ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದಲೆಲ್ಲ ಅಜ್ಜ ದನ ಕಾಯಲು ಹೋಗುತ್ತಿದ್ದ

ಮಲೆನಾಡ ದೀಪಾವಳಿ…

ಅರುಣ್ ಕೊಪ್ಪ 

ಮೊದಲೆಲ್ಲ ಅಜ್ಜ ದನ ಕಾಯಲು ಹೋಗುತ್ತಿದ್ದ
ದನಕೆ ಮೆಂದು ಕುತ್ತ ಆದಾಗೆಲ್ಲ ಸುತ್ತಾಗಿ ದನಬಯಲಿನಲ್ಲಿ ಮಗ್ಗುಲು ಊರುತಿದ್ದವು, ಆಗಲೇ ಕವಲು ಮರದ ಚಮಡಾ ಸುಲಿಯುತಿದ್ದ…

ಕೊರೆ  ಬೀಡಿ ಸೇದು ಚಿಕ್ಕಲುಪಟ್ಟೆ ಹೊಡೆದು ಕೂರುತಿದ್ದ, ಒಂದೊಂದೇ ದಾರ ಎತ್ತಿ
ಹದಗೊಳಿಸಿ ತೊಡೆಯಲಿ ಹೊಸೆದು ರೂಪ ಕೊಡುತ್ತಿದ್ದ
ಗಂಗೆ ಗೌರಿ ಆಕಳಿಗೆ ನೆಕ್ಲೆಸ್ ಉಡಿಯುತಿದ್ದ…

ಇತ್ತ ಅವ್ವ ಮನೆಯ ಕರಿ ಹೊಡೆದು
ಕಿಳ್ಳು ಗೋಡೆಗೂ ಬಿಡದೆ ಹಳದಿ ಮಣ್ಣು ಬಡಿಯುತ್ತಿದ್ದಳು, ಬಣ್ಣವಿಲ್ಲದ ಆ ದಿನಗಳೂ
ಹುರುಪನ್ನು ಇಮ್ಮಡಿಸುತ್ತಿದ್ದವು…

ಮನೆಯಲ್ಲೇ ಹೂದೋಟದ ಗೊಂಡೆ, ಗೋಟೆ, ಅಬ್ಬಲಿಗೆ, ಮಲ್ಲಿಗೆ, ಗುಲಾಬಿ, ಗೌರಿ ಹೂಗಳು
ಹಬ್ಬದ ಗೋವಿಗೆ ಮಾವಿನ ಟೊಂಗೆಯ ಹಾರ
ಎತ್ತಿನ ಕೋಡಿಗೆ ಬಣ್ಣದ ರಿಬ್ಬನ್, ಜೂಲು ಗೊಂಡೆ

ಇನ್ನು ನಗರದಲ್ಲೆಲ್ಲ ಅಂಗಡಿ ಮುಗ್ಗಟ್ಟುಗಳಿಗೆ ಪೂಜೆ
ಪಟಾಕಿ, ಸ್ವೀಟು, ಹೊಸ ನಾಮಫಲಕ ಹೂವನ್ನು
ಮಲಗಿಸಿ ಹೊದಿಸುತ್ತಿದ್ದರು
ವಾಹನ ಪೂಜೆ ಈಗಲೂ ಲಿಂಬು ಹತ್ತಿಸುವಾಗಲೂ ಸಡಗರ

ಮನೆಯ ಗುಡಿಯ ಗರ್ಭ ಬಾಗಿಲು ಎಡ-ಬಲಕೂ
ದೀಪಗಳು ಕರೆಯುತಿವೆ… ಅಕ್ಕ ತಂಗಿಯರೆಲ್ಲ ಮಿಂದು
ಹೊಸ ಕುಪ್ಪಸದಿ ಸೀರೆ ಉಟ್ಟು ಗುದ್ದು ಬಿಳ್ಳುವ ಕೆನ್ನೆಯಲಿ ರಂಗೋಲಿ ಚೆಲ್ಲುವರು

ಕಡುಬು ಉಗಿಯಲಿ ನಾಕ ಆಹ್ಲಾದಿಸುತಿದೆ
ಹೋಳಿಗೆ ತುಪ್ಪ, ಪಾಯಸ, ಸವಿಯಲು
ಅಡಕೆ-ಸಿಂಗಾರ, ಪಚ್ಚತೆನೆ, ಚಪ್ಪೆ ರೊಟ್ಟಿ ಪೋಣಿಸಿ
ಮಾಲೆಯು.. ಮಲೆನಾಡ  ಹೋರಿಗೆ ಹೂ  ಬಾಸಿಂಗ

‍ಲೇಖಕರು avadhi

29 October, 2019

2 Comments

  1. Nandan jeenkeri

    ಗದ್ಯ ರೂಪಿ ಕವಿತೆ ಮಸ್ತ್ ಇದೆ ಅರುಣ್ ಬಾವಾ

  2. T S SHRAVANA KUMARI

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading