ಕಾರಣವಿಲ್ಲದೆ..
ಷಡಕ್ಷರಿ ತರಬೇನಹಳ್ಳಿ
ಕಂಪಿಸಿತ್ತು
ಅಲೆಯಿಲ್ಲದೇ,
ಉಕ್ಕೇರಿತ್ತು
ಉಬ್ಬರವಿಲ್ಲದೇ,
ಸುಳಿಯುಟ್ಟಿತ್ತು
ನಿರ್ವಾತವಿಲ್ಲದೇ,
ಮಳೆ ಸುರಿದಿತ್ತು
ಮೋಡವಿಲ್ಲದೇ,
ಜಲಪಾತ ಧುಮ್ಮಿಕ್ಕಿತ್ತು
ನದಿಯಿಲ್ಲದೇ,
ಬೀಜ ಉದುರಿತ್ತು
ಮರವಿಲ್ಲದೇ,
ಮೊಳಕೆ ಚಿಗುರಿತ್ತು
ನೆನೆದ ನೆಲವಿಲ್ಲದೇ,
ಹಸಿವು ನೀಗಿತ್ತು
ಹೊಟ್ಟೆಯಿಲ್ಲದೇ,
ಬಂಧನಕ್ಕೊಳಗಾಗಿದ್ದೆವು
ಭೇಟಿಯಾಗದೇ,
ಪ್ರೀತಿ ನನಸಾಗಿತ್ತು
ಕನಸುಕಾಣದೇ,
ಇಬ್ಬರೂ ಸೋತು, ಗೆದ್ದಿದ್ದೆವು
ಯುಧ್ಧವಿಲ್ಲದೇ,
ಕಾರಣ ನಕ್ಕಿತ್ತು
ಸೂಕ್ಷ್ಮ ಸ್ಥೂಲಗಳ ತಿಳಿವಿಲ್ಲದೇ







tumbaa chennaagide..
thanks …