ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದಲ ಪ್ರೇಮ, ಬಚ್ಚಿಟ್ಟ ಕಾಮ..

ಕಣಿವೆಯ ಗೀರು ಮತ್ತು ಹುಟ್ಟು ..

ರಮೇಶ್ ನೆಲ್ಲಿಸರ.

ಅಂತಿಂಥ ಕನಸಲ್ಲ!
ಅತ್ತರೂ ಕಣ್ಣೀರಿನ ಪಸೆಯಿಲ್ಲ
ರಾಶಿ ಚಿತ್ರಗಳ ಹಿಮ್ಮುಖ ಚಲನೆ
ಬಗೆದಷ್ಟು ಇತಿಹಾಸ
ಇಸವಿಗಳ ಗೋರಿಯೊಳಗೆ ಅದೇ ಕತ್ತಲು

ಮೊದಲ ಪ್ರೇಮ ಬಚ್ಚಿಟ್ಟ ಕಾಮ
ಬಿಟ್ಟೂ ಬಿಡದೆ ಸುಡುವ ಉರಿ
ಬೂದಿಯಿಲ್ಲ ಬರಿ ಹೊಗೆ
ಹೇಳದೆ ಉಳಿಸಿದ್ದ ನುಡಿಗಳು
ನಾಲಿಗೆಯ ಸೀಳಿ, ಮತ್ತೆ ಅಂತರ್ದಹನ
ನನ್ನದೇ ಮುಖವಾಡ.

ವಂಶವಾಹಿನಿಗಳ ಸಾಲಿನಲ್ಲಿ
ತಾತ,ಅಜ್ಜ ಇನ್ಯಾರೋ ಅಪರಿಚಿತ
ಅನೈತಿಕ ಗೀರು
ನಾನು ನಾನೊಬ್ಬನೇ ಅಲ್ಲ
ನೂರಾರು ಪ್ರತಿಬಿಂಬ.

ಅಜ್ಜನ ಗಿರಿವಿಯಿಟ್ಟ ಹೊಲ
ಬೆಳೆದಿದ್ದೆಲ್ಲ ಬೆಳೆ
ಬೀಜ ಕಟ್ಟದ ಫಲ
ಹಸಿರು ಬರಡು.

ನಾನೇ ಹುಟ್ಟಿದ್ದು ಒಳೊಗೊಳಗೆ
ತಳಿಸಂಕರಣ
ಮೈಯೆಲ್ಲಾ ಮೊಗ್ಗು ಸೀಮಂತ
ಜೀವಕೋಶಗಳ ಸಂತೆ
ಮತ್ತವೇ ಕಣ್ಣು,ಕಣಿವೆ
ಉಬ್ಬು ತಗ್ಗು

ನನ್ನೊಳಗೊಬ್ಬ ಮತ್ತೆ ಹುಟ್ಟುವ ಧಾವಂತ…

 

‍ಲೇಖಕರು Admin

18 January, 2016

4 Comments

  1. ಮಂಜುವಾಣಿ

    ತುಂಬಾ ಚೆನ್ನಗಿದೆ.

  2. Pavana Bhoomi

    ಚನ್ನಾಗಿದೆ

  3. deepthi

    very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading