ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..

ಇದು ಚಂದ್ರಶೇಖರ ಕಂಬಾರರ ಸಾಲು. ನಮ್ಮದೂ ಅದೇ ಸೊಲ್ಲು.

ಸರಿಯಾಗಿ 14 ವರ್ಷಗಳಿಂದ ನಮ್ಮ ಕೈಹಿಡಿದು ಬಂದ ನಿಮಗಲ್ಲದೆ ಇನ್ನಾರಿಗೆ ಮೊದಲ ಶರಣಾರ್ಥಿ ಸಲ್ಲಬೇಕು.

ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ  ಕುಳಿತು ಜಗತ್ತಿಗೊಂದು ಕಿಟಕಿ ರೂಪಿಸಿಕೊಳ್ಳಬೇಕು ಎಂದು ಹೊರಟ ನಮಗೆ ಕಂಡಿದ್ದು ಈ ‘ಅವಧಿ’ ಎಂಬ ಬೆಳಕಿಂಡಿ.

‘ಅನಾಮಿಕ’ವಾಗಿ ಆರಂಭವಾದ ಈ ಬ್ಲಾಗ್ ಒಂದು ವರ್ಷದ ನಂತರ ಹೆಸರನ್ನು ಹೊತ್ತು ಮುನ್ನಡೆಯಿತು.

ಬ್ಲಾಗ್ ಇದ್ದದ್ದು ವೈಬ್ ಸೈಟ್ ಆಯಿತು.

14 ವರ್ಷದ ಉಸಿರಾಟವನ್ನು ಎದೆಯೊಳಗಿರಿಸಿಕೊಂಡಿರುವ ಈ ‘ಅವಧಿ’ ಈಗ ಅತ್ಯಂತ ಸುರಕ್ಷಿತವಾದ, ವೇಗವಾದ, ವಿಶಾಲವಾದ ತಂತ್ರಜ್ಞಾನ ಕಕ್ಷೆಗೆ ತನ್ನನ್ನು ಒಡ್ಡಿಕೊಂಡಿದೆ.

ಹಾಗಾಗಿಯೇ ಈ ಹೊಸ ರೂಪದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇವೆ.

‘ಅವಧಿ’ಯನ್ನು ಮುನ್ನೆಡೆಸಿದ ನಿರ್ವಾಹಕರುಗಳಿಗೂ..

ಬರಹ, ಚಿತ್ರಗಳ ಮೂಲಕ ಕಸುವು ತುಂಬಿದ ಲೇಖಕರಿಗೂ, ಛಾಯಾಗ್ರಾಹಕರಿಗೂ, ಕಲಾವಿದರಿಗೂ…

14 ವರ್ಷದಿಂದ ಒಂದಿಷ್ಟೂ ಸುಸ್ತು ಎನ್ನದೇ ನಮ್ಮ ಹೆಜ್ಜೆಗೆ ಹೆಜ್ಜೆ ಸೇರಿಸಿದ ನಿಮಗೂ ವಂದನೆಗಳು…

‍ಲೇಖಕರು nalike

22 August, 2020

7 Comments

  1. Vasundhara k m

    ಖುಷಿ ಎನಿಸಿತು. ಅಭಿನಂದನೆಗಳು ಅವಧಿ .

  2. Kotresh T A M

    ಅಭಿನಂದನೆಗಳು ಅವಧಿಗೆ

  3. ಸುರೇಶ.ಎ.ಡಿ

    ಅಭಿನಂದನೆಗಳು ಅವಧಿಗೆ..

  4. ಲಲಿತಾ ಸಿದ್ಧಬಸವಯ್ಯ

    ಅಭಿನಂದನೆಗಳು. ನಮ್ಮ ಸದಭಿರುಚಿಯ “ಅವಧಿ‌” ಬಹುಕಾಲ ನಮ್ಮೊಂದಿಗಿರಲಿ . ಈ ಹೊಸ ಅವತರಣಿಕೆ ಸೊಗಸಾಗಿದೆ. ಯಾವತ್ತೂ ‌ಜನಪರವಾದ, ಅತಿರೇಕಗಳತ್ತ ವಾಲದ‌ ಸಮಚಿತ್ತ ಬರಹಗಳುಳ್ಳ ಅವಧಿಯ ಯಶಸ್ಸಿನ ಹಿಂದೆ ಜಿ ಎನ್ ಮೋಹನ್ ಮತ್ತವರ ಬದ್ಧತೆ , ಶ್ರಮಗಳಿವೆ. ನಿಮ್ಮೆಲ್ಲರಿಗೂ ಅಭಿನಂದನೆಗಳು.

  5. Deshpande Raghavendra

    ಅಭಿನಂದನೆಗಳು ಅವಧಿ…

  6. Shyamala Srikanth

    ಅಭಿನಂದನೆಗಳು ಜಿ. ಎನ್.ಮೋಹನ್ ಸರ್ ಅವರಿಗೆ ಹಾಗೂ ಅವಧಿ ಗೆ ಹೊಸ ರೂಪ ಕೊಟ್ಟ ಎಲ್ಲಾ ಸ್ನೇಹಿತರಿಗೂ.

  7. Vinod Kumar

    ಅವಧಿಗೆ ಮತ್ತು ತಂಡಕ್ಕೆ ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading