
ಕೆ ಜೆ ಕೊಟ್ರಗೌಡ ತೂಲಹಳ್ಳಿ
ಪೋಲಿಯಾಗಿ ಬಿಡಬೇಕು
ಯಾವ ಶಿಲಾಬಾಲೆಯೂ
ಎದುರುಗೊಳ್ಳದ ಕಾರಣ
ಅತೀ ಆಸೆಯ ಹೊಂದಿಯೂ
ಅಮಾಯಕತೆಯ
ಪ್ರದರ್ಶನಕೆ
ಯಾವ ಬೆಲೆಯೂ
ದೊರಕದು
ಮೋಹ
ಇದಿರುಗೊಳ್ಳದ ದಿನ
ಪ್ರಾಯ
ಅಂತಿಮವಾಗಿರುತ್ತದೆ!
ನಗ್ನವಾಗಿ ಬಿಡುವುದೇ
ಕಟ್ಟಕಡೆಯ ತೃಪ್ತಿಯಾಗಿದ್ದರೆ
ಯಾವ ಪ್ರೇಮವೂ ಬೆಸೆಯುತ್ತಿರಲಿಲ್ಲ
ಜಾಲಿ ಎಲೆಯಾದರೂ
ಯಾವ ಚಿಟ್ಟೆಯೂ ಮಕರಂದ ಹೀರದು!

ಕಾಮದ ಬಾಗಿಲು
ಮೋಹವೆ ಆಗಿದ್ದರೂ
ಪ್ರೇಮದ ಬಂಧ
ಸುಲಭವಾಗಿ ದಕ್ಕಿಸದು
ತರಹೇವಾರಿ ನೋಟಗಳ
ನೋಡಿಸದೇ…
ಇಲ್ಲಿ
ಪ್ರಾಮಾಣಿಕ ನೋಟವನ್ನು
ಕಲುಷಿತ ಮಾಡುವರು ಫಕೀರ
ಪ್ರೇಮದ ಬೇಲಿಯ ದಾಟಿ
ಕಾಮ ಕುಣಿಯುವ ದಿನಮಾನಗಳಿವು
ನಿನ್ನ ಅಮಾಯಕ ಮೊಗದ ಮುಂದೆ
ಯಾವ ಮೇನಕೆಯೂ ಕಾಣಳು
ಹೊರಬರುವವರೆಗೂ….
ಲೋಕದ ಕಣ್ಣು
ಕಮರಿಟ್ಟು ನಾರುತಿದೆ ಫಕೀರ
ಆದ್ದರಿಂದ…






0 Comments