಗಿ,
ಹೆಣ್ಣು, ಮುಗ್ದ ಮಕ್ಕಳು, ಮುದುಕರ ಮೇಲೆರಗುವಿರೇಕೆ?
ಹೆಣ್ಣಿನ ಮನವನ್ನೆಲ್ಲ್ಲ ಅಗ್ನಿಕುಂಡಮಾಡುವಿರೇಕೆ?
ಸಾಕು ನಿಲ್ಲಿಸಿ ಉಸಿರುಕಟ್ಟಿಸುವ ಭೀಕರತೆಯ
ಭೀಭತ್ಸ ಚಿರಾಟ ನಿಲ್ಲಲಿ ಸಮಾಜದಲ್ಲಿ…
 

‍ಲೇಖಕರು G

22 July, 2014

6 Comments

  1. Rudranna

    good article.

  2. Nandhu kv

    Athyaachaara esagida ayoghya yaava gande irali, swatsha samajadalli janara naduve badukalu anarha! Avanige nijakkoo shikshe aagale beku…adoo aaropa saabithaada marukashnave, jananibida sthaladalle…matthondu gandina edhe nadugisuvastu krooravaage kaanoonina chaukattinalle shikshisabeku…
    Aavesha aakrosha baritha ee lekana arthapoorna. Eegina samaajakke avashya, agathya kooda….
    hennina badukige dairya thumbuva nimme kare ellaranoo talupali, ondu marpaadige naandi aagali sujatharavare… Abhinandanegalu

  3. Anonymous

    Maatu baridaagi mana mookavagi roodisuttide..

  4. sujatha

    ಮೆಚ್ಚಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು…

  5. N RAVIKUMAR

    Yes, of course it’s a burning problem.
    – Because our society which is invariably dominated by male. This issue not being addressed properly. It is sad that whoever commenting on this issue says that this is being there for so many centuries.
    – Unfortunately even in our puranas and epics like Ramayana, Mahabharatha this act of rape and kidnapping of women happened and which are referred to by everybody.
    – People won’t realize that these incidents are only shown to discriminate the good and the bad.
    – A feeling is there that Indian women always live in fear of violence of one or other. Out of that this is an ‘HENIOUS ACT.’
    – Men should make to think that, they do not have any right on any women of any kind. They should learn to respect the feelings of women and protect them from these evils by following MORALITY. This is very important and the basic quality expected by a woman.
    – Women should know that the world is not civilized as she thinks. Though status of equality, equality in gender are to be encouraged to form a respectable and purposeful society. The society has not accepted it yes so easily.
    – “A strong and effectively forcible law is the solution to act against this heinous crime. As discussed in may forums if the law constituted and applied effectively by punishing culprits could be the remedy for this Act.
    – “FINALLY WOMEN ARE THE ONLY CURE FOR THIS. I URGE THEM TO FIGHT FROM WITHIN BY STRONG WILL POWER AND NOT TO WAIT FOR GOVERNMENTS OR ANYBODY TO COME TO THEIR RESCUE BY SENDING MORE WOMEN TO ELECTED BODIES.

  6. Devraj

    Satya idu hennanna bogisuttale bandide prapancha idakke dikkaraverali

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading