-ಸುಧನ್ವ ದೇರಾಜೆ
ಪರಿಮಳ ಮ್ಯಾಚಿಂಗ್ ಸೆಂಟರ್
ಜಗತ್ತಿನ ಅತಿ ದೊಡ್ಡ
ಮ್ಯಾಚಿಂಗ್ ಸೆಂಟರ್ ನಡೆಸೋ ದೇವರೇ
ಹೌಹಾರೋ ಮ್ಯಾಚಿಂಗ್ ಸೆಂಟರ್ ಇದು
ಪರಿಮಳ ಮ್ಯಾಚಿಂಗ್ ಸೆಂಟರ್ !
ಸಿಟಿಯ ವೆಹಿಕಲ್ ಗಳ ಹೊಗೆಯ ಕಮಟು
ಊರಿನ ಒಲೆಯ ಹೊಗೆಯ ಗಂಧ
ಮ್ಯಾಚ್ ಮಾಡೋಕೆ ಸಾಧ್ಯವಾ?!
ಎಳೆ ಸೌತೇಕಾಯಿ, ಮಂಗಳೂರು ಮಲ್ಲಿಗೆ
ಕೆಂಚು ಕೆಂಡಸಂಪಿಗೆ ತೆಂಗಿನೆಣ್ಣೆ ಘಮವ
ಮ್ಯಾಚ್ ಮಾಡೋಕೆ ಸಾಧ್ಯವಾ?
ರಿನ್ ಸೋಪಿನ ಪರಿಮಳದಲ್ಲಿ
ಹಾಸ್ಟೆಲ್ ದಿನಗಳ ನೆನಪು
ಆ ಸುಗಂಧ ದ್ರವ್ಯದ ಘಮಲಲಿ
ದೂರವಾದ ಅವಳ ನೆನಪು
ಮ್ಯಾಚ್ ಮಾಡೋಕೆ ಸಾಧ್ಯವಾ?
ಬಸವನಗುಡಿಯ ಯಾವುದೋ ಅಡ್ಡ ರಸ್ತೇಲಿ
ನೇತಾಕಿದ್ದ ಬ್ಲೌಸ್ ಗಳ ಮಧ್ಯೆ ಕಂಡ ಬೋರ್ಡು
ಪರಿಮಳ ಮ್ಯಾಚಿಂಗ್ ಸೆಂಟರ್ !






Lovely!!