-ಸಿಸು ಸಂಗಮೇಶ
ಚಿತ್ರ: ಪ ಸ ಕುಮಾರ್
ಮಗು;- ಇರುವೆ ಇರುವೆ ಕರಿಯ ಇರುವೆ
ನಾನು ಜೊತೆಗೆ ಬರುವೆ.
ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ
ಇರುವೆ: ಮಳೆಯ ಕಾಲ ಬರುತಲಿಹುದು
ನನಗೆ ಸಮಯವಿಲ್ಲ.
ಅನ್ನ ಕೂಡಿ ಹಾಕಿ ಇಟ್ಟು ಕರೆಯ
ಬರುವೆನಲ್ಲ
ಮಗು: ನಾಯಿಮರಿ ನಾಯಿಮರಿ
ನಿನ್ನ ಜೊತೆಗೆ ಆಡುವೆ.
ಕುಂಯ್ ಕುಂಯ್ ರಾಗ ಕಲಿಸು ನಿನ್ನ
ಹಾಗೆ ಹಾಡುವೆ.
ನಾಯಿ: ಆಡಲಿಕ್ಕೆ ಹಾಡಲಿಕ್ಕೆ
ನನಗೆ ಸಮಯವಿಲ್ಲ.
ಅನ್ನ ಹಾಕಿದವನ ಮನೆಯ
ಕಾಯುತಿರುವೆನಲ್ಲ
ಮಗು: ಜೇನು ಹುಳುವೆ ಜೇನು ಹುಳುವೆ
ಎಲ್ಲಿ ಹೋಗುತಿರುವೆ.
ಕರೆದುಕೊಂಡು ಹೋಗು ನನ್ನ
ನಿನ್ನ ಜೊತೆಗೆ ಬರುವೆ.
ಜೇನುಹುಳು : ಬನವ ಸುತ್ತಿ ಸುಳಿದು ನಾನು
ಜೇನನರಸಿ ತರುವೆ
ಈಗ ಬೇಡ ಚೈತ್ರ ಬರಲಿ
ಆಗ ನಾನು ಕರೆವೆ
ಮಗು: ಕೂಹೂ ಕೂಹೂ ಕೂಗುತಿರುವ
ಮಧುರ ಕಂಠ ಕೋಗಿಲೆ
ಎಲೆಯ ಬಲೆಯ ನೆಲೆಯೊಳಿರಲು
ನಾನು ಜೊತೆಗೆ ಬರುವೆ
ಕೋಗಿಲೆ: ಕಾಕದೃಷ್ಟಿ ತಪ್ಪಿಸಲ್ಕೆ
ಹೊಂಚಿನಲ್ಲಿ ಇರುವೆ
ಚೈತ್ರ ಕಳೆಯೆ ಒಂಟಿ ಇರುವೆ
ಆಗ ಕರೆಯ ಬರುವೆ
ಮಗು: ಯಾರೂ ಇವರು ನನ್ನ ಕೂಡ
ಆಡಲಿಕ್ಕೆ ಒಲ್ಲರು
ತಮ್ಮ ತಮ್ಮ ಕೆಲಸದಲ್ಲಿ ವೇಳೆ
ಕಳೆವರೆಲ್ಲರು
ಅವರ ಹಾಗೆ ಮೊದಲು ನನ್ನ ಕೆಲಸ ನಾನು
ಮಾಡುವೆ
ಓದು ಬರಹ ಮುಗಿಸಿಕೊಂಡು ಸಮಯ
ಉಳಿಯೇ ಆಡುವೆ.





bachpun ke din bhulaana dEnaa
Nice cartoon
🙂
malathi S
Sorry Not cartoon
it should be ‘nice illustration’
🙂
malathi S
ಬಾಲ್ಯ ನೆನಪಿಸಿದಕ್ಕೆ ಥ್ಯಾಂಕೂ…
Ea kavana odi matte 28 varsha hindakke hode.
-kaligananath gudadur