ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಆರ್ ಭಗವತಿ ಕವಿತೆ: ಮೋಹಗೊಂಡೆ

ಎಂ ಆರ್ ಭಗವತಿ

ಅಲ್ಲಿ ಹುಟ್ಟುವ ಗಾಳಿಗೆ ಇನ್ನೊಂದು ಹೆಸರಿಡೋಣ…

ಕೃಪೆ: ಕನ್ನಡಪ್ರಭ

ಏಕೆಂದರೆ   ಅದು ನಿನ್ನ ಕನವರಿಸಿದ ಸರಿರಾತ್ರಿ ನೀನು ಸಾವಕಾಶ ನಡೆದು ಬರುವಾಗ ದೀವಟಿಗೆಯ ಬೆಳಕು ಓಣಿಯಲ್ಲಿ !   ದೊಂದಿ ಹಿಡಿದ ಮಂದಿ ಕಾಡಿನ ದಾರಿಯಲ್ಲಿ ನಿನ್ನ ಹಿಂದೆ ನಡೆದು ಬರಬಹುದಿತ್ತು ಆನಭಿಷಕ್ತ ರಾಣಿಯಂತೆ ಧರೆಯಲ್ಲಿ ಮೆರೆವ ದೇವತೆಯಂತೆ ಗಾಂಭೀರ್ಯದ ನಗುವಿನಂತೆ, ಘನತೆವೆತ್ತ ಅಳುವಿನಂತೆ !   ಹಾಗೆ ನಾನು ನೋಡುವಾಗ, ಹತ್ತಿರ ಸುಳಿದೆ ತಂಗಾಳಿಯಂತೆ ಮೆಲ್ಲಗೆ ಬಂದೆ ಮೋಂಬತ್ತಿಯಲ್ಲಿ ಸರಿವ ಸಾದಾ ಬೆಳಕಿನಂತೆ ಬೆದರಿದ ಹುಲ್ಲೆಯಂತೆ ದೀವಟಿಗೆಯ ಸರಿಸಿದೆ ಸಾವಕಾಶ ನ ಡೆ ದು ಬಂದೆ ಕಾರ್ತೀಕದ ಬೆಳಕಿನಂತೆ   ನೀನು ಸಾವಾಕಾಶ ನಡೆದು ಬರುವಾಗ ದೀವಟಿಗೆಯ ಬೆಳಕು ಓಣಿಯಲ್ಲಿ   ದೀವಟಿಗೆ ಹತ್ತುಪಟ್ಟು ಉರಿಯಿತು !!  ]]>

‍ಲೇಖಕರು G

3 July, 2012

2 Comments

  1. shanthi k.a.

    nice..

  2. D.RAVI VARMA

    ನೀನು
    ಸಾವಾಕಾಶ ನಡೆದು ಬರುವಾಗ
    ದೀವಟಿಗೆಯ ಬೆಳಕು
    ಓಣಿಯಲ್ಲಿ
    ದೀವಟಿಗೆ ಹತ್ತುಪಟ್ಟು ಉರಿಯಿತು !!
    ಕಾವ್ಯ ಹೇಳಿಕೆಗಲಾಗದೆ ಅದು ಜೀವಸೆಲೆ ಯಂತಾದಾಗ ಅದು ಮನಮುಟ್ಟುತ್ತದೆ, ಒಂದಿಸ್ತು ಥ್ರಿಲ್ಕೊಡುತ್ತದೆ . ನಿಮ್ಮ ಕಾವ್ಯ ನನಗೆ ಕುಶಿ ನೀಡಿತು .
    ರವಿ ವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading